ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ: ಅ.25ರಂದು ಟಾಪ್‌ 10 ಕ್ರಿಪ್ಟೋ ಕರೆನ್ಸಿಗಳ ಬೆಲೆ ಎಷ್ಟು?

ಕಳೆದ ಒಂದು ವಾರದಿಂದ ಸತತ ಏರಿಕೆ ದಾಖಲಿಸಿದ್ದ ವಿಶ್ವದ ಟಾಪ್‌ 10 ಕ್ರಿಪ್ಟೋಕರೆನ್ಸಿಗಳು ಸೋಮವಾರ (ಅಕ್ಟೋಬರ್ 25) ತಮ್ಮ ಮೌಲ್ಯ ಕಳೆದುಕೊಂಡಿವೆ. ಆದರೆ, ಬಿಟ್‌ಕಾಯಿನ್ ಮೌಲ್ಯದಲ್ಲಿ ಶೇಕಡಾ 4.1ರಷ್ಟು ಏರಿಕೆಗೊಂಡು 63,056.51 ಅಮೆರಿಕನ್ ಡಾಲರ್ ತಲುಪಿದೆ.

ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ: ಅ.25ರಂದು ಟಾಪ್‌ 10 ಕ್ರಿಪ್ಟೋ ಕರೆನ್ಸಿಗಳ ಬೆಲೆ ಎಷ್ಟು?
Linkup
ಹೊಸದಿಲ್ಲಿ: ಕಳೆದ ಒಂದು ವಾರದಿಂದ ಸತತ ಏರಿಕೆ ದಾಖಲಿಸಿದ್ದ ವಿಶ್ವದ ಟಾಪ್‌ 10 ಕ್ರಿಪ್ಟೋಕರೆನ್ಸಿಗಳು ಸೋಮವಾರ (ಅಕ್ಟೋಬರ್ 25) ತಮ್ಮ ಮೌಲ್ಯ ಕಳೆದುಕೊಂಡಿವೆ. ಆದರೆ, ಬಿಟ್‌ಕಾಯಿನ್ ಮೌಲ್ಯದಲ್ಲಿ ಶೇಕಡಾ 4.1ರಷ್ಟು ಏರಿಕೆಗೊಂಡು 63,056.51 ಅಮೆರಿಕನ್ ಡಾಲರ್ ತಲುಪಿದೆ. ಇಥೆರಿಯಂ (ಶೇ.0.32) ಮತ್ತು ಡೋಜೆಕಾಯಿನ್‌ಗಳ ಮೌಲ್ಯದಲ್ಲೂ ಹೆಚ್ಚಳ ಕಂಡಿದೆ. ಉಳಿದಂತೆ ಎಲ್ಲಾ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಇಳಿಕೆಯಾಗಿದೆ. ಪ್ರಸ್ತುತ ಮಾರುಕಟ್ಟೆ ಮೌಲ್ಯ 2,600,203,967,195 ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. ವಿಶ್ವದಾದ್ಯಂತ ಅನೇಕ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಗಳ ನಿಯಂತ್ರಣ ಹೇರಿದ್ದರೂ ಸಹ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆ ಏರುತ್ತಲೇ ಸಾಗಿದೆ. ಭಾರತದಲ್ಲಿಯೂ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರು ಬಿಲಿಯನ್ ಡಾಲರ್‌ಗಳಷ್ಟು ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಇಳಿಕೆಯಾಗಿದ್ದರೂ ಹಣದ ಹೂಡಿಕೆ ಹೆಚ್ಚಾಗಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 63,056.51 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಶೇಕಡಾ 4.13ರಷ್ಟು ಏರಿಕೆಗೊಂಡಿದ್ದು, ಈ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 1,186,537,672,159 ಡಾಲರ್‌ನಷ್ಟಿದೆ. ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 63,343.31 ಡಾಲರ್ ಮತ್ತು ಕಡಿಮೆ ಬೆಲೆ 59,643.35 ಯುಎಸ್‌ ಡಾಲರ್ ಆಗಿತ್ತು. ಕಳೆದ ವಾರ ಶೇ 2.53ರಷ್ಟು ಏರಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 110.82 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 66,974.77 ಡಾಲರ್ ಆಗಿದೆ. ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಎಷ್ಟು ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಕರೆನ್ಸಿಗಳ ಮೌಲ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಏರಿಳಿತವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಟೋಬರ್‌ 25ರಂದು ಅವುಗಳ ಮೌಲ್ಯ ಹೀಗಿದೆ.
  • ಬಿಟ್‌ಕಾಯಿನ್‌: $ 63,056
  • ಇಥೆರಿಯಂ: $4,142.96
  • ಬಿನಾನ್ಸ್‌ ಕಾಯಿನ್‌ : $481.17
  • ಟೆಥರ್‌: $1
  • ಕಾರ್ಡಾನೋ: $2.14
  • ಡೋಜೆಕಾಯಿನ್‌: $0.2699
  • ಎಕ್ಸ್‌ಆರ್‌ಪಿ: $1.09
  • ಪೊಲ್ಕಾಡಾಟ್‌: $43.45
  • ಯುಎಸ್‌ಡಿ ಕಾಯಿನ್‌: $1
  • ಯುನಿಸ್ವಾಪ್‌: $26.33