ನನ್ನ ಹಾಗೂ ಕುಟುಂಬದ ಬಗ್ಗೆ ತಪ್ಪಾಗಿ ಮಾತನಾಡಿದರೆ ಕೈಕಟ್ಟಿ ಸುಮ್ಮನಿರಲ್ಲ‌! ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ನನ್ನ ಹಾಗೂ ಕುಟುಂಬದ ಬಗ್ಗೆ ತಪ್ಪಾಗಿ ಮಾತನಾಡಿದರೆ ಕೈಕಟ್ಟಿ ಸುಮ್ಮನಿರಲ್ಲ‌. ​​ವೈಯಕ್ತಿಕ ದಾಳಿ ಮಾಡುವುದನ್ನು ನನ್ನ ಮನೆಯವರು ನನಗೆ ಕಲಿಸಿಲ್ಲ. ಆದರೆ ಬಿಜೆಪಿ ಮುಖಂಡರು ನನ್ನ ಬಗ್ಗೆ‌ ಅತಿರೇಕವಾಗಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಹಾಗೂ ಕುಟುಂಬದ ಬಗ್ಗೆ ತಪ್ಪಾಗಿ ಮಾತನಾಡಿದರೆ ಕೈಕಟ್ಟಿ ಸುಮ್ಮನಿರಲ್ಲ‌! ಪ್ರಿಯಾಂಕ್ ಖರ್ಗೆ ಎಚ್ಚರಿಕೆ
Linkup
ಬೆಂಗಳೂರು: ನನ್ನ ಹಾಗೂ ಕುಟುಂಬದ ಬಗ್ಗೆ ತಪ್ಪಾಗಿ ಮಾತನಾಡಿದರೆ ಕೈಕಟ್ಟಿ ಸುಮ್ಮನಿರಲ್ಲ‌ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ವೈಯಕ್ತಿಕ ದಾಳಿ ಮಾಡುವುದನ್ನು ನನ್ನ ಮನೆಯವರು ನನಗೆ ಕಲಿಸಿಲ್ಲ. ಆದರೆ ಬಿಜೆಪಿ ಮುಖಂಡರು ನನ್ನ ಬಗ್ಗೆ‌ ಅತಿರೇಕವಾಗಿ ಮಾತನಾಡುತ್ತಿದ್ದಾರೆ. ಬಿಟ್ ಕಾಯಿನ್ ಹಗರಣ ಪ್ರಶ್ನೆ ಮಾಡಿದ ಬಳಿಕ ಹಲವಾರು ಬಿರುದುಗಳು ನನಗೆ ಬಂದಿವೆ ಎಂದು ವ್ಯಂಗ್ಯವಾಗಿ ಟೀಕಿಸಿದರು. ಸದಾಶಿವ ನಗರದಲ್ಲಿ ಬಂಗಲೆ ಇದೆ,‌‌ ಐಶಾರಾಮಿ ಕಾರು ಇದೆ, ಐವತ್ತು ಸಾವಿರ ಕೋಟಿ ರೂ. ಆಸ್ತಿ ಇದೆ ಎಂದು ಆರೋಪ ಮಾಡಿದ್ದಾರೆ. ಹಾಗಿದ್ದಲ್ಲಿ ನನ್ನ ವಿರುದ್ಧ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು. ನನ್ನ ವಿರುದ್ಧ ಯಾರು ಆರೋಪ ಮಾಡಿದ್ದಾರೋ ಅವರಿಗೆ ಲೀಗಲ್ ನೋಟಿಸ್ ಕೊಡುತ್ತೇನೆ. ನನ್ನ ಆಸ್ತಿ ಬಗ್ಗೆ ತನಿಖೆ ನಡೆಸಲಿ. ಹಳೇ ಕ್ಯಾಸೆಟ್ ಎಷ್ಟು ವರ್ಷ ಹೇಳುತ್ತೀರಿ? ಎಂದು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಟಾಂಗ್ ಕೊಟ್ಟ ಅವರು, ನನಗೆ ಪದೇ ಪದೇ ಬೈಯುತ್ತಿದ್ದರೆ ನೀವು ಸಚಿವರಾಗಲ್ಲ ಎಂದು ಕಾಲೆಳೆದರು. ಜತೆಗೆ ಅತಿವೃಷ್ಟಿ ಆದಾಗ ಜನರ ರಕ್ಷಣೆ ಮಾಡಲು ಐದು ಇಂಚು ನೀರಲ್ಲಿ ತೆಪ್ಪ ತೆಗೆದುಕೊಂಡು ಹೋಗಿದ್ದರು. ಅವರಿಂದ ಪಾಠ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು. ಸಂಸದ ಪ್ರತಾಪ ಸಿಂಹ ಏಕವಚನದಲ್ಲಿ ಮಾತನಾಡಿದ್ದಕ್ಕೆ ನಾನು 'ಪೇಪರ್ ಸಿಂಹ' ಅಂದಿದ್ದೆ. ಆದರೆ ಅವರಿಗೆ ಕನ್ನಡ, ಇಂಗ್ಲಿಷ್,‌ ಬೌದ್ಧ ಧರ್ಮ, ಹಿಂದೂ ಧರ್ಮದ ಅರಿವು ಕೂಡಾ ಇಲ್ಲ. ಪ್ರಿಯಾಂಕ್ ಅಂದರೆ ಎಲ್ಲರಿಂದ ಪ್ರೀತಿಸಲ್ಪಡುವವ ಹಾಗೂ ಉತ್ತಮ ವ್ಯಕ್ತಿ ಎಂಬ ಅರ್ಥ. ಪ್ರತಾಪ ಅಂದರೆ ಗೌರವಯುತ ಎಂದು ಅರ್ಥ.‌ ಆದರೆ ಅವರು ಡಿಗ್ನಿಟಿಯಿಂದ ವರ್ತಿಸುವುದಿಲ್ಲ ಎಂದು ಟಾಂಗ್ ಕೊಟ್ಟರು. ನಾನು ಯಾರಿಗೂ ಅರ್ಜಿ ಹಾಕಿ ಹುಟ್ಟಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಮಗನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ. ನನ್ನನ್ನು ಮರಿ ಖರ್ಗೆ ಎಂದು ಕರೆಯುವ ಪ್ರತಾಪ ಸಿಂಹ, ವಿಜಯೇಂದ್ರಗೆ ಮರಿ ಯಡಿಯೂರಪ್ಪ ಎಂದು ಹೇಳುವ ಧೈರ್ಯ ಇದ್ಯಾ? ಜಯ್ ಶಾಗೆ ಚೋಟಾ ಶಾ ಎಂದು ಹೇಳುವ ಧೈರ್ಯ ಇದ್ಯಾ? ಎಂದು ಪ್ರಶ್ನಿಸಿದ‌ ಅವರು, "ಪ್ರತಾಪ ಸಿಂಹ ಉತ್ತರ ಕುಮಾರನ ತರ, ಪ್ರಶ್ನೆ ಕೇಳಿದರೆ ಓಡಿ ಹೋಗುತ್ತಾರೆ," ಎಂದು ವಾಗ್ದಾಳಿ ನಡೆಸಿದರು. ಆಡಿಯೋ ಕ್ಲಿಪ್‌ಗೆ ಸ್ಟೇ ತರುತ್ತಾರೆ, ಮಹಿಳಾ ಆಯೋಗದಲ್ಲಿ ಯಾರ ಬಗ್ಗೆ ದೂರು ದಾಖಲಾಗಿರುವುದು ಎಂದು ಪ್ರತಾಪ ಸಿಂಹಗೆ ತಿಳಿದಿರಲಿ ಎಂದು ವ್ಯಂಗ್ಯವಾಡಿದರು. ನನ್ನ ಬಗ್ಗೆ ಹಾಗೂ ಕುಟುಂಬದ ಬಗ್ಗೆ ಮಾತನಾಡಿದರೆ ನಾನು ಕೈಕಟ್ಟಿ ಸುಮ್ಮನಿರಲ್ಲ‌. ಬುದ್ಧ, ಬಸವ ಚಿಂತನೆ ಜೊತೆ ಅಂಬೇಡ್ಕರ್ ಹೋರಾಟದ ರಕ್ತ ನನ್ನಲ್ಲಿ ಇದೆ. ಚರ್ಚೆಗೆ ಬಂದರೆ ಯಾವ ವೇದಿಕೆಯಲ್ಲಿ ಬೇಕಾದರೂ ಮಾತನಾಡಲು ನಾನು ರೆಡಿ ಎಂದು ಸವಾಲು ಹಾಕಿದರು.