ಗಣರಾಜ್ಯೋತ್ಸವ ಸಿದ್ಧತೆ: ಕಬ್ಬನ್‌ಪಾರ್ಕ್ ನಲ್ಲಿ 15 ಸಾವಿರ ಅಲಂಕಾರಿಕ ಹೂ ಕುಂಡ ಸಿದ್ಧ!

ಪ್ರತಿ ಬಾರಿಯ ಪ್ರದರ್ಶನಕ್ಕೆ ನೀಡಿದಂತೆ ಈ ಬಾರಿಯೂ 15 ಸಾವಿರ ಕುಂಡಗಳಲ್ಲಿ ಬಗೆ ಬಗೆಯ ಹೂವುಗಳನ್ನು ಬೆಳೆಸಲಾಗಿದೆ. ಇದಕ್ಕಾಗಿ ಪುಟಾಣಿ ಪಾಟ್‌ಗಳನ್ನು ಒಪ್ಪವಾಗಿ ಜೋಡಿಸಿ ಅದಕ್ಕೆ ಬೇಕಾದ ಮಣ್ಣು, ನೀರು, ಹೂವಿನ ಬೀಜ, ಗೊಬ್ಬರ ಇತ್ಯಾದಿಗಳನ್ನು ಹಾಕಿ ಅಚ್ಚುಕಟ್ಟಾಗಿ ಬೆಳೆಸಲಾಗುತ್ತಿದೆ. ಉದ್ಯಾನದ ಸಿಬ್ಬಂದಿ ಗಿಡಗಳ ಆರೈಕೆಯಲ್ಲಿ ತೊಡಗಿದ್ದಾರೆ.

ಗಣರಾಜ್ಯೋತ್ಸವ ಸಿದ್ಧತೆ: ಕಬ್ಬನ್‌ಪಾರ್ಕ್ ನಲ್ಲಿ 15 ಸಾವಿರ ಅಲಂಕಾರಿಕ ಹೂ ಕುಂಡ ಸಿದ್ಧ!
Linkup
ಬೆಂಗಳೂರು: ಜನವರಿ ತಿಂಗಳಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕಾಗಿ ನಲ್ಲಿ 15 ಸಾವಿರ ಅಲಂಕಾರಿಕ ಹೂಗಳ ಪಾಟ್‌ಗಳು ಸಜ್ಜಾಗುತ್ತಿವೆ. ಪ್ರತಿ ಫಲಪುಷ್ಪ ಪ್ರದರ್ಶನದಲ್ಲಿ ಹೂ ಕುಂಡಗಳ ಆಕರ್ಷಣೆ ವಿಶೇಷವಾಗಿರುತ್ತದೆ. ಹೀಗಾಗಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯ ನಂದಿಬೆಟ್ಟ, ಊಟಿ, ಕೆಮ್ಮಣ್ಣುಗುಂಡಿ ಮತ್ತಿತರ ಭಾಗಗಳಿಂದ ಆ ಭಾಗದ ವಿಶೇಷ ಹೂವುಗಳು, ಕುಂಡಗಳಲ್ಲಿ ಬೆಳೆಸಿದ ಹೂವುಗಳನ್ನು ತರಿಸಿ ಜೋಡಿಸಲಾಗುತ್ತದೆ. ಅದೇ ರೀತಿ ಕಬ್ಬನ್‌ಪಾರ್ಕ್ ನಿಂದಲೂ ಅಲಂಕಾರಿಕ ಹೂವಿನ ಗಿಡಗಳನ್ನು ತರಿಸುವುದು ವಾಡಿಕೆ. ಹೀಗಾಗಿ ಪ್ರತಿ ಬಾರಿಯ ಪ್ರದರ್ಶನಕ್ಕೆ ನೀಡಿದಂತೆ ಈ ಬಾರಿಯೂ 15 ಸಾವಿರ ಕುಂಡಗಳಲ್ಲಿ ಬಗೆ ಬಗೆಯ ಹೂವುಗಳನ್ನು ಬೆಳೆಸಲಾಗಿದೆ. ಇದಕ್ಕಾಗಿ ಪುಟಾಣಿ ಪಾಟ್‌ಗಳನ್ನು ಒಪ್ಪವಾಗಿ ಜೋಡಿಸಿ ಅದಕ್ಕೆ ಬೇಕಾದ ಮಣ್ಣು, ನೀರು, ಹೂವಿನ ಬೀಜ, ಗೊಬ್ಬರ ಇತ್ಯಾದಿಗಳನ್ನು ಹಾಕಿ ಅಚ್ಚುಕಟ್ಟಾಗಿ ಬೆಳೆಸಲಾಗುತ್ತಿದೆ. ಉದ್ಯಾನದ ಸಿಬ್ಬಂದಿ ಗಿಡಗಳ ಆರೈಕೆಯಲ್ಲಿ ತೊಡಗಿದ್ದಾರೆ. ''ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ 10 ಸಾವಿರ ಹೂಕುಂಡಗಳನ್ನು ರವಾನಿಸುತ್ತೇವೆ. ಇದರ ಜತೆಗೆ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ 5 ಸಾವಿರ ಹೂಕುಂಡಗಳನ್ನು ಕಬ್ಬನ್‌ಪಾರ್ಕ್ ವತಿಯಿಂದ ನೀಡಲಾಗುವುದು. ಹೀಗಾಗಿ ಗಣರಾಜ್ಯೋತ್ಸವಕ್ಕೆಂದು ಒಟ್ಟಾರೆ 15 ಸಾವಿರ ಹೂಕುಂಡಗಳಲ್ಲಿ ವಿಶೇಷವಾಗಿ ಹೂವುಗಳನ್ನು ಬೆಳೆಸಲಾಗಿದೆ,'' ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ(ಕಬ್ಬನ್‌ಪಾರ್ಕ್ ಉಸ್ತುವಾರಿ) ಎಚ್‌.ಟಿ.ಬಾಲಕೃಷ್ಣ ತಿಳಿಸಿದರು. ಯಾವ್ಯಾವ ಹೂವುಗಳು ಸಾಲ್ವಿಯಾ ರೆಡ್‌, ಸಾಲ್ವಿಯಾ ವೈಟ್‌, ಮರಿಗೋಲ್ಡ್‌, ಟೊರೇನಿಯಂ, ಝಿನಿಯ, ಪೆಟೂನಿಯ, ಕ್ರಿಸಾಂತಿಮಮ್‌, ಡಯಾಂತಸ್‌, ಬೈಗೋನಿಯ, ಧಾಲಿಯಾ ಮತ್ತಿತರ ಹೂವುಗಳನ್ನು ಬೆಳೆಸಲಾಗಿದೆ.