ಭವಿಷ್ಯದಲ್ಲಿ ನೀಲಿ ಚಿತ್ರದ ನೇರ ಪ್ರಸಾರಕ್ಕೆ ಯೋಜನೆ ರೂಪಿಸಿದ್ದ ರಾಜ್‌ ಕುಂದ್ರಾ; ಪೊಲೀಸರ ಮಾಹಿತಿ

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ಅವರಿಗೆ, ನೀಲಿ ಚಿತ್ರ ದಂಧೆಯನ್ನು ಬಾಲಿವುಡ್‌ನಂತೆಯೇ ಉದ್ಯಮ ಮಾಡಿಕೊಳ್ಳುವುದು. ಆ್ಯಪ್‌ಗಳಲ್ಲಿ ನೀಲಿ ಚಿತ್ರಗಳನ್ನು ನೇರಪ್ರಸಾರ ಮಾಡುವ ಮೂಲಕ ಕೋಟ್ಯಂತರ ರೂ. ಗಳಿಸುವುದು ಯೋಜನೆಯಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಭವಿಷ್ಯದಲ್ಲಿ ನೀಲಿ ಚಿತ್ರದ ನೇರ ಪ್ರಸಾರಕ್ಕೆ ಯೋಜನೆ ರೂಪಿಸಿದ್ದ ರಾಜ್‌ ಕುಂದ್ರಾ; ಪೊಲೀಸರ ಮಾಹಿತಿ
Linkup
ಮುಂಬಯಿ: ನೀಲಿ ಚಿತ್ರಗಳ ನಿರ್ಮಾಣ ಹಾಗೂ ಆ್ಯಪ್‌ಗಳ ಮೂಲಕ ಅವುಗಳ ಹಂಚಿಕೆ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ, ಭವಿಷ್ಯದಲ್ಲಿ ನೀಲಿ ಚಿತ್ರಗಳ ನೇರಪ್ರಸಾರ ಮಾಡುವ ಯೋಜನೆ ಹೊಂದಿದ್ದರು ಎಂದು ತಿಳಿದುಬಂದಿದೆ. ಬಾಲಿವುಡ್‌ನಂತೆಯೇ ದಂಧೆಯನ್ನು ಉದ್ಯಮ ಮಾಡಿಕೊಳ್ಳುವುದು. ಆ್ಯಪ್‌ಗಳಲ್ಲಿ ನೀಲಿ ಚಿತ್ರಗಳನ್ನು ನೇರಪ್ರಸಾರ ಮಾಡುವ ಮೂಲಕ ಕೋಟ್ಯಂತರ ರೂ. ಗಳಿಸುವುದು ರಾಜ್‌ ಕುಂದ್ರಾ ಯೋಜನೆಯಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ರಾಜ್‌ ಕುಂದ್ರಾರನ್ನು ಬಂಧಿಸಿ, ಜುಲೈ 23ರವರೆಗೆ ವಶಕ್ಕೆ ಪಡೆದಿರುವ ಪೊಲೀಸರು ನಡೆಸುತ್ತಿರುವ ತನಿಖೆಯಿಂದ ದಿನಕ್ಕೊಂದು ಹೊಸ ಮಾಹಿತಿ, ಬೃಹತ್‌ ಸಂಚು ಹೊರಬರುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 11 ಮಂದಿಯನ್ನು ಬಂಧಿಸಿದ್ದು, ಜಾಲದ ವ್ಯಾಪ್ತಿ ಹೆಚ್ಚುತ್ತಿದೆ. ಮುಂಬಯಿ ಅಪರಾಧ ವಿಭಾಗದ ಪೊಲೀಸರು ರಾಜ್‌ ಕುಂದ್ರಾ ಸೇರಿ ಹಲವು ಆರೋಪಿಗಳ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ಎರಡು ಬ್ಯಾಂಕ್‌ ಖಾತೆಗಳ ಮಧ್ಯೆ ಕೇಸ್‌ ದಾಖಲಾಗುವ ಒಂದು ತಿಂಗಳು ಮುಂಚೆ, ಅಂದರೆ ಕಳೆದ ಜನವರಿಯಲ್ಲಿ ವಹಿವಾಟು ನಡೆಸಲಾಗಿದೆ.