ಜಿಎಸ್‌ಟಿ ವ್ಯಾಪ್ತಿಗೆ ಬೇಡ ಪೆಟ್ರೋಲ್‌, ಡೀಸೆಲ್‌ - ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಒಕ್ಕೊರಲ ಆಗ್ರಹ; ಗ್ರಾಹಕರಿಗೆ ಭಾರಿ ನಿರಾಸೆ

ಪೆಟ್ರೋಲ್‌ ಮತ್ತು ಡೀಸೆಲ್‌ನ್ನು ಜಿಎಸ್‌ಟಿಯ ವ್ಯಾಪ್ತಿಗೆ ತರಬಾರದು ಎಂದು ಜಿಎಸ್‌ಟಿ ಕೌನ್ಸಿಲ್‌ನ ಸದಸ್ಯರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಜಿಎಸ್‌ಟಿ ವ್ಯಾಪ್ತಿಗೆ ಬೇಡ ಪೆಟ್ರೋಲ್‌, ಡೀಸೆಲ್‌ - ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಒಕ್ಕೊರಲ ಆಗ್ರಹ; ಗ್ರಾಹಕರಿಗೆ ಭಾರಿ ನಿರಾಸೆ
Linkup
ಹೊಸದಿಲ್ಲಿ: ಮತ್ತು ಡೀಸೆಲ್‌ನ್ನು (ಜಿಎಸ್‌ಟಿ)ಯ ವ್ಯಾಪ್ತಿಗೆ ತರುವ ಬಗ್ಗೆ ಕೌನ್ಸಿಲ್‌ನಲ್ಲಿ ಶುಕ್ರವಾರ ಚರ್ಚೆ ನಡೆಯಿತು. ಕೇರಳ ಹೈಕೋರ್ಟ್‌ ಆದೇಶದ ಮೇರೆ ಈ ಚರ್ಚೆ ನಡೆಯಿತು. ಆದರೆ, ಸದಸ್ಯರು ಇದನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಾರದು ಎಂದು ಸ್ಪಷ್ಟವಾಗಿ ಹೇಳಿದರು ಎಂದು ಕೇಂದ್ರ ಹಣಕಾಸು ಸಚಿವೆ ತಿಳಿಸಿದ್ದಾರೆ. "ಜಿಎಸ್‌ಟಿ ಕೌನ್ಸಿಲ್ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಇದು ಸರಿಯಾದ ಸಮಯವಲ್ಲ ಎಂದು ಭಾವಿಸಿದ್ದರಿಂದ, ಇದನ್ನು ಹೈಕೋರ್ಟ್‌ಗೆ ವರದಿ ಮಾಡಲಾಗುತ್ತದೆ," ಎಂದು ಅವರು ವಿವರ ನೀಡಿದ್ದಾರೆ. ಕಳೆದ ಜೂನ್‌ನಲ್ಲಿ, ರಿಟ್ ಪಿಟಿಷನ್‌ ಒಂದರ ವಿಚಾರಣೆ ವೇಳೆ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಜಿಎಸ್‌ಟಿ ಕೌನ್ಸಿಲ್‌ಗೆ ಕೇರಳ ಹೈಕೋರ್ಟ್‌ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೌನ್ಸಿಲ್‌ನಲ್ಲಿ ಚರ್ಚೆ ನಡೆದು, ಇದೀಗ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರದೇ ಇರಲು ತೀರ್ಮಾನಿಸಲಾಗಿದೆ. ಆದರೆ, ಡೀಸೆಲ್‌ನೊಂದಿಗೆ ಬೆರೆಸುವ ಬಯೋ-ಡೀಸೆಲ್ ಮೇಲಿನ ಜಿಎಸ್‌ಟಿ ದರವನ್ನು (ತೈಲ ಮಾರುಕಟ್ಟೆ ಕಂಪನಿಗಳು ಬಳಸುವ) ಶೇ. 12 ರಿಂದ ಶೇ. 