ಮುಜರಾಯಿ ಇಲಾಖೆ ದೊರಕಿರುವುದು ನನ್ನ ಹಿಂದಿನ ಜನ್ಮದ ಪುಣ್ಯವೆನಿಸುತ್ತದೆ; ಶಶಿಕಲಾ ಜೊಲ್ಲೆ

ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣ ಕುರಿತಂತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮುಜರಾಯಿ ಇಲಾಖೆ ದೊರಕಿರುವುದು ನನ್ನ ಹಿಂದಿನ ಜನ್ಮದ ಪುಣ್ಯವೆನಿಸುತ್ತದೆ. ನಮ್ಮ ಹಿಂದು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಅದಕ್ಕೆ ಅರ್ಚಕರ ಪಾತ್ರವೂ ಮಹತ್ವದ್ದಾಗಿದೆ. ಸರಕಾರ ನಮ್ಮ ಸಂಸ್ಕೃತಿ ರಕ್ಷಣೆಗೆ ಬದ್ದವಾಗಿದೆ ಎಂದು ರಾಜ್ಯ ಮುಜರಾಯಿ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಮುಜರಾಯಿ ಇಲಾಖೆ ದೊರಕಿರುವುದು ನನ್ನ ಹಿಂದಿನ ಜನ್ಮದ ಪುಣ್ಯವೆನಿಸುತ್ತದೆ; ಶಶಿಕಲಾ ಜೊಲ್ಲೆ
Linkup
ಬೆಂಗಳೂರು: ಮುಜರಾಯಿ ಇಲಾಖೆ ದೊರಕಿರುವುದು ನನ್ನ ಹಿಂದಿನ ಜನ್ಮದ ಪುಣ್ಯವೆನಿಸುತ್ತದೆ ಎಂದು ರಾಜ್ಯ ಮುಜರಾಯಿ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಕರ್ನಾಟಕ ರಾಜ್ಯ ಮುಜರಾಯಿ ದೇವಸ್ಥಾನಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಶ್ರಿವಾಸ್ತವ ನೇತೃತ್ವದ ಅರ್ಚಕರ ನಿಯೋಗದಿಂದ ಗುರುವಾರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣ ಕುರಿತಂತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮುಜರಾಯಿ ಇಲಾಖೆ ದೊರಕಿರುವುದು ನನ್ನ ಹಿಂದಿನ ಜನ್ಮದ ಪುಣ್ಯವೆನಿಸುತ್ತದೆ. ನಮ್ಮ ಹಿಂದು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಅದಕ್ಕೆ ಅರ್ಚಕರ ಪಾತ್ರವೂ ಮಹತ್ವದ್ದಾಗಿದೆ. ಸರಕಾರ ನಮ್ಮ ಸಂಸ್ಕೃತಿ ರಕ್ಷಣೆಗೆ ಬದ್ದವಾಗಿದೆ ಎಂದು ಹೇಳಿದರು. ಮುಜರಾಯಿ ಇಲಾಖೆಯಲ್ಲಿ ಎ, ಬಿ, ಸಿ ದರ್ಜೆಯ ದೇವಾಲಯಗಳಲ್ಲಿಸಿ ದರ್ಜೆಯ ದೇವಸ್ಥಾನಗಳ ಅರ್ಚಕರ ಸಮಸ್ಯೆಗಳು ಸಾಕಷ್ಟಿವೆ. ಅರ್ಚಕರ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕ್ಯಾನ್ಸರ್‌, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುವ ಅರ್ಚಕರಿಗೆ ವಿಮೆ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ದೇವಾಲಯಗಳ ಸುತ್ತಮುತ್ತ ಒತ್ತುವರಿ ಭೂಮಿಯನ್ನು ಶೀಘ್ರವೇ ಸರ್ವೆ ನಡೆಸಿ ವಶ; ಶಶಿಕಲಾ ಜೊಲ್ಲೆದೊಡ್ಡ ಬಳ್ಳಾಪುರ: ದೇವಾಲಯಗಳ ಸುತ್ತಮುತ್ತ ಒತ್ತುವರಿಯಾಗಿರುವ ಭೂಮಿಯನ್ನು ಶೀಘ್ರವೇ ಸರ್ವೆ ನಡೆಸಿ ವಶಪಡಿಸಿಕೊಳ್ಳಲಾಗುವುದು. ಅಲ್ಲದೆ, ಮುಜರಾಯಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಹಾಗೂ ಹಜ್‌ ಸಚಿವೆ ಶಶಿಕಲಾ ಅ. ಜೊಲ್ಲೆ ತಿಳಿಸಿದರು. ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ದೇವಾಲಯಗಳು ಬಂದ್‌ ಆಗಿರುವುದರಿಂದ ಇತ್ತೀಚೆಗೆ ದೇವಾಲಯಕ್ಕೆ ಬರುತ್ತಿದ್ದ ಆದಾಯದಲ್ಲಿ ಬಹಳಷ್ಟು ನಷ್ಟ ಉಂಟಾಗಿದೆ. ಹಾಗಾಗಿ, ಕೋವಿಡ್‌ ಸೋಂಕಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆ ಆಗಿರುವ ಜಿಲ್ಲೆಗಳ ದೇವಾಲಯಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಚಿಂತನೆ ಮಾಡಲಾಗಿದೆ. ಈ ಕುರಿತು ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಮುಜರಾಯಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಆರಂಭವಾಗಿದ್ದ ಸಪ್ತ ಪದಿ ಕಾರ್ಯಕ್ರಮವನ್ನು ಕೋವಿಡ್‌ ಸೋಂಕು ಹೆಚ್ಚಾದ ಹಿನ್ನೆಲೆ, ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರಾಜ್ಯದಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಪ್ತ ಪದಿ ಕಾರ್ಯಕ್ರಮ ಪುನರಾರಂಭಿಸಲಾಗುವುದು ಎಂದು ಹೇಳಿದರು.