ಇನ್ನೂ ಆರು ತಿಂಗಳು ಕಲ್ಲಿದ್ದಲಿಗೆ ಅಭಾವ, ಇಂಧನ ಕ್ಷೇತ್ರದಲ್ಲಿ ಬಿಕ್ಕಟ್ಟು - ಕೇಂದ್ರ ಸಚಿವ

ದೇಶದಲ್ಲಿ ಇಂಧನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು, ​ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರಗಳು ಕಲ್ಲಿದ್ದಲಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಸದ್ಯ ಸ್ಥಾವರಗಳಲ್ಲಿ ಕೇವಲ 3 ದಿನಕ್ಕೆ ಬೇಕಾದ ಕಲ್ಲಿದ್ದಲ ಸಂಗ್ರಹ ಮಾತ್ರ ಇದೆ.

ಇನ್ನೂ ಆರು ತಿಂಗಳು ಕಲ್ಲಿದ್ದಲಿಗೆ ಅಭಾವ, ಇಂಧನ ಕ್ಷೇತ್ರದಲ್ಲಿ ಬಿಕ್ಕಟ್ಟು - ಕೇಂದ್ರ ಸಚಿವ
Linkup
ಹೊಸದಿಲ್ಲಿ: ದೇಶದಲ್ಲಿ ಇಂಧನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು, ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲಿನ ತೀವ್ರ ಅಭಾವ ಕಾಣಿಸಿಕೊಂಡಿದೆ. ವಿದ್ಯುತ್ ಸ್ಥಾವರಗಳು ಸಾಕಷ್ಟು ಕಲ್ಲಿದ್ದಲನ್ನು ಹೊಂದಲು ಇನ್ನೂ ಆರು ತಿಂಗಳು ಬೇಕಾಗಬಹುದು ಎಂದು ಸ್ವತಃ ಕೇಂದ್ರ ಸಚಿವರು ಹೇಳಿದ್ದಾರೆ. ವಿದ್ಯುತ್ ಬೇಡಿಕೆ ಹೆಚ್ಚಾದ ನಂತರ ಮತ್ತು ಸ್ಥಳೀಯ ಕಲ್ಲಿದ್ದಲು ಉತ್ಪಾದನೆ ಕುಸಿತಗೊಂಡ ಹಿನ್ನೆಲೆಯಲ್ಲಿ ದೇಶದ ಅರ್ಧಕ್ಕಿಂತ ಹೆಚ್ಚು ವಿದ್ಯುತ್‌ ಉತ್ಪಾದನಾ ಸ್ಥಾವರಗಳು ಸ್ಥಗಿತಗೊಳ್ಳುವ ಭೀತಿಯನ್ನು ಎದುರಿಸುತ್ತಿವೆ. ಕಳೆದ ತಿಂಗಳ ಅಂತ್ಯಕ್ಕೆ ದೇಶದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಸರಾಸರಿ ನಾಲ್ಕು ದಿನಗಳಿಗೆ ಬೇಕಾದ ಹೆಚ್ಚುವರಿ ಕಲ್ಲಿದ್ದಲ್ಲಷ್ಟೇ ಇದೆ. ಇದು ವರ್ಷದ ಕನಿಷ್ಠ ಮಟ್ಟವಾಗಿದೆ. ಆಗಸ್ಟ್ ಆರಂಭದಲ್ಲಿ 13 ದಿನಗಳಿಗೆ ಬೇಕಾದಷ್ಟು ಕಲ್ಲಿದ್ದಲು ವಿದ್ಯುತ್‌ ಸ್ಥಾವರಗಳಲ್ಲಿ ಸಂಗ್ರಹವಿತ್ತು. ಇದು ಈಗ ಮತ್ತಷ್ಟು ಕುಸಿದಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಕೈ ಮೀರುತ್ತಲೇ ಇದೆ. "ಮುಂದಿನ ಐದರಿಂದ ಆರು, ನಾಲ್ಕರಿಂದ ಐದು ತಿಂಗಳಲ್ಲಿ ನಾನು ಆರಾಮವಾಗಿರುತ್ತೇನೆಯೋ ಇಲ್ಲವೋ ನನಗೆ ಗೊತ್ತಿಲ್ಲ" ಎಂದು ಸಂದರ್ಶನವೊಂದರಲ್ಲಿ ವಿದ್ಯುತ್‌ ಸಚಿವ ರಾಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಅಕ್ಟೋಬರ್ ಮಧ್ಯದಿಂದ ತಂಪಾದ ವಾತಾವರಣದೊಂದಿಗೆ (ಚಳಿಗಾಲ) ಬೇಡಿಕೆ ಸಾಮಾನ್ಯವಾಗಿ ನಿಧಾನವಾಗುತ್ತದೆಯಾದರೂ, ಆತಂಕ ತಪ್ಪಿದ್ದಲ್ಲ ಎಂಬ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಕಳೆದ ಒಂದು ವಾರದಲ್ಲಿ ಭಾರತದ ಕಲ್ಲಿದ್ದಲು ಸಮೂಹದಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಸಿಂಗ್ ಹೇಳಿದ್ದಾರೆ. 40 ಗಿಗಾ ವ್ಯಾಟ್ ನಿಂದ 50 ಗಿಗಾ ವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಘಟಕಗಳು ಪ್ರಸ್ತುತ ಮೂರು ದಿನಗಳಿಗಿಂತ ಕಡಿಮೆ ಇಂಧನ ದಾಸ್ತಾನು ಹೊಂದಿವೆ ಎಂದು ರಾಜ್ ಕುಮಾರ್ ಸಿಂಗ್ ಅವರು ಎಚ್ಚರಿಸಿದ್ದಾರೆ. ಭಾರತದ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್‌ ಸ್ಥಾವರಗಳ ಪಾಲು ಶೇ. 70ರಷ್ಟಿದೆ. ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ವಿದ್ಯುತ್‌ ಬಳಕೆ ಗಣನೀಯವಾಗಿ ಹೆಚ್ಚಾಗುವ ಮುನ್ಸೂಚನೆಯೂ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯ ಭಾರೀ ಹೆಚ್ಚಳಕ್ಕೆ ಮುಂದಾಗಿದ್ದರೂ ಸಹ, ಬೇಡಿಕೆಯಷ್ಟು ಉತ್ಪಾದನೆ ಸಾಧ್ಯವಾಗುತ್ತಿಲ್ಲ. ನೆರೆಯ ಚೀನಾದಂತೆಯೇ, ಭಾರತವು ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆಯನ್ನು ಕಾಣುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಇದೇ ವೇಳೆ ದೇಶೀಯ ಗಣಿ ಉತ್ಪಾದನೆಯ ಮೇಲೆ ಒತ್ತಡ ಮತ್ತು ಆಮದು ಮಾಡಿಕೊಳ್ಳುವ ಕಲ್ಲಿದ್ದಲಿನ ಬೆಲೆ ಏರಿಕೆಯ ಪರಿಣಾಮಗಳು ದೇಶದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿದೆ. ಗಣಿಗಳಿಂದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಖಚಿತಪಡಿಸಿಕೊಳ್ಳಲು ಸರ್ಕಾರಿ ಸಚಿವಾಲಯಗಳು ಸರಕಾರಿ ಒಡೆತನದ ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದಕ ಎನ್‌ಟಿಪಿಸಿ ಲಿಮಿಟೆಡ್‌ನೊಂದಿಗೆ ನಿಟಕ ಸಂಪರ್ಕದಲ್ಲಿವೆ ಎಂದು ಕೆಲಸ ಮಾಡುತ್ತಿವೆ ಎಂದು ಸಚಿವ ರಾಜ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.