5ಕ್ಕೆ ಇಳಿಸಲಾಗಿದೆ ಎಂದು ಸಚಿವರು ಘೋಷಿಸಿದ್ದಾರೆ. ಜಿಎಸ್‌ಟಿ ಕೌನ್ಸಿಲ್ ಕೋವಿಡ್ -19 ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಮೇಲಿನ ರಿಯಾಯಿತಿ ಜಿಎಸ್‌ಟಿ ದರಗಳನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ ಎಂದೂ ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ. ಎಲ್ಲಾ ಪೆನ್ನುಗಳಿಗೆ ಶೇ. 18ರ ಒಂದೇ ಜಿಎಸ್‌ಟಿ ದರ ಅನ್ವಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಮತ್ತು, ನಿರ್ದಿಷ್ಟಪಡಿಸಿದ ನವೀಕರಿಸಬಹುದಾದ ವಲಯದ ಸಾಧನಗಳಿಗೆ ಶೇ. 12 ಜಿಎಸ್‌ಟಿ ದರವನ್ನು ಅನ್ವಯಿಸಲಾಗುವುದು ಎಂದು ತಿಳಿಸಿದ್ದಾರೆ. ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್‌ಗಳು, ಆಹಾರವನ್ನು ತೆಗೆದುಕೊಳ್ಳುವ ರೆಸ್ಟೋರೆಂಟ್‌ಗಳ ಬದಲಿಗೆ ತಾವೇ ಜಿಎಸ್‌ಟಿ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಯಾವುದೇ ಹೊಸ ತೆರಿಗೆ ಇಲ್ಲ ಎಂದು ಕೌನ್ಸಿಲ್ ಸ್ಪಷ್ಟಪಡಿಸಿದೆ. "ನೀವು ಅಗ್ರಿಗೇಟರ್‌ನಿಂದ ಆಹಾರವನ್ನು ಆರ್ಡರ್ ಮಾಡುತ್ತೀರಿ ಮತ್ತು ರೆಸ್ಟೋರೆಂಟ್ ತೆರಿಗೆ ಪಾವತಿಸುತ್ತಿದೆ ಎಂದು ಭಾವಿಸೋಣ. ಆದರೆ ಕೆಲವು ರೆಸ್ಟೋರೆಂಟ್‌ಗಳು ತೆರಿಗೆ ಪಾವತಿಸುತ್ತಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಹೀಗಾಗಿ ನೀವು ಅಗ್ರಿಗೇಟರ್ ಮೂಲಕ ಆರ್ಡರ್ ಮಾಡಿದರೆ, ಅವರು ಗ್ರಾಹಕರಿಂದ ತೆರಿಗೆ ಸಂಗ್ರಹಿಸುತ್ತಾರೆ ಮತ್ತು ರೆಸ್ಟೋರೆಂಟ್‌ನ ಬದಲಿಗೆ ಇವರು ಸರಕಾರಕ್ಕೆ ತೆರಿಗೆ ಪಾವತಿಸುತ್ತಾರೆ. ಆದರೆ ಯಾವುದೇ ಹೊಸ ತೆರಿಗೆ ಇಲ್ಲ," ಎಂದು ರೆವಿನ್ಯೂ ಸೆಕ್ರೆಟರಿ ತರುಣ್ ಬಜಾಜ್ ಹೇಳಿದ್ದಾರೆ. ಇದು ಸುಮಾರು 20 ತಿಂಗಳಲ್ಲಿ ನಡೆದ ಮೊದಲ ಪ್ರತ್ಯಕ್ಷ ಜಿಎಸ್‌ಟಿ ಕೌನ್ಸಿಲ್ ಸಭೆಯಾಗಿದೆ. ಈ ಹಿಂದೆ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಳ್ಳುವ ಮೊದಲು 2019ರಲ್ಲಿ ಕೊನೆಯ ಸಭೆ ನಡೆದಿತ್ತು.