ಕ್ಯಾನ್ಸರ್‌ ಪೀಡಿತರಿಗಾಗಿ ಕೇಶ ದಾನ ಮಾಡಿದ ಮೈಸೂರಿನ ಯುವತಿ!

ಕೂದಲು ಯುವತಿಯರಿಗೆ ಬಲು ಪ್ರೀತಿ. ಕೂದಲಿಗೆ ಕೊಂಚ ಸಮಸ್ಯೆ ಆದರೂ ಅವರು ಸಹಿಸುವುದಿಲ್ಲ. ಈ ಮಧ್ಯೆ ಮೈಸೂರಿನ ಯುವತಿಯೊಬ್ಬಳು ಕ್ಯಾನ್ಸರ್‌ ಪೀಡಿತರಿಗಾಗಿ ತನ್ನ ಕೇಶರಾಶಿಯನ್ನೇ ಕತ್ತರಿಸಿ ದಾನವಾಗಿ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ಯಾರಿದು ಯುವತಿ? ಯಾಕಾಗಿ ಕೇಶವನ್ನು ದಾನ ಮಾಡುವ ಯೋಚನೆ ಬಂತು? ಇಲ್ಲಿದೆ ಈ ಬಗ್ಗೆ ಮಾಹಿತಿ.

ಕ್ಯಾನ್ಸರ್‌ ಪೀಡಿತರಿಗಾಗಿ ಕೇಶ ದಾನ ಮಾಡಿದ ಮೈಸೂರಿನ ಯುವತಿ!
Linkup
: ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಕೇಶರಾಶಿ ಎಂದರೆ ಎಲ್ಲಿಲ್ಲದೆ ಪ್ರೀತಿ. ಆದರೆ, ಮೈಸೂರಿನ ಯುವತಿಯೊಬ್ಬಳು ಪೀಡಿತರಿಗಾಗಿ ತನ್ನ ಕೇಶರಾಶಿಯನ್ನೇ ಕತ್ತರಿಸಿ ದಾನವಾಗಿ ನೀಡಿದ್ದಾಳೆ. ಮೈಸೂರಿನ ಪಿರಿಯಾ ಪಟ್ಟಣ ತಾಲೂಕಿನ ಕಿತ್ತೂರಿನ ಸ್ವರ್ಣ ಈಗಷ್ಟೆ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಮೊದಲಿನಿಂದಲೂ ಕ್ಯಾನ್ಸರ್‌ ಪೀಡಿತರ ನೋವನ್ನು ಕಣ್ಣಾರೆ ಕಂಡಿದ್ದ ಸ್ವರ್ಣ ತನ್ನ ಕೇಶರಾಶಿಯನ್ನು ಚಾರಿಟಿಗೆ ನೀಡಬೇಕೆಂಬ ಅಭಿಲಾಶೆ ಇಟ್ಟುಕೊಂಡಿದ್ದರು. ಕ್ಯಾನ್ಸರ್‌ ಪೀಡಿತರಿಗೆ ತನ್ನ ಕೇಶವನ್ನು ದಾನ ಮಾಡುತ್ತೇನೆ ಎಂದಾಗ ಆಕೆಯ ಪೋಷಕರು ಕೂಡ ಸಮ್ಮತಿ ಸೂಚಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕೂದಲಿನ ಆರೈಕೆ ಮಾಡಿದ್ದ ಸ್ವರ್ಣ ಬೆಂಗಳೂರಿನ ಜಯನಗರದಲ್ಲಿರುವ ಹೇರ್‌ ಡೊನೇಷನ್‌ ಸೆಂಟರ್‌ ಎಂಬ ಎನ್‌ಜಿಒಗೆ ತನ್ನ ತಲೆ ಕೂದಲನ್ನು ದಾನ ಮಾಡಿ ದ್ದಾರೆ. ಈ ಸಂಸ್ಥೆ ಕೂದಲನ್ನು ಸಂಗ್ರಹಿಸಿ ಅದರಿಂದ ವಿಗ್‌ ತಯಾರಿಸಿ ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ನೀಡುತ್ತದೆ. ''ನನ್ನ ಮನೆಯ ಪಕ್ಕದ ನಿವಾಸಿ ಯೊಬ್ಬರು ಕ್ಯಾನ್ಸರ್‌ನಿಂದ ಎಷ್ಟೆಲ್ಲಾ ನೋವನ್ನು ಅನುಭವಿಸಿದ್ದರು ಎಂಬುದನ್ನು ಕಣ್ಣಾರೆ ಕಂಡಿದ್ದೆ. ಅವರು ಪ್ರತಿ ಬಾರಿ ಚಿಕಿತ್ಸೆಗೆ ಹೋಗುವಾಗ ತಲೆಯನ್ನು ವೇಲ್‌ನಿಂದ ಮುಚ್ಚಿಕೊಂಡು ಹೋಗು ತ್ತಿದ್ದರು. ಇದನ್ನು ನೋಡಿದಾಗ ಲೆಲ್ಲಾ ಸಂಕಟವಾಗು ತ್ತಿತ್ತು. ಆಗಲೇ ನನ್ನ ಕೂದಲನ್ನು ದಾನ ಮಾಡುವ ಮನಸ್ಸು ಮಾಡಿದೆ. ಸದ್ಯ ವಿದ್ಯಾಭ್ಯಾಸ ಮುಗಿದ ಕಾರಣ ಇದೀಗ ನನ್ನ ಕೇಶವನ್ನು ದಾನ ನೀಡಿದ್ದೇನೆ. ಇದಕ್ಕಾಗಿ 6 ತಿಂಗಳ ಮೊದಲು ಪೋಷಕರು ಹಾಗೂ ಸ್ನೇಹಿತರಿಗೆ ಹೇಳಿ ಮಾನಸಿಕವಾಗಿ ಸಿದ್ಧವಾಗಿದ್ದೆ. ಕೇಶದಾನದಿಂದ ತುಂಬಾ ಖುಷಿಯಾಗಿದ್ದೇನೆ '' ಎಂದು ಪತ್ರಿಕೆಗೆ ತಿಳಿಸಿದ್ದಾರೆ.