ಜೂ. ಎನ್‌ಟಿಆರ್ ಆಪ್ತ, ಖ್ಯಾತ ನಿರ್ಮಾಪಕ ಮಹೇಶ್ ಕೊನೆರು ನಿಧನ

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಮಹೇಶ್ ಎಸ್‌. ಕೊನೆರು ನಿಧನರಾಗಿದ್ದಾರೆ. ಮಂಗಳವಾರ (ಅ.12) ಬೆಳಗ್ಗೆ ಅವರು ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ.

ಜೂ. ಎನ್‌ಟಿಆರ್ ಆಪ್ತ, ಖ್ಯಾತ ನಿರ್ಮಾಪಕ ಮಹೇಶ್ ಕೊನೆರು ನಿಧನ
Linkup
ತೆಲುಗು ಚಿತ್ರರಂಗದಲ್ಲಿ ಸಿನಿಮಾ ಪತ್ರಕರ್ತನಾಗಿ, ನಂತರ ಪಿಆರ್‌ಓ ಆಗಿ, ಜನಪ್ರಿಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ಮಹೇಶ್ ಎಸ್‌. ಕೊನೆರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ಮಹೇಶ್, ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ , ನಂದಮೂರಿ ಕಲ್ಯಾಣ್ ರಾಮ್, ಅನಸೂಯ ಭಾರಧ್ವಜ್ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪತ್ರಕರ್ತನಾಗಿದ್ದ ಮಹೇಶ್ಸಿನಿಮಾ ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ ಮಹೇಶ್‌, ಆನಂತರ ಜೂ. ಎನ್‌ಟಿಆರ್‌ಗೆ ತುಂಬ ಆಪ್ತರಾದರು. ಆನಂತರ ಎನ್‌ಟಿಆರ್ ಮತ್ತು ಅವರ ಸಹೋದರ, ನಟ ನಂದಮೂರಿ ಕಲ್ಯಾಣ್ ರಾಮ್ ಅವರಿಗೆ ಆಪ್ತ ಪಿಆರ್‌ಓ ಆಗಿ ಕೆಲಸ ಮಾಡಿದ್ದರು. ಎನ್‌ಟಿಆರ್ ಕುರಿತು, ಅವರ ಸಿನಿಮಾಗಳ ಕುರಿತು ಉತ್ತಮವಾಗಿ ಪ್ರಚಾರ ನೀಡುವಲ್ಲಿ ಮಹೇಶ್ ಕೊನೆರು ಸಫಲವಾಗಿದ್ದರು. ಅಲ್ಲದೆ, ತಮಿಳು ನಟ ವಿಜಯ್ ಅವರ ಬಿಗಿಲ್, ಮಾಸ್ಟರ್‌ ಸೇರಿದಂತೆ ಅನೇಕ ಸಿನಿಮಾಗಳನ್ನು ತೆಲುಗಿನಲ್ಲಿ ರಿಲೀಸ್ ಮಾಡುವುಕ್ಕೆ ಮಹೇಶ್ ಸಹಕಾರಿಯಾಗಿದ್ದರು. ಜೊತೆಗೆ ವಿಜಯ್‌ಗೆ ತೆಲುಗಿನಲ್ಲಿ ಒಳ್ಳೆಯ ಮಾರ್ಕೆಟ್ ಸೃಷ್ಟಿಸಿಕೊಟ್ಟಿದ್ದರು. ಮಹೇಶ್‌ಗೆ ವಯಸ್ಸು 40 ಕೂಡ ದಾಟಿರಲಿಲ್ಲ. ಅವರ ನಿಧನ ಆಪ್ತ ವಲಯದಲ್ಲಿ ತೀವ್ರ ಬೇಸರ ಉಂಟುಮಾಡಿದೆ. ಸಂತಾಪ ಸೂಚಿಸಿದ ಎನ್‌ಟಿಆರ್‌ತಮ್ಮ ಆಪ್ತ ಮಹೇಶ್ ನಿಧನದ ಬಗ್ಗೆ ಟ್ವೀಟ್ ಮಾಡಿರುವ ಎನ್‌ಟಿಆರ್, 'ಹೃದಯ ತುಂಬ ಭಾರವಾಗಿದೆ. ನನ್ನ ಪ್ರೀತಿಯ ಸ್ನೇಹಿತ ಮಹೇಶ್ ಕೊನೆರು ಇನ್ನಿಲ್ಲ ಎಂದು ಹೇಳಲು ತೀವ್ರ ಬೇಸರವಾಗುತ್ತಿದೆ. ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಮಾತನಾಡಲು ಆಗುತ್ತಿಲ್ಲ. ಮಹೇಶ್‌ ಅವರ ಕುಟುಂಬಕ್ಕೆ ಮತ್ತು ಅವರ ಆಪ್ತರಿಗೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ' ಎಂದು ಬರೆದುಕೊಂಡಿದ್ದಾರೆ. ಕಲ್ಯಾಣ್ ರಾಮ್ ನಾಯಕತ್ವದಲ್ಲಿ '118' ಸಿನಿಮಾವನ್ನು ನಿರ್ಮಿಸುವ ಮೂಲಕ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಮಹೇಶ್ ಎಂಟ್ರಿ ನೀಡಿದರು. ಕನ್ನಡದ 'ಬೀರ್‌ಬಲ್' ಸಿನಿಮಾವನ್ನು ತೆಲುಗಿನಲ್ಲಿ ತಿಮ್ಮರಸು ಹೆಸರಿನಲ್ಲಿ ರಿಮೇಕ್ ಮಾಡಿದರು. ಕೀರ್ತಿ ಸುರೇಶ್‌ ಮುಖ್ಯಭೂಮಿಕೆಯಲ್ಲಿ 'ಮಿಸ್ ಇಂಡಿಯಾ' ಸಿನಿಮಾವನ್ನು ಮಹೇಶ್ ಎಸ್‌. ಕೊನೆರು ನಿರ್ಮಾಣ ಮಾಡಿದ್ದರು. 'ಪೊಲೀಸ್ ವಾರಿ ಎಚ್ಚರಿಕ', 'ಸಭಕು ನಮಸ್ಕಾರಂ' ಸಿನಿಮಾಗಳನ್ನು ಅವರು ನಿರ್ಮಾಣ ಮಾಡುತ್ತಿದ್ದರು. ಆ ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಿದೆ. ಅವು ತೆರೆಗೆ ಬರುವ ಮುನ್ನವೇ ಮಹೇಶ್ ಇಹಲೋಕ ತ್ಯಜಿಸಿದ್ದಾರೆ.