ನಟಿ ಆಯಿಷಾ ವಿರುದ್ಧ ದೇಶದ್ರೋಹ ಕೇಸ್‌; ಲಕ್ಷದ್ವೀಪದ 15ಕ್ಕೂ ಹೆಚ್ಚು ಬಿಜೆಪಿ ನಾಯಕರು ರಾಜೀನಾಮೆ

ಮಲಯಾಳಂ ನಟಿ ಆಯಿಷಾ ಸುಲ್ತಾನಾ ವಿರುದ್ಧ ಲಕ್ಷದ್ವೀಪದ ಬಿಜೆಪಿ ಘಟಕದ ಅಧ್ಯಕ್ಷ ಅಬ್ದುಲ್‌ ಖಾದರ್‌ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಲಕ್ಷದ್ವೀಪದ ಹದಿನೈದಕ್ಕೂ ಹೆಚ್ಚು ಬಿಜೆಪಿ ಮುಖಂಡರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನಟಿ ಆಯಿಷಾ ವಿರುದ್ಧ ದೇಶದ್ರೋಹ ಕೇಸ್‌; ಲಕ್ಷದ್ವೀಪದ 15ಕ್ಕೂ ಹೆಚ್ಚು ಬಿಜೆಪಿ ನಾಯಕರು ರಾಜೀನಾಮೆ
Linkup
ಹೊಸದಿಲ್ಲಿ: ಮಲಯಾಳಂ ವಿರುದ್ಧ ದಾಖಲಿಸಿರುವುದನ್ನು ವಿರೋಧಿಸಿ ಲಕ್ಷದ್ವೀಪದ ಹದಿನೈದಕ್ಕೂ ಹೆಚ್ಚು ಬಿಜೆಪಿ ಮುಖಂಡರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೋವಿಡ್‌ ಲಸಿಕೆ ಮೂಲಕ ಕೇಂದ್ರ ಸರಕಾರವು ಲಕ್ಷದ್ವೀಪದಲ್ಲಿ ಕೊರೊನಾ ಹಬ್ಬಿಸುತ್ತಿದ್ದು, ಇದು ನಮ್ಮವರ ಮೇಲಿನ ಜೈವಿಕ ಅಸ್ತ್ರದ ಪ್ರಯೋಗ ಎಂದು ಆಯಿಷಾ ಅವರು ಟಿವಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಆ ಮಾತನ್ನು ಆಧರಿಸಿ ಲಕ್ಷದ್ವೀಪದ ಬಿಜೆಪಿ ಘಟಕದ ಅಧ್ಯಕ್ಷ ಅಬ್ದುಲ್‌ ಖಾದರ್‌ ದೇಶದ್ರೋಹದ ಕಾಯಿದೆಯಡಿ ದೂರು ದಾಖಲಿಸಿದ್ದರು. ಈ ಕ್ರಮ ವಿರೋಧಿಸಿ ಬಿಜೆಪಿ ಲಕ್ಷದ್ವೀಪ ಘಟಕದ ಪ್ರಧಾನ ಕಾರ್ಯದರ್ಶಿ ಹಮೀದ್‌ ಮುಲ್ಲಿಪುಳ, ಮುಖಂಡ ಬಿ.ಸಿ. ಚೆರಿಯಾ ಕೊಯಾ ಸೇರಿದಂತೆ ಹದಿನೈದಕ್ಕೂ ಹೆಚ್ಚು ಬಿಜೆಪಿ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಅವರು ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸುತ್ತಿರುವುದನ್ನು ಆಯಿಷಾ ಅವರು ವಿರೋಧಿಸಿದ್ದಾರೆ. ಅವರ ವಿರುದ್ಧವೇ ದೂರು ದಾಖಲಿಸಿರುವುದು ಸರಿಯಲ್ಲ ಎಂದು ಈ ನಾಯಕರು ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದಾರೆ.