ಕಾಂಗ್ರೆಸ್‌ ಲೆಟರ್‌ಹೆಡ್‌ ದುರ್ಬಳಕೆ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್‌ ಸಿಂಗ್‌, ವಕ್ತಾರ ಸಂಬಿತ್‌ ಪಾತ್ರ ವಿರುದ್ಧ ಎಫ್‌ಐಆರ್‌

ಸುಳ್ಳು ಸುದ್ದಿ ಹರಡುವ 'ಟೂಲ್‌ಕಿಟ್‌'ವೊಂದನ್ನು ಸೃಷ್ಟಿಸಿದ ಆರೋಪದ ಮೇರೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್‌ ಸಿಂಗ್‌ ಮತ್ತು ವಕ್ತಾರ ಸಂಬಿತ್‌ ಪಾತ್ರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ​​ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್‌ ಎನ್‌ಎಸ್‌ಯುಐ ಅಧ್ಯಕ್ಷ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಂಗ್ರೆಸ್‌ ಲೆಟರ್‌ಹೆಡ್‌ ದುರ್ಬಳಕೆ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್‌ ಸಿಂಗ್‌, ವಕ್ತಾರ ಸಂಬಿತ್‌ ಪಾತ್ರ ವಿರುದ್ಧ ಎಫ್‌ಐಆರ್‌
Linkup
ರಾಯಪುರ: ಕಾಂಗ್ರೆಸ್‌ ಪಕ್ಷದ ಅಧಿಕೃತ ಲೆಟರ್‌ಹೆಡ್‌ ಮಾರ್ಪಡಿಸಿ ಸುಳ್ಳು ಸುದ್ದಿ ಹರಡುವ 'ಟೂಲ್‌ಕಿಟ್‌'ವೊಂದನ್ನು ಸೃಷ್ಟಿಸಿದ ಆರೋಪದ ಮೇರೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ವಕ್ತಾರ ಸಂಬಿತ್‌ ಪಾತ್ರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ರಾಯ್‌ಪುರ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ. ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್‌ ಎನ್‌ಎಸ್‌ಯುಐ ಅಧ್ಯಕ್ಷ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಿಲ್ಲಿ ಪೊಲೀಸರಿಗೂ ಬಗ್ಗೆ ಕಾಂಗ್ರೆಸ್‌ ನಾಯಕರು ದೂರು ನೀಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವೆ ಸ್ಮತಿ ಇರಾನಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಿರುದ್ಧ ಆರೋಪ ಮಾಡಿದ್ದಾರೆ.