ಕ್ರಿಪ್ಟೋ ಸ್ಕ್ಯಾಮ್ ಎಂದರೇನು?: ವಂಚನೆಯಿಂದ ರಕ್ಷಿಸಿಕೊಳ್ಳಲು ಇರುವ ಮಾರ್ಗಗಳೇನು?

ಕ್ರಿಪ್ಟೋಕರೆನ್ಸಿ ವ್ಯಾಪಾರ ಎಷ್ಟು ರೋಚಕವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಹೂಡಿಕೆದಾರನ ಹಣವನ್ನು ಸೈಬರ್ ಕಳ್ಳರು ದೋಚಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕ್ರಿಪ್ಟೋಕರೆನ್ಸಿಯಲ್ಲಿ ನಡೆಯಬಹುದಾದ ವಂಚನೆಗಳು ಮತ್ತು ಅವುಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಕ್ರಿಪ್ಟೋ ಸ್ಕ್ಯಾಮ್ ಎಂದರೇನು?: ವಂಚನೆಯಿಂದ ರಕ್ಷಿಸಿಕೊಳ್ಳಲು ಇರುವ ಮಾರ್ಗಗಳೇನು?
Linkup
ಹೊಸದಿಲ್ಲಿ: ಬಗೆಗಿನ ಕುತೂಹಲ ಹೆಚ್ಚುತ್ತಿರುವುದು ಒಂದೆಡೆಯಾದರೆ, ಈ ಕ್ಷೇತ್ರದಲ್ಲಿ ವಂಚನೆಯ ಪ್ರಕರಣಗಳೂ ಹೆಚ್ಚು ಬೆಳಕಿಗೆ ಬರುತ್ತಿವೆ. ಕ್ರಿಪ್ಟೋಕರೆನ್ಸಿ ವ್ಯಾಪಾರ ಎಷ್ಟು ರೋಚಕವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಹೂಡಿಕೆದಾರನ ಹಣವನ್ನು ಸೈಬರ್ ಕಳ್ಳರು ದೋಚಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೆಲವು ಕ್ರಿಪ್ಟೋಕರೆನ್ಸಿಗಳು ಹೂಡಿಕೆದಾರನಿಗೆ ಹೆಚ್ಚಿನ ಭಧ್ರತೆ ಒದಗಿಸುತ್ತವೆಯಾದರೂ, ವಂಚನೆಯಿಂದ ಸಂಪೂರ್ಣ ರಕ್ಷಣೆ ಅಂತಿಮವಾಗಿ ಹೂಡಿಕೆದಾರನ ಜವಾಬ್ದಾರಿಯಾಗಿರುತ್ತದೆ. ತಮ್ಮ ಕ್ರಿಪ್ಟೋ ವ್ಯಾಲೆಟ್‌ಗಳ ರಕ್ಷಣೆ ಬಗ್ಗೆ ಹೂಡಿಕೆದಾರ ಅತ್ಯಮತ ಜಾಗೂರಕನಾಗಿ ಇರಬೇಕಾಗುತ್ತದೆ. ಹಾಗಾದರೆ ಕ್ರಿಪ್ಟೋಕರೆನ್ಸಿಯಲ್ಲಿ ನಡೆಯಬಹುದಾದ ವಂಚನೆಗಳು ಮತ್ತು ಅವುಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಗಮನಿಸುವುದಾದರೆ.. 1. ನಕಲಿ ತಾಂತ್ರಿಕ ಬೆಂಬಲ: ವಂಚಕರು ಗ್ರಾಹಕರನ್ನು ಗೌಪ್ಯ ಕ್ರಿಪ್ಟೋ ಟ್ರೇಡಿಂಗ್‌ ಮಾಹಿತಿಯನ್ನು ಬಹಿರಂಗಪಡಿಸುವಂತೆ ಪುಸಲಾಯಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಗ್ರಾಹಕ ಸೇವಾದಾರರ ಸೋಗಿನಲ್ಲಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆದಾರನನ್ನು ಸಂಪರ್ಕಿಸುವ ವಂಚಕರು, ಗೌಪ್ಯ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಗ್ರಾಹಕ ಸೇವಾದಾರನ ಮೊಬೈಲ್ ನಂಬರ್ ಹಾಗೂ ಸಾಮಾಜಿಕ ಜಾಲತಾಣಗಳ ಸತ್ಯಾಸತ್ಯತೆಯನ್ನು ತಿಳಿಯವುದು ಹೂಡಿಕೆದಾರನ ಆದ್ಯ ಕರ್ತವ್ಯ. ಅಲ್ಲದೇ ಯಾರಿಗೂ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಗೌಪ್ಯ ಮಾಹಿತಿಯನ್ನು ನೀಡುವುದು ಸರಿಯಾದ ಕ್ರಮವಲ್ಲ. ಅಲ್ಲದೇ ಕ್ರಿಪ್ಟೋ ವ್ಯಾಲೆಟ್‌ಗಳ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಸರಿ. 2. ಗಿವ್ ಅವೇ ಮತ್ತು ಫಿಶಿಂಗ್: ಸಾಮಾಜಿಕ ಜಾಲತಾಣಗಳ ಮೂಲಕ ಕ್ರಿಪ್ಟೋಕರೆನ್ಸಿ ವರ್ಗಾವಣೆಗೆ ಪುಸಲಾಯಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಉತ್ತಮ ಬೆಲೆಗೆ ನಿಮ್ಮ ಕ್ರಿಪ್ಟೋಕರೆನ್ಸಿ ವರ್ಗಾವಣೆ ಮಾಡುವುದಾಗಿ ಆಸೆ ತೋರಿಸುವ ಖದೀಮರು, ನಿಮ್ಮ ಕ್ರಿಪ್ಟೋ ವ್ಯಾಲೆಟ್‌ ಮಾಹಿತಿಯನ್ನು ಪಡೆಯುವ ಪ್ರಯತ್ನ ಮಾಡುತ್ತಾರೆ. ಅಲ್ಲದೇ ಕೆಲವೊಮ್ಮೆ ಲಾಭಾಂಶದ ಹಣ ವರ್ಗಾವಣೆಗೆ ಬ್ಯಾಂಕ್ ಡಿಟೇಲ್ಸ್ ಕೇಳುವ ಸಾಧ್ಯುತೆಯೂ ಉಂಟು. ಇಷ್ಟೇ ಅಲ್ಲದೇ ಕೆಲವೊಮ್ಮೆ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ದೊರಕಿಸಿಕೊಡುವುದಾಗ ಭರವಸೆ ನೀಡುವ ಖದೀಮರು, ಇದಕ್ಕೆ ಬದಲಾಗಿ ಕ್ರಿಪ್ಟೋಕರೆನ್ಸಿ ವರ್ಗಾವಣೆ ಮಾಡುವಂತೆ ಕೇಳಿಕೊಳ್ಳುತ್ತಾರೆ. ಒಳ್ಳೆಯ ಉದ್ಯೋಗದ ಆಸೆಯಲ್ಲಿ ಶಿಕ್ಷಿಕತರೂ ಕೂಡ ಈ ವಂಚನೆಗೆ ಬಲಿಯಾಗಿರುವ ಹಲವು ಉದಾಹರಣೆಗಳಿವೆ. ಒಟ್ಟಿನಲ್ಲಿ ತಮ್ಮ ಕ್ರಿಪ್ಟೋ ವ್ಯಾಲೆಟ್‌ ಸುರಕ್ಷತೆ ಹೂಡಿಕೆದಾರನ ಜವಾಬ್ದಾರಿಯಾಗಿದ್ದು, ವಂಚಕರ ಮಾತುಗಳಿಗೆ ಬಲಿಯಾಗಿ ಕ್ರಿಪ್ಟೋಕರೆನ್ಸಿಯನ್ನು ಕಳೆದುಕೊಳ್ಳುವ ತಪ್ಪು ಮಾಡಬಾರದು.