ಟೆಕ್‌ ದಿಗ್ಗಜ ಮೈಕ್ರೊಸಾಫ್ಟ್‌ ಅಧ್ಯಕ್ಷರಾಗಿ ಭಾರತ ಮೂಲದ ಸತ್ಯ ನಾಡೆಳ್ಳಾ ನೇಮಕ

ಟೆಕ್‌ ದಿಗ್ಗಜ ಮೈಕ್ರೊಸಾಫ್ಟ್‌ನ ಸಿಇಒ ಸತ್ಯ ನಾಡೆಳ್ಳಾ ಅವರಿಗೆ ಅಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ. ಹಾಲಿ ಅಧ್ಯಕ್ಷ ಜಾನ್‌ ಥಾಮ್ಸನ್‌ ನಿವೃತ್ತರಾಗಲಿದ್ದು, ಸ್ವತಂತ್ರ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

ಟೆಕ್‌ ದಿಗ್ಗಜ ಮೈಕ್ರೊಸಾಫ್ಟ್‌ ಅಧ್ಯಕ್ಷರಾಗಿ ಭಾರತ ಮೂಲದ ಸತ್ಯ ನಾಡೆಳ್ಳಾ ನೇಮಕ
Linkup
ಹೊಸದಿಲ್ಲಿ: ಮೈಕ್ರೊಸಾಫ್ಟ್‌ನ ಸಿಇಒ ಅವರಿಗೆ ಅಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ. ಹಾಲಿ ಅಧ್ಯಕ್ಷ ಜಾನ್‌ ಥಾಮ್ಸನ್‌ ಸ್ವತಂತ್ರ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಭಾರತೀಯ ಮೂಲದ ಸತ್ಯ ನಾಡೆಳ್ಳಾ 2014ರಲ್ಲಿ ಮೈಕ್ರೊಸಾಫ್ಟ್‌ನ ಸಿಇಒ ಆಗಿ ನೇಮಕವಾಗಿದ್ದರು. ಮೈಕ್ರೊಸಾಫ್ಟ್‌ನಿಂದ ಲಿಂಕ್ಡ್‌ನ್‌, ನ್ಯೂಯಾನ್ಸ್‌ ಕಮ್ಯುನಿಕೇಶನ್ಸ್‌ ಮತ್ತು ಜೆನಿಮ್ಯಾಕ್ಸ್‌ ಕಂಪನಿಯ ಸ್ವಾಧೀನ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮೈಕ್ರೊಸಾಫ್ಟ್‌ನ ರಚನಾತ್ಮಕ ಬದಲಾವಣೆಗೆ ನಾಡೆಳ್ಳಾ ಗಮನಾರ್ಹ ಕೊಡುಗೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಕೋವಿಡ್‌-19 ಕಾಲಘಟ್ಟದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ್ದಾರೆ ಎಂದು ಆಡಳಿತ ಮಂಡಳಿ ಶ್ಲಾಘಿಸಿದೆ. ''ಉದ್ಯಮದ ಬಗ್ಗೆ ಆಳವಾದ ಪರಿಜ್ಞಾನ, ರಿಸ್ಕ್‌ಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದಲ್ಲಿ ನಾಡೆಳ್ಳಾ ಮುಂಚೂಣಿಯಲ್ಲಿದ್ದಾರೆ'' ಎಂದು ಹೇಳಿಕೆ ನೀಡಿದೆ. ನಾಡೆಳ್ಳಾ ನಾಯಕತ್ವದಲ್ಲಿ ಮೈಕ್ರೊಸಾಫ್ಟ್‌ ವಿಶ್ವದ 2ನೇ ಅತಿ ಹೆಚ್ಚು ಮೌಲ್ಯಯುತ ಸಾರ್ವಜನಿಕ ಕಂಪನಿಯಾಗಿ ಹೊರಹೊಮ್ಮಿದೆ. ಷೇರು ದರ ಶೇ.600ರಷ್ಟು ಹೆಚ್ಚಳವಾಗಿದೆ. ನಾಡೆಳ್ಳಾ ಅವರು ಕಂಪನಿಯಲ್ಲಿ 16 ಲಕ್ಷ ಷೇರುಗಳನ್ನು ಹೊಂದಿದ್ದು, ವೈಯಕ್ತಿಕ ಷೇರುದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಬಿಲ್‌ ಗೇಟ್ಸ್‌ ಮಂಡಳಿಯಿಂದ ನಿರ್ಗಮಿಸಿದ ವರ್ಷದ ನಂತರ ಸತ್ಯ ನಾಡೆಳ್ಳಾ ಅಧ್ಯಕ್ಷರಾಗಿದ್ದು, ಹೆಚ್ಚಿನ ಅಧಿಕಾರ ಗಳಿಸಿದ್ದಾರೆ. 53 ವರ್ಷ ವಯಸ್ಸಿನ ನಾಡೆಳ್ಳಾ ಹೈದರಾಬಾದ್‌ ಮೂಲದವರು. ಕರ್ನಾಟಕದ ಮಣಿಪಾಲದ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ 1988ರಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪೂರೈಸಿದವರು.