'ಕಣ್ಣು ಕೀಳುತ್ತೇನೆ, ಕೈ ಕತ್ತರಿಸುತ್ತೇನೆ': ಪಕ್ಷದ ಮುಖಂಡನಿಗೆ ದಿಗ್ಬಂಧನ ಹಾಕಿದವರಿಗೆ ಬಿಜೆಪಿ ಸಂಸದನ ಎಚ್ಚರಿಕೆ

ಪಕ್ಷದ ಮುಖಂಡ ಮನೀಶ್ ಗ್ರೋವರ್ ಅವರನ್ನು ವಿರೋಧಿಸುವವರ ಕಣ್ಣು ಕೀಳುತ್ತೇನೆ ಮತ್ತು ಕೈಗಳನ್ನು ಕತ್ತರಿಸುತ್ತೇನೆ ಎಂದು ಹರ್ಯಾಣದ ರೋಹ್ಟಕ್ ಕ್ಷೇತ್ರದ ಬಿಜೆಪಿ ಸಂಸದ ಅರವಿಂದ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

'ಕಣ್ಣು ಕೀಳುತ್ತೇನೆ, ಕೈ ಕತ್ತರಿಸುತ್ತೇನೆ': ಪಕ್ಷದ ಮುಖಂಡನಿಗೆ ದಿಗ್ಬಂಧನ ಹಾಕಿದವರಿಗೆ ಬಿಜೆಪಿ ಸಂಸದನ ಎಚ್ಚರಿಕೆ
Linkup
ಚಂಡೀಗಡ: ಬಿಜೆಪಿ ಮುಖಂಡ ಅವರನ್ನು ವಿರೋಧಿಸುವವರ ಕಣ್ಣು ಕಿತ್ತು, ಕೈ ಕತ್ತರಿಸಿ ಹಾಕುವುದಾಗಿ ಹರ್ಯಾಣದ ಬಿಜೆಪಿ ಸಂಸದ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ ಅವರು, 25 ವರ್ಷಗಳಿಂದಲೂ ಕಾಂಗ್ರೆಸ್ ಅಧಿಕಾರಕ್ಕಾಗಿ ಪರದಾಡುತ್ತಿದೆ. 2019ರ ಚುನಾವಣೆ ಬಳಿಕ ದುಷ್ಯಂತ್ ಚೌಟಾಲಾ ಅವರ ಜೆಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಬಿಜೆಪಿ ಮುಖಂಡ ಮನೀಶ್ ಗ್ರೋವರ್ ಅವರು ಶುಕ್ರವಾರ ರೋಹ್ಟಕ್ ಜಿಲ್ಲೆಯ ಕಿಲೋಯಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದ ಒಳಗಿದ್ದಾಗಲೇ ಕುಪಿತ ರೈತರು ಅವರಿಗೆ ಮುತ್ತಿಗೆ ಹಾಕಿದ್ದರು. ಅರವಿಂದ್ ಶರ್ಮಾ ಅವರು ರೋಹ್ಟಕ್ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ. ಅವರು ತಮ್ಮ ಪಕ್ಷದ ಮುಖಂಡನ ಪರ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅವರನ್ನು ವಿರೋಧಿಸುವವರು ಯಾರೇ ಆಗಿದ್ದರೂ ಅವರ ಕಣ್ಣುಗಳನ್ನು ಕೀಳುತ್ತೇನೆ ಮತ್ತು ಕೈಗಳನ್ನು ಕತ್ತರಿಸುತ್ತೇನೆ ಎಂದು ಅವರು ಬೆದರಿಕೆ ಹಾಕಿದ್ದಾರೆ. ಅವರ ಹೇಳಿಕೆಗೆ ಪ್ರೇಕ್ಷಕರಿಂದ ಭಾರಿ ಕರತಾಡನ ಮತ್ತು ಘೋಷಣೆಯ ಬೆಂಬಲ ಸಿಕ್ಕಿದೆ. ಕೃಷಿ ಕಾಯ್ದೆಗಳ ವಿರುದ್ಧ ಸುದೀರ್ಘ ಸಮಯದಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ವಾಗ್ದಾಳಿ ನಡೆಸಿದ್ದ ಮನೀಶ್ ಗ್ರೋವರ್, ನಿರುದ್ಯೋಗಿ ಕುಡುಕರು ಮತ್ತು ವಿಧ್ವಂಸಕ ಶಕ್ತಿಗಳು ಪ್ರತಿಭಟನೆ ನಡೆಸುತ್ತಿವೆ ಎಂದು ಆರೋಪಿಸಿದ್ದರು. ಬಿಜೆಪಿ ಮುಖಂಡ ಗ್ರೋವರ್ ಹಾಗೂ ಅವರ ಜತೆಗಾರರಿಗೆ ಸುಮಾರು ಎಂಟು ಗಂಟೆಗಳ ಕಾಲ ದೇವಸ್ಥಾನದ ಒಳಗೆ ದಿಗ್ಬಂಧನ ವಿಧಿಸಲಾಗಿತ್ತು. ಬಳಿಕ ಗ್ರೋವರ್ ಕೈಮುಗಿದು ಕ್ಷಮೆಯಾಚಿಸಿದ ಬಳಿಕವೇ ಒಳಗಿದ್ದ ಎಲ್ಲರನ್ನೂ ಹೊರಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ಈ ಇಕ್ಕಟ್ಟಿನ ಸನ್ನಿವೇಶದಿಂದ ಪಾರಾದ ಬಳಿಕ ಗ್ರೋವರ್ ಬೇರೆಯದೇ ಹೇಳಿಕೆ ನೀಡಿದ್ದಾರೆ. ತಾವು ಕ್ಷಮೆ ಕೇಳಬೇಕೆಂಬ ಒತ್ತಾಯವನ್ನು ನಿರಾಕರಿಸಿದ್ದು, ಎಲ್ಲರತ್ತ ಕೈ ಬೀಸುವಂತೆ ಕೋರಲಾಗಿತ್ತು. 'ನಾವು ಕ್ಷಮೆ ಕೇಳಿಲ್ಲ. ನಾನು ಬಯಸಿದಾಗಲೆಲ್ಲ ಈ ದೇವಸ್ಥಾನಕ್ಕೆ ಬರುತ್ತೇನೆ' ಎಂದು ಹೇಳಿದ್ದಾರೆ. ಸಚಿವ ರವೀಂದ್ರ ರಾಜು, ರೋಹ್ಟಕ್ ಮೇಯರ್ ಮನಮೋಹನ್ ಗೋಯಲ್ ಮತ್ತು ಪಕ್ಷದ ಮುಖಂಡ ಸತೀಶ್ ನಂದಲ್ ಕೂಡ ದೇವಸ್ಥಾನದ ಒಳಗೆ ಒತ್ತೆಯಾಳಾಗಿದ್ದರು. ಎಲ್ಲಾ ದಿಕ್ಕುಗಳಿಂದಲೂ ದೇವಸ್ಥಾನವನ್ನು ಸುತ್ತುವರಿಯುವಂತೆ ಜನರ ಗುಂಪಿಗೆ ರೈತರು ಸೂಚಿಸಿದ್ದರು. ಹರ್ಯಾಣದ ಮಾಜಿ ಸಚಿವರೂ ಆಗಿರುವ ಗ್ರೋವರ್ ಅವರು, ರೈತರ ಪ್ರತಿಭಟನೆಯಾದ ಕೃಷಿ ಆಂದೋಲನವು ಎಷ್ಟು ಕಾಲ ನಡೆಯುತ್ತದೆಯೋ ಅಲ್ಲಿಯವರೆಗೂ ಯಾವುದೇ ಸಾರ್ವಜನಿಕ ಸಭೆ ಅಥವಾ ಕಾರ್ಯಕ್ರಮವನ್ನು ಆಯೋಜಿಸುವಂತಿಲ್ಲ ಎಂಬ ಷರತ್ತಿನ ಮೇರೆಗೆ ಅವರನ್ನು ದೇವಸ್ಥಾನದ ಬಂಧನದಿಂದ ಹೊರಗೆ ಬಿಡಲಾಗಿತ್ತು.