ಗುರುವಾರ ಷೇರು ಮಾರುಕಟ್ಟೆ ಪ್ರವೇಶಿಸಲಿದೆ ಪೇಟಿಯಂ, ದೇಶದ ಅತೀ ದೊಡ್ಡ ಐಪಿಒ ಇದು

ದೇಶದ ಪ್ರಮುಖ ಮೊಬೈಲ್‌ ಪೇಮೆಂಟ್‌ ಪ್ಲಾಟ್‌ಫಾರ್ಮ್ ಪೇಟಿಎಂ ನ. 18ರಂದು ಷೇರು ವಿನಿಮಯ ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಲಿದೆ. ಇದರ ಆರಂಭಿಕ ಷೇರು ಕೊಡುಗೆ 8 ದಿನಗಳ ಹಿಂದೆ ಅಂದರೆ ನ. 10ರಂದು ಮುಕ್ತಾಯವಾಗಿತ್ತು.

ಗುರುವಾರ ಷೇರು ಮಾರುಕಟ್ಟೆ ಪ್ರವೇಶಿಸಲಿದೆ ಪೇಟಿಯಂ, ದೇಶದ ಅತೀ ದೊಡ್ಡ ಐಪಿಒ ಇದು
Linkup
ಮುಂಬಯಿ: ದೇಶದ ಪ್ರಮುಖ ಮೊಬೈಲ್‌ ಪೇಮೆಂಟ್‌ ಪ್ಲಾಟ್‌ಫಾರ್ಮ್ ನವೆಂಬರ್‌ 18ರಂದು ಗುರುವಾರ ಷೇರು ವಿನಿಮಯ ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಲಿದೆ. ಪೇಟಿಯಂನ ಆರಂಭಿಕ ಷೇರು ಕೊಡುಗೆ () 8 ದಿನಗಳ ಹಿಂದೆ ಅಂದರೆ ನವೆಂಬರ್‌ 10ರಂದು ಮುಕ್ತಾಯವಾಗಿತ್ತು. ಪೇಟಿಎಂದೇಶದ ಅತೀ ದೊಡ್ಡ ಐಪಿಒ ಆಗಿದ್ದು, ಆರಂಭಿಕ ಷೇರು ಕೊಡುಗೆಯ 1.89 ಪಟ್ಟು ಹೆಚ್ಚಿನ ಜನರು ಇದಕ್ಕೆ ಸಬ್‌ಸ್ಕೈಬ್‌ ಆಗಿದ್ದರು. ನಾಳೆ ಅಂದರೆ ಗುರುವಾರ 10 ಗಂಟೆಗೆ ಷೇರು ವಿನಿಮಯ ಮಾರುಕಟ್ಟೆಯಲ್ಲಿ ಪೇಟಿಎಂಷೇರುಗಳು ಲಿಸ್ಟ್‌ ಆಗಲಿವೆ. 18,300 ಕೋಟಿ ರೂ. ಮೊತ್ತದ ಪೇಟಿಎಂಐಪಿಒ ದೇಶದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಅತೀ ದೊಡ್ಡ ಐಪಿಒ ಆಗಿದೆ. ಈ ಹಿಂದೆ ಈ ದಾಖಲೆ ಸರಕಾರಿ ಸ್ವಾಮ್ಯದ ಕೋಲ್‌ ಇಂಡಿಯಾ ಲಿ. ಹೆಸರಿನಲ್ಲಿತ್ತು. 10 ವರ್ಷಗಳ ಹಿಂದೆ ಆರಂಭಿಕ ಷೇರು ಕೊಡುಗೆ ಮೂಲಕ ಕೋಲ್‌ ಇಂಡಿಯಾ 15,000 ಕೋಟಿ ರೂ. ಸಂಗ್ರಹಿಸಿತ್ತು. ಷೇರು ಮಾರುಕಟ್ಟೆ ಲಿಸ್ಟಿಂಗ್‌ಗೂ ಮುನ್ನ ಪೇಟಿಎಂ8,235 ಕೋಟಿ ರೂ. ಮೊತ್ತದ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರಿಗೆ ಹಂಚಿಕೆ ಮಾಡಿದೆ. ಇದರಲ್ಲಿ ಸಿಂಗಾಪುರ ಸರಕಾರವೂ ಸೇರಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ (ಎನ್‌ಎಸ್‌ಇ) ದಾಖಲೆಗಳ ಪ್ರಕಾರ ಪೇಟಿಎಂಷೇರುಗಳಿಗೆ 1.66 ಪಟ್ಟು ಹೆಚ್ಚಿನ ಚಿಲ್ಲರೆ ಹೂಡಿಕೆದಾರರು, 2.79 ಪಟ್ಟು ಅರ್ಹ ಸಾಂಸ್ಥಿಕ ಖರೀದಿದಾರರು ಮತ್ತು 0.24 ಪಟ್ಟು ಸಾಂಸ್ಥಿಕೇತರ ಹೂಡಿಕೆದಾರರು ಆಸಕ್ತಿ ತೋರಿಸಿದ್ದರು. ಪೇಟಿಎಂಷೇರುಗಳು ಹಂಚಿಕೆಯಾಗಿರುವ ಮಾಹಿತಿಯನ್ನು ಬಿಎಸ್‌ಇಯಲ್ಲಿ ಅಥವಾ ರೆಜಿಸ್ಟ್ರಾರ್‌ ಅವರ ವೆಬ್‌ಸೈಟ್‌ನಲ್ಲಿ ನೋಡಬಹುದು. ಐಪಿಒ ವೇಳೆ ಪೇಟಿಎಂ8,300 ಕೋಟಿ ರೂ. ಮೊತ್ತದ ಷೇರುಗಳನ್ನು ಹೊಸದಾಗಿ ಬಿಡುಗಡೆ ಮಾಡಿದ್ದರೆ, ಹಾಲಿ ಷೇರುದಾರರ 10,000 ಕೋಟಿ ರೂ.ಮೊತ್ತದ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿದೆ. 2,080-2150 ರೂ. ಮೊತ್ತದಲ್ಲಿ ಪ್ರತಿ ಷೇರುಗಳನ್ನು ಪೇಟಿಎಂಮಾರಾಟ ಮಾಡಿದೆ. ಚಿಲ್ಲರೆ ಹೂಡಿಕೆದಾರರು 6 ಷೇರುಗಳಿರುವ ಒಂದು ಲಾಟ್‌ಗೆ ಬಿಡ್‌ ಮಾಡಬಹುದಾಗಿತ್ತು. ಓರ್ವ ಹೂಡಿಕೆದಾರ ಗರಿಷ್ಠ 15 ಲಾಟ್‌ಗಳಿಗೆ ಬಿಡ್‌ ಮಾಡಲು ಅವಕಾಶ ನೀಡಲಾಗಿತ್ತು. ಅಪ್ಪರ್‌ ಪ್ರೈಸ್‌ ಬ್ಯಾಂಡ್‌ನಲ್ಲಿ ಪೇಟಿಯಂನ ಒಂದು ಲಾಟ್‌ಗೆ 12,900 ರೂ. ಬೆಲೆ ಕಟ್ಟಲಾಗಿತ್ತು. ಐಪಿಒ ವೇಳೆ, ಪೇಟಿಯಂನ ಹೂಡಿಕೆದಾರರಾಗಿದ್ದ ಜಪಾನ್‌ನ ಸಾಫ್ಟ್‌ ಬ್ಯಾಂಕ್‌, ಚೀನಾದ ಆಂಟ್‌ ಗ್ರೂಪ್‌ ಮತ್ತು ಅಲಿಬಾಬ ಹಾಗೂ ಎಲೆವೇಷನ್‌ ಕ್ಯಾಪಿಟಲ್‌ ತಮ್ಮ ಷೇರುಗಳನ್ನು ಹಿಂಪಡೆದುಕೊಂಡಿವೆ. ಒಂದು ದಶಕದ ಹಿಂದೆ ಮೊಬೈಲ್‌ ರಿಚಾರ್ಜ್‌ ಪ್ಲಾಟ್‌ಫಾರಂ ರೂಪದಲ್ಲಿ ಪೇಟಿಎಂಚಾಲನೆ ಪಡೆದುಕೊಂಡಿತ್ತು. ಮುಂದೆ ತಕ್ಷಣದ ಹಣ ಪಾವತಿಗೆ ಉಬರ್‌ ಪೇಟಿಎಂಆಯ್ಕೆ ನೀಡಿದ ನಂತರ ಇದು ಭಾರಿ ವೇಗದಲ್ಲಿ ಬೆಳವಣಿಗೆ ಕಂಡಿತ್ತು. ಅದರಲ್ಲೂ 2016ರಲ್ಲಿ ಡಿಮಾನಟೈಸೇಷನ್‌ ಸಮಯದಲ್ಲಿ ಪೇಟಿಯಂಗೆ ಎಂದಿಗಿಂತ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು.