ಜಮ್ಮು ಕಾಶ್ಮೀರದಲ್ಲಿ '3 ಕುಟುಂಬ'ಗಳ ದಾದಾಗಿರಿ ಇನ್ಮುಂದೆ ನಡೆಯಲ್ಲ: ಅಮಿತ್ ಶಾ ವಾರ್ನಿಂಗ್..!

'ಜಮ್ಮು ಕಾಶ್ಮೀರದಲ್ಲಿ ನೂತನ ಕೈಗಾರಿಕಾ ನೀತಿಯನ್ನು ಜಾರಿ ಮಾಡಿದಾಗ ಕಣಿವೆ ರಾಜ್ಯದ ‘3 ಕುಟುಂಬಗಳು’ ವಿರೋಧಿಸಿದವು. ನಿಮ್ಮ ಶೋಷಣೆ ಮಾಡಿದ ಆ ‘3 ಕುಟುಂಬಗಳು’ ಕಣಿವೆ ರಾಜ್ಯಕ್ಕೆ ಯಾವ ಕೈಗಾರಿಕೋದ್ಯಮಿ ಬರುತ್ತಾರೆ ಎಂದು ಅಣಕವಾಡಿದವು' - ಅಮಿತ್ ಶಾ

ಜಮ್ಮು ಕಾಶ್ಮೀರದಲ್ಲಿ '3 ಕುಟುಂಬ'ಗಳ ದಾದಾಗಿರಿ ಇನ್ಮುಂದೆ ನಡೆಯಲ್ಲ: ಅಮಿತ್ ಶಾ ವಾರ್ನಿಂಗ್..!
Linkup
ಜಮ್ಮು: ಕಣಿವೆ ರಾಜ್ಯ ಹಾಗೂ ಕಾಶ್ಮೀರದಲ್ಲಿ '3 'ಗಳ ಇನ್ಮುಂದೆ ನಡೆಯೋದಿಲ್ಲ ಎಂದು ಅಮಿತ್ ಶಾ ಗುಡುಗಿದ್ದಾರೆ. ಜಮ್ಮುನಲ್ಲಿ ಮಾತನಾಡಿದ ಅವರು, ಸುಮಾರು 70 ವರ್ಷಗಳ ಕಾಲ 87 ಶಾಸಕರು ಹಾಗೂ 6 ಸಂಸದರು ಮಾಡಲು ಸಾಧ್ಯವಾಗದ ಕೆಲಸವನ್ನು ಪ್ರಧಾನಿ ಮೋದಿ ಅವರು ಪಂಚಾಯತ್‌ನ 20 ಸಾವಿರ ಚುನಾಯಿತ ಪ್ರತಿನಿಧಿಗಳಿಂದ ಮಾಡಿಸಿದ್ದಾರೆ ಎಂದು ಹೇಳಿದರು. ಕಾಶ್ಮೀರದಾದ್ಯಂತ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳ ಮೂಲಕ ಪ್ರಧಾನಿ ಮೋದಿ ಅವರು ಅಭಿವೃದ್ಧಿ ಕಾರ್ಯ ಮಾಡಿಸಿದ್ದಾರೆ ಎಂದು ವಿವರಿಸಿದರು. ಇನ್ನು ಕಾಶ್ಮೀರ ಭದ್ರತೆ ವಿಚಾರ ಪ್ರಸ್ತಾಪಿಸಿದ ಅವರು, 2004 ರಿಂದ 2014ರವರೆಗೆ 2018 ಮಂದಿ ನಾಗರಿಕರು ಕಣಿವೆ ರಾಜ್ಯದಲ್ಲಿ ಜೀವ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ 208 ಮಂದಿ ಬಲಿಯಾಗಿದ್ದಾರೆ. ಆದ್ರೆ, 2014 ರಿಂದ 2021ರ ಸೆಪ್ಟೆಂಬರ್‌ವರೆಗೆ 239 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಆದ್ರೆ, ಸಾವಿನ ಪ್ರಮಾಣ ಕಡಿಮೆಯಾಗಿರೋದೇನೂ ನಮಗೆ ತೃಪ್ತಿ ತಂದಿಲ್ಲ. ಭಯೋತ್ಪಾದನೆ ನಿಗ್ರಹ ಹಾಗೂ ಹಿಂಸಾಚಾರವನ್ನು ಸಂಪೂರ್ಣ ತೊಡೆದು ಹಾಕೋದಕ್ಕೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಅಮಿತ್ ಶಾ ಹೇಳಿದರು. ಜಮ್ಮು ಕಾಶ್ಮೀರದಲ್ಲಿ ನೂತನ ಕೈಗಾರಿಕಾ ನೀತಿಯನ್ನು ಜಾರಿ ಮಾಡಿದಾಗ ಕಣಿವೆ ರಾಜ್ಯದ ‘3 ಕುಟುಂಬಗಳು’ ವಿರೋಧಿಸಿದವು. ನಿಮ್ಮ ಶೋಷಣೆ ಮಾಡಿದ ಆ ‘3 ಕುಟುಂಬಗಳು’ ಕಣಿವೆ ರಾಜ್ಯಕ್ಕೆ ಯಾವ ಕೈಗಾರಿಕೋದ್ಯಮಿ ಬರುತ್ತಾರೆ ಎಂದು ಅಣಕವಾಡಿದವು. ಆದ್ರೆ, ಪ್ರಧಾನಿ ಮೋದಿಯವರ ಶ್ರಮದಿಂದ ಈವರೆಗೆ ಕಣಿವೆ ರಾಜ್ಯಕ್ಕೆ 12 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. 2022ರ ಅಂತ್ಯಕ್ಕೆ 51 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರಲಿದೆ. ಕಾಶ್ಮೀರದ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಅಮಿತ್ ಶಾ ಹೇಳಿದರು. ಜಮ್ಮು ಹಾಗೂ ಕಾಶ್ಮೀರದಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದ್ದು, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದ ಅಮಿತ್ ಶಾ, ಮಾತಾ ವೈಷ್ಣೋದೇವಿ ಸೇರಿದಂತೆ ಹಲವು ದೇವಾಲಯಗಳ ನಾಡಿದು, ಶ್ಯಾಂ ಪ್ರಸಾದ್ ಮುಖರ್ಜಿ ಅವರ ತ್ಯಾಗ, ಬಲಿದಾನದ ಭೂಮಿಯಿದು. ಹೀಗಾಗಿ, ಈ ನೆಲದಲ್ಲಿ ಶಾಂತಿ ಕದಡಲು ನಾವು ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದು ಅಮಿತ್ ಶಾ ಭರವಸೆ ನೀಡಿದರು. ಅಷ್ಟೇ ಅಲ್ಲ, ಜಮ್ಮುಗೆ ನಾನು ಇಂದು ಭೇಟಿ ನೀಡುವ ಮೂಲಕ, ಈ ಭಾಗದ ಜನರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗೋದಿಲ್ಲ ಎಂದು ಹೇಳುತ್ತಿದ್ದೇನೆ. ಕೆಲವರು ಬದಲಾವಣೆಯ ಪರ್ವವನ್ನೇ ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ. ಆದ್ರೆ, ನಾವು ಆ ರೀತಿ ಆಗಲು ಬಿಡೋದಿಲ್ಲ ಎಂದು ಆಶ್ವಾಸನೆ ನೀಡಲು ಇಲ್ಲಿಗೆ ಬಂದಿದ್ದೇನೆ ಎಂದು ಅಮಿತ್ ಶಾ ಹೇಳಿದರು. ಇದಕ್ಕೂ ಮುನ್ನ ಜಮ್ಮುನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಐಐಟಿ - ಜಮ್ಮು ಕ್ಯಾಂಪಸ್ ಉದ್ಘಾಟನೆ ಮಾಡಿದರು. ಬಳಿಕ, ಜಮ್ಮುನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಜೊತೆಗೆ ಗುರುದ್ವಾರ ದಿಗಿಯಾನಾ ಆಶ್ರಮಕ್ಕೆ ಅಮಿತ್ ಶಾ ಭೇಟಿ ನೀಡಿದರು.