ಬೆಂಗಳೂರು : ತನ್ನನ್ನು ಪ್ರೀತಿಸದ ಸಿಟ್ಟಿಗೆ ಕೆಲಸದ ಯುವತಿಯ ಕೆನ್ನೆಗೆ ಬಾರಿಸಿದ ಮ್ಯಾನೇಜರ್
ಬೆಂಗಳೂರು : ತನ್ನನ್ನು ಪ್ರೀತಿಸದ ಸಿಟ್ಟಿಗೆ ಕೆಲಸದ ಯುವತಿಯ ಕೆನ್ನೆಗೆ ಬಾರಿಸಿದ ಮ್ಯಾನೇಜರ್
ಈ ಸಮಾಜದಲ್ಲಿ ಎಂತಹುದೆಲ್ಲ ಮನುಷ್ಯರು ಇರುತ್ತಾರೆ ಎನ್ನುವುದಕ್ಕೆ ಬೆಸ್ಟ್ ಉದಾಹರಣೆಯೊಂದು ಸಿಕ್ಕಿದೆ. ತನ್ನನ್ನು ಪ್ರೀತಿಸುತ್ತಿಲ್ಲ ಎನ್ನುವ ಕಾರಣಕ್ಕೆ ಮ್ಯಾನೇಜರೊಬ್ಬ ತನ್ನ ಕೈ ಕೆಳಗೆ ಕೆಲಸ ಮಾಡುವ ಯುವತಿಯ ಕೆನ್ನೆಗೆ ಜೋರಾಗಿ ಬಾರಿಸಿರುವ ಘಟನೆ ಬಸವನಗುಡಿಯ ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರುವ ಡೊಮಿನೋಸ್ ಪಿಜ್ಜಾ ಹಟ್‌ನಲ್ಲಿ ನಡೆದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ತನ್ನ ಕೈಕೆಳಗೆ ಕೆಲಸ ಮಾಡುತ್ತಿರುವಾಕೆ ತನ್ನನ್ನು ಪ್ರೀತಿಸುತ್ತಿಲ್ಲ ಎಂದು ಮ್ಯಾನೇಜರ್‌ವೊಬ್ಬ ಆಕೆಯ ಕಪಾಳಕ್ಕೆ ಬಾರಿಸಿರುವ ಘಟನೆ ನಗರದ ಡೊಮಿನೋಸ್ ಪಿಜ್ಜಾ ಹಟ್‌ನಲ್ಲಿ ನಡೆದಿದೆ. ಬಸವನಗುಡಿಯ ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರುವ ಡೊಮಿನೋಸ್ ಪಿಜ್ಜಾ ಹಟ್‌ನ , ಅಲ್ಲಿಯೇ ಕೆಲಸದಲ್ಲಿರುವ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ.
ಆದರೆ ಆಕೆ ಬೇರೆ ಒಬ್ಬನನ್ನು ಪ್ರೀತಿಸುತ್ತಿದ್ದಳು. ಇದರಿಂದ ಕೋಪಗೊಂಡ ಮ್ಯಾನೇಜರ್, ಕೆಲಸದ ಸ್ಥಳದಲ್ಲೇ ಆಕೆಗೆ ಹೊಡೆದು ರಂಪ ಮಾಡಿದ್ದಾನೆ. ಆತ ಹೊಡೆದ ರಭಸಕ್ಕೆ ಆಕೆ ಧೊಪ್ಪೆಂದು ಕೆಳಕ್ಕೆ ಬಿದ್ದಿದ್ದಾಳೆ. ಹೊಡೆತ ತಿಂದು ಆಕೆ ಬೀಳುವ ದೃಶ್ಯವನ್ನು ವಿಡಿಯೋ ಮಾಡಲಾಗಿದೆ. ಆದರೆ ಆಕೆ ಕೆಲಸ ಹೋಗುತ್ತದೆ ಎಂಬ ಭಯಕ್ಕೆ ಪೊಲೀಸರಿಗೆ ದೂರು ಕೊಟ್ಟಿಲ್ಲಎಂದು ತಿಳಿದು ಬಂದಿದೆ.