ಕಾನೂನು ಹೋರಾಟ ನಡೆಸುವ ಬದಲು ತಾಯಿ ಹೃದಯ ಗೆಲ್ಲಿ; ಹೈಕೋರ್ಟ್ ನಿಂದ ಮಗಳಿಗೆ ಬುದ್ಧಿಮಾತು!

"ತಾಯಿಯ ಆಸ್ತಿಗಾಗಿ ಕೋರ್ಟ್‌ ಗೆ ಬಂದಿದ್ದೀರಿ. ಮೊದಲು ತಾಯಿ ಹೃದಯ ಗೆಲ್ಲು, ನೀವು ದೇವರನ್ನು ನೋಡಿಲ್ಲ. ನಿಮಗೆ ಜನ್ಮ ನೀಡಿರುವ ತಾಯಿಯೇ ನಿಮಗೆ ದೇವರು. ಈ ವಿಚಾರದಲ್ಲಿ ನಿಮ್ಮ ಪರವಾಗಿ ನಿಲ್ಲಲಾಗದು'' ಎಂದು ಹೈಕೋರ್ಟ್ ಮಗಳಿಗೆ ಬುದ್ಧಿಮಾತು ಹೇಳಿದೆ.

ಕಾನೂನು ಹೋರಾಟ ನಡೆಸುವ ಬದಲು ತಾಯಿ ಹೃದಯ ಗೆಲ್ಲಿ; ಹೈಕೋರ್ಟ್ ನಿಂದ ಮಗಳಿಗೆ ಬುದ್ಧಿಮಾತು!
Linkup
ಬೆಂಗಳೂರು; ''ಮಕ್ಕಳು ವಿರುದ್ಧ ಇರಬಹುದು. ಆದರೆ ಯಾವ ತಾಯಿಯೂ ಮಕ್ಕಳ ವಿರುದ್ಧ ಇರುವುದಿಲ್ಲ. ಮೊದಲು ತಾಯಿಯ ಪಾದಕ್ಕೆ ನಮಸ್ಕರಿಸಿ ಆಕೆಯ ಮುಖ ನೋಡಿ, ಹೃದಯ ಗೆಲ್ಲಿ. ಆಗ ತಾಯಿಯೇ ಮತ್ತೆ ನಿಮಗೆ ನಿವೇಶನ ದಾನ ನೀಡಲು ಮನಸ್ಸು ಮಾಡಬಹುದು..''ಹೀಗೆಂದು ಹೈಕೋರ್ಟ್‌, ಆಸ್ತಿಗಾಗಿ 70 ವರ್ಷದ ತಾಯಿ ಜಯಮ್ಮ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಮಗಳಾದ ಶಾಂತಮ್ಮ ಅವರಿಗೆ ಮಂಗಳವಾರ ಬುದ್ದಿವಾದ ಹೇಳಿತು. ತಾಯಿ ಹೆಸರಿನಲ್ಲಿರುವ ಆಸ್ತಿಯನ್ನು ದಾನ (ಗಿಫ್ಟ್‌ ಡೀಡ್‌) ಮಾಡಿಸಿಕೊಂಡ ಕ್ರಮ ರದ್ದುಪಡಿಸಿದ್ದ ಉಪವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯು ಹಿರಿಯ ನ್ಯಾ.ಸತೀಶ್‌ಚಂದ್ರ ಶರ್ಮಾ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ಪೀಠ ''ತಾಯಿಯ ಆಸ್ತಿಗಾಗಿ ಕೋರ್ಟ್‌ ಗೆ ಬಂದಿದ್ದೀರಿ. ಮೊದಲು ತಾಯಿ ಹೃದಯ ಗೆಲ್ಲು, ನೀವು ದೇವರನ್ನು ನೋಡಿಲ್ಲ. ನಿಮಗೆ ಜನ್ಮ ನೀಡಿರುವ ತಾಯಿಯೇ ನಿಮಗೆ ದೇವರು. ಈ ವಿಚಾರದಲ್ಲಿ ನಿಮ್ಮ ಪರವಾಗಿ ನಿಲ್ಲಲಾಗದು'' ಎಂದು ಅಭಿಪ್ರಾಯಪಟ್ಟಿತು. ''ಈ ವಿಚಾರದಲ್ಲಿ ಮೇಲ್ಮನವಿದಾರರು ಯಾವುದೇ ಅನುಕಂಪಕ್ಕೆ ಅರ್ಹವಲ್ಲ. ನ್ಯಾಯಾಲಯ ಅವರ ನಡೆ ಒಪ್ಪುವುದಿಲ್ಲ. ಉಪವಿಭಾಗಾಧಿಕಾರಿಯ ಆದೇಶ ಸೂಕ್ತ ಸರಿ'' ಎಂದು ಅಭಿಪ್ರಾಯಪಟ್ಟ ಪೀಠ, ಮೇಲ್ಮನವಿ ವಜಾಗೊಳಿಸಿತು. ಪ್ರಕರಣದ ಹಿನ್ನೆಲೆಜೆ.ಪಿ.ನಗರದ ಶಾಂತಮ್ಮ ಎಂಬುವರು, ತನ್ನ ತಾಯಿ ಜಯಮ್ಮ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ, ಅವರ ಹೆಸರಿನಲ್ಲಿದ್ದ ಕುಮಾರಸ್ವಾಮಿ ಬಡಾವಣೆಯ 600 ಚದರಡಿ ನಿವೇಶನವನ್ನು ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯಿದೆಯಡಿ 2015ರಲ್ಲಿ ದಾನ ಪತ್ರ ಮಾಡಿಸಿಕೊಂಡಿದ್ದರು. ಆಗ ತಾಯಿ, ಮೋಸದಿಂದ ಬರೆಸಿಕೊಂಡಿದ್ದಾರೆ ಎಂದು ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿ ಮೆಟ್ಟಿ-ಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿ 2018ರ ನ.28ರಂದು ತಾಯಿ ಮಗಳಿಗೆ ನೀಡಿದ್ದ ದಾನಪತ್ರ ರದ್ದುಪಡಿಸಿತ್ತು. ಅದನ್ನು ಪ್ರಶ್ನಿಸಿ ಮಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.