ಕೋವ್ಯಾಕ್ಸಿನ್ ಉತ್ಪಾದಿಸುವ ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆಗೆ ಕೇಂದ್ರ ಪಡೆಗಳ ಬಿಗಿ ಭದ್ರತೆ

ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್ ವೈದ್ಯಕೀಯ ಸಂಸ್ಥೆಗೆ ಕೇಂದ್ರ ಕೈಗಾರಿಕಾ ಮೀಸಲು ಪಡೆಗಳ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಬೆದರಿಕೆಗಳ ಮುನ್ನೆಚ್ಚರಿಕೆಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೋವ್ಯಾಕ್ಸಿನ್ ಉತ್ಪಾದಿಸುವ ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆಗೆ ಕೇಂದ್ರ ಪಡೆಗಳ ಬಿಗಿ ಭದ್ರತೆ
Linkup
ಹೈದರಾಬಾದ್: ಕೋವಿಡ್ ಲಸಿಕೆ ಪೂರೈಕೆ ಮಾಡುತ್ತಿರುವ ಪ್ರಮುಖ ಕಂಪೆನಿಗಳಲ್ಲಿ ಒಂದಾಗಿರುವ ಮೂಲದ ಆವರಣಕ್ಕೆ ಸಶಸ್ತ್ರ ಕಮಾಂಡೊಗಳ ಬಿಗಿ ಭದ್ರತೆಯನ್ನು ಕೇಂದ್ರ ಸರಕಾರ ಒದಗಿಸಿದೆ. ಸಂಪೂರ್ಣ ಸ್ವದೇಶಿ ತಯಾರಿಕೆಯ ಲಸಿಕೆಯನ್ನು ಭಾರತ್ ಬಯೋಟೆಕ್ ಉತ್ಪಾದಿಸುತ್ತಿದೆ. ತೆಲಂಗಾಣದ ರಾಜಧಾನಿಯ ಶಮೀರ್‌ಪೇಟ್ ಪ್ರದೇಶದ ಜೆನೋಮ್ ವ್ಯಾಲಿಯಲ್ಲಿ ಭಾರತ್ ಬಯೋಟೆಕ್‌ನ ನೋಂದಾಯಿತ ಕಚೇರಿ ಹಾಗೂ ಘಟಕವಿದೆ. ಇದರ ಆವರಣದಲ್ಲಿ ಅರೆಸೇನಾ ಪಡೆಯ 64 ಸಶಸ್ತ್ರ ಸಿಬ್ಬಂದಿಯ ತಂಡ ಕಾವಲು ಕಾಯುತ್ತಿದೆ. ಕೇಂದ್ರ ಕೈಗಾರಿಕಾ ಮೀಸಲು ಪಡೆಯು (ಸಿಐಎಸ್‌ಎಫ್) ಸಮೀಕ್ಷೆಯೊಂದನ್ನು ನಡೆಸಿತ್ತು. ಅದರ ಬಳಿಕ ಭಾರತ್ ಬಯೋಟೆಕ್‌ಗೆ ಕೇಂದ್ರ ಪಡೆಗಳ ಭದ್ರತೆ ಒದಗಿಸುವ ಪ್ರಸ್ತಾಪಕ್ಕೆ ಗೃಹ ಸಚಿವಾಲಯ ಇತ್ತೀಚೆಗೆ ಒಪ್ಪಿಗೆ ನೀಡಿತ್ತು. 'ಇದು ದೇಶದ ವೈದ್ಯಕೀಯ ಹಾಗೂ ಆರೋಗ್ಯ ಭದ್ರತೆಯನ್ನು ಒದಗಿಸುವ ವಿಚಾರದಲ್ಲಿ ಬಹಳ ಮಹತ್ವದ ಸಂಸ್ಥೆಯಾಗಿದೆ. ಹೀಗಾಗಿ ಇದು ವಿವಿಧ ವೈರತ್ವದ ಮೂಲಗಳಿಂದ ಭಯೋತ್ಪಾದನೆಯ ಬೆದರಿಕೆಯನ್ನು ಖಂಡಿತಾ ಎದುರಿಸುತ್ತದೆ. ಹೀಗಾಗಿ ಭಾರತ್ ಬಯೋಟೆಕ್‌ಗೆ ಸಿಐಎಸ್‌ಎಫ್ ಭದ್ರತೆ ಒದಗಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 14ರಿಂದ ಸಿಐಎಸ್‌ಎಫ್ ಪಡೆಯು ತನ್ನ ಕಾರ್ಯಾಚರಣೆ ನಡೆಸಲಿದೆ.