153 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ಟಾಟಾ ಸಮೂಹದಲ್ಲಿ ಮಹತ್ವದ ಬದಲಾವಣೆಗೆ ತಯಾರಿ

ದೇಶದ ಖ್ಯಾತ ಉದ್ಯಮ ಸಮೂಹ ಸಂಸ್ಥೆ ಟಾಟಾ ಸನ್ಸ್, ತನ್ನ 153 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಲು ಮುಂದಾಗಿದೆ.

153 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ಟಾಟಾ ಸಮೂಹದಲ್ಲಿ ಮಹತ್ವದ ಬದಲಾವಣೆಗೆ ತಯಾರಿ
Linkup
ಹೊಸದಿಲ್ಲಿ: ಭಾರತದ ಖ್ಯಾತ ಉದ್ಯಮ ಸಂಸ್ಥೆ ಲಿಮಿಟೆಡ್, ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯನ್ನು ಸೃಷ್ಟಿಸುತ್ತಿದೆ. ತನ್ನ ಕಾರ್ಪೊರೇಟ್ ಆಡಳಿತವನ್ನು ಸುಧಾರಿಸುವ ಉದ್ದೇಶದಿಂದ ಅದು ತನ್ನ ನಾಯಕತ್ವ ಸಂರಚನೆಯಲ್ಲಿ ಈ ಮಹತ್ವದ ಬದಲಾವಣೆಗೆ ಮುಂದಾಗಿದೆ. 153 ವರ್ಷಗಳ ಟಾಟಾ ಸನ್ಸ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ನಿಯಂತ್ರಣದ ಉದ್ಯಮ ವಹಿವಾಟು ನಡೆಯಲಿದೆ. ಟಾಟಾ ಸನ್ಸ್ ಅಧ್ಯಕ್ಷರು ಷೇರುದಾರರ ಪರವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಟಾಟಾ ಟ್ರಸ್ಟ್ ಅಧ್ಯಕ್ಷ ಅವರ ಅನುಮೋದನೆ ಈ ಮಹತ್ವದ ಬದಲಾವಣೆಗೆ ಮುಖ್ಯವಾಗಿದೆ. ಟಾಟಾ ಸನ್ಸ್ ಲಿ. ಹಾಲಿ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಅವರ ಅವಧಿಯ ಮುಂದಿನ ಫೆಬ್ರವರಿಯಲ್ಲಿ ಅಂತ್ಯಗೊಳ್ಳಲಿದ್ದು, ಅವರನ್ನು ಮುಂದುವರಿಸುವ ಬಗ್ಗೆ ಚಿಂತನೆ ನಡೆದಿದೆ. ಟಾಟಾ ಸ್ಟೀಲ್ ಲಿಮಿಟೆಡ್ ಸೇರಿದಂತೆ ಟಾಟಾ ಸಮೂಹದ ವಿವಿಧ ಸಂಸ್ಥೆಗಳ ಮುಖ್ಯಸ್ಥರಲ್ಲಿ ಸಿಇಒ ಹುದ್ದೆಗೆ ಅರ್ಹ ವ್ಯಕ್ತಿಯನ್ನು ಹುಡುಕುವ ಪ್ರಯತ್ನ ನಡೆದಿದೆ. ಈವರೆಗೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಸಿಇಒ ಹುದ್ದೆ ಸೃಷ್ಟಿಯ ಯೋಜನೆ ಮತ್ತು ಅದರ ವಿವರಗಳು ಬದಲಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ಟಾಟಾ ಸನ್ಸ್‌ನಲ್ಲಿನ ಈ ಬೆಳವಣಿಗೆಗಳ ಬಗ್ಗೆ ಕಂಪೆನಿ ವಕ್ತಾರರು ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಸಮೂಹದ ಮಾಜಿ ಅಧ್ಯಕ್ಷ, 83 ವರ್ಷದ ರತನ್ ಟಾಟಾ ಅವರು, ಕಂಪೆನಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ವಿಚಾರವಾಗಿ ತಮ್ಮ ಉತ್ತರಾಧಿಕಾರಿಯಾಗಿದ್ದ ಸೈರಸ್ ಪಿ. ಮಿಸ್ತ್ರಿ ಜತೆಗಿನ ಸುದೀರ್ಘ ಕಾನೂನು ಸಂಘರ್ಷ ನಡೆಸಿದ ಬಳಿಕ ಸಿಇಒ ಹುದ್ದೆ ಸೃಷ್ಟಿಗೆ ಕಂಪೆನಿ ಒಲವು ತೋರಿಸಿದೆ ಎಂದು ಹೇಳಲಾಗಿದೆ. ರತನ್ ಟಾಟಾ ಅವರ ನಾಯಕತ್ವವನ್ನು ಎರಡು ದಶಕಕ್ಕೂ ಹೆಚ್ಚು ಕಾಲದ ವಿಸ್ತರಣೆಯ ಬಳಿಕ ಸಂಸ್ಥೆಗೆ ಹೊಸ ದಿಕ್ಕು ರೂಪಿಸಲು ಇದು ನೆರವಾಗಲಿದೆ. ಟಾಟಾ ಟ್ರಸ್ಟ್‌ನಲ್ಲಿ ಅವರು ಶೇ 66ರಷ್ಟು ಪಾಲು ಹೊಂದಿದ್ದು, ಅವರ ನಂತರ ಅದರ ಅಧ್ಯಕ್ಷತೆ ಯಾರ ಪಾಲಾಗಲಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಸಿಇಒ ಹುದ್ದೆಗೇರುವ ವ್ಯಕ್ತಿ ಸಾಕಷ್ಟು ಸವಾಲುಗಳನ್ನು ಎದುರಿಸಲಿದ್ದಾರೆ. ಟಾಟಾ ಸ್ಟೀಲ್ 10 ಬಿಲಿಯನ್ ಡಾಲರ್ ಸಾಲದ ಹೊರೆಯಲ್ಲಿದ್ದರೆ, ಟಾಟಾ ಮೋಟಾರ್ಸ್ ವಾಹನ ಕಂಪೆನಿ 2021ರ ಮಾರ್ಚ್‌ವರೆಗೂ ಸತತ ಮೂರು ವರ್ಷ ನಷ್ಟದಲ್ಲಿದೆ. ಡಿಜಿಟಲ್ ವಲಯದಲ್ಲಿ ಮುಂದುವರಿಯುವ ಹಾಗೂ ಆನ್‌ಲೈನ್ ಶಾಪಿಂಗ್ ಕ್ಷೇತ್ರವನ್ನು ಬಳಸಿಕೊಳ್ಳುವ ಅದರ ಉದ್ದೇಶ ಈಡೇರಿಲ್ಲ.