ಮೂರನೇ ಅಲೆಯಿಂದ ಮಕ್ಕಳಿಗೆ ಅಪಾಯ ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ!: ಏಮ್ಸ್ ನಿರ್ದೇಶಕರ ಹೇಳಿಕೆ

ಕೋವಿಡ್ 19 ಮೂರನೇ ಅಲೆಯು ಚಿಕ್ಕ ಮಕ್ಕಳಿಗೆ ಗಂಭೀರ ಹಾನಿ ಉಂಟುಮಾಡಲಿದೆ ಎಂಬ ಆತಂಕಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಮೂರನೇ ಅಲೆಯಿಂದ ಮಕ್ಕಳಿಗೆ ಅಪಾಯ ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ!: ಏಮ್ಸ್ ನಿರ್ದೇಶಕರ ಹೇಳಿಕೆ
Linkup
ಹೊಸದಿಲ್ಲಿ: ಮೂರನೇ ಅಲೆಯು ಮಕ್ಕಳಲ್ಲಿ ಗಂಭೀರ ಸೋಂಕು ಉಂಟುಮಾಡುತ್ತದೆ ಎಂಬುದಕ್ಕೆ ಭಾರತ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಾಗಲೀ ಯಾವುದೇ ಪುರಾವೆ ಇಲ್ಲ ಎಂದು ದಿಲ್ಲಿಯ ನಿರ್ದೇಶಕ ಡಾ. ಹೇಳಿದ್ದಾರೆ. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಸಾಂಕ್ರಾಮಿಕದ ಮೂರನೇ ಅಲೆಯು ಮಕ್ಕಳಲ್ಲಿ ತೀವ್ರತರದ ಅನಾರೋಗ್ಯ ಉಂಟುಮಾಡುತ್ತದೆ ಎನ್ನುವುದು ತಪ್ಪು ಮಾಹಿತಿಯಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಮಕ್ಕಳಲ್ಲಿ ಶೇ 60-70ರಷ್ಟು ಮಕ್ಕಳಲ್ಲಿ ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಲಘು ಲಕ್ಷಣಗಳನ್ನು ಹೊಂದಿದ್ದ ಇತರರು ಮನೆಯಲ್ಲಿಯೇ ಚೇತರಿಕೆ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. 'ಭವಿಷ್ಯದಲ್ಲಿ ಮಕ್ಕಳಲ್ಲಿ ಗಂಭೀರ ಸೋಂಕು ಕಾಣಿಸಿಕೊಳ್ಳಲಿದೆ ಎಂದು ನನಗೆ ಅನಿಸುತ್ತಿಲ್ಲ. ಎರಡು ಅಲೆಗಳಿಂದ ಪಡೆದುಕೊಂಡ ದತ್ತಾಂಶಗಳು, ಹಳೆಯ ವೈರಸ್ ತಳಿಯಾಗಲೀ ಅಥವಾ ಹೊಸ ರೂಪಾಂತರವಾಗಲೀ ಮಕ್ಕಳಲ್ಲಿ ಗಂಭೀರ ಸೋಂಕು ಉಂಟುಮಾಡಿಲ್ಲ ಎಂಬುದನ್ನು ತೋರಿಸಿವೆ. ಜಗತ್ತಿನ ಅನೇಕ ಭಾಗಗಳಲ್ಲಿ ಹೊಸ ಅಲೆಗಳು ಸೃಷ್ಟಿಯಾಗುತ್ತಿದ್ದರೂ, ಎಲ್ಲಿಯೂ ಗಂಭೀರವಾಗಿ ತೊಂದರೆಗೆ ಒಳಗಾದ ಉದಾಹರಣೆ ಇಲ್ಲ' ಎಂದು ತಿಳಿಸಿದ್ದಾರೆ. 'ಸಾಂಕ್ರಾಮಿಕ ಸಂದರ್ಭಗಳಲ್ಲಿ ಉಸಿರಾಟದ ವೈರಸ್‌ಗಳಿಂದಾಗಿ ಅಲೆಗಳು ಸಾಮಾನ್ಯವಾಗಿ ಉದ್ಭವಿಸುತ್ತವೆ. 1918ರಲ್ಲಿ ಸ್ಪ್ಯಾನಿಶ್ ಫ್ಲೂ, ಎಚ್‌1ಎನ್‌1 ಇದಕ್ಕೆ ಉದಾಹರಣೆ. 1918ರಲ್ಲಿ ಸ್ಪ್ಯಾನಿಶ್ ಫ್ಲೂನ ಎರಡನೆಯ ಅಲೆ ಅತಿ ದೊಡ್ಡದಾಗಿತ್ತು. ಬಳಿಕದ ಬಹಳ ಚಿಕ್ಕದಾಗಿತ್ತು' ಎಂದು ಉದಾಹರಣೆ ನೀಡಿದ್ದಾರೆ. ಆದರೆ ಜನರು ಕೋವಿಡ್ ನಿಯಂತ್ರಣ ಕ್ರಮಗಳಿಗೆ ಕಟ್ಟುನಿಟ್ಟಾಗಿ ಇರುವುದನ್ನು ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಮೊದಲ ಅಲೆಯು ವಯಸ್ಕರಿಗೆ ಹೆಚ್ಚು ಅಪಾಯಕಾರಿತ್ತು. ಎರಡನೆಯ ಅಲೆಯಲ್ಲಿ ಯುವಜನರು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಮೂರನೇ ಅಲೆಯಲ್ಲಿ ಮಕ್ಕಳು ಅಧಿಕ ಮಟ್ಟದಲ್ಲಿ ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂದು ಸರಕಾರದ ಸಮಿತಿಯೊಂದು ಹೇಳಿಕೆ ನೀಡಿತ್ತು.