ಅಸ್ಸಾಂ - ಮಿಜೋರಾಂ ಸಂಧಾನ ಯಶಸ್ವಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಉಭಯ ರಾಜ್ಯಗಳ ಸಮ್ಮತಿ

ಕಳೆದ ತಿಂಗಳಿಂದ ಅಸ್ಸಾಂ - ಮಿಜೋರಾಂ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷ ಜುಲೈ 26ರಂದು ಹಿಂಸಾಚಾರಕ್ಕೆ ತಿರುಗಿ, ಅಸ್ಸಾಂನ ಐವರು ನಾಗರಿಕರು ಹಾಗೂ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಅಂದಿನಿಂದ ಉದ್ವಿಗ್ನ ವಾತಾವರಣ ನೆಲೆಸಿತ್ತು.

ಅಸ್ಸಾಂ - ಮಿಜೋರಾಂ ಸಂಧಾನ ಯಶಸ್ವಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಉಭಯ ರಾಜ್ಯಗಳ ಸಮ್ಮತಿ
Linkup
ಐಜ್ವಾಲ್‌: ಹಾಗೂ ರಾಜ್ಯಗಳ ಗಡಿಯಲ್ಲಿ ನಡೆದ ಸಂಘರ್ಷದ ಬಳಿಕ ಕೊನೆಗೂ ಉಭಯ ರಾಜ್ಯಗಳ ಪ್ರತಿನಿಧಿಗಳ ನಡುವೆ ನಡೆದ ಮೊದಲ ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದೆ. 'ಗಡಿಯಲ್ಲಿ ಸ್ಥಾಪನೆಗೆ ಕ್ರಮ ಕೈಗೊಳ್ಳುವುದರ ಜತೆಗೆ ಶಾಂತಿಯುತವಾಗಿ ಬಿಕ್ಕಟ್ಟು ಶಮನಗೊಳಿಸಲು ಎರಡೂ ರಾಜ್ಯಗಳು ಒಪ್ಪಿಗೆ ಸೂಚಿಸಿವೆ. ಅಂತಾರಾಜ್ಯ ವಾಹನಗಳ ಓಡಾಟಕ್ಕೆ ಅನುಮತಿ ನೀಡಲು ಹಾಗೂ ಗಡಿಯಿಂದ ಪೊಲೀಸ್‌ ಸಿಬ್ಬಂದಿ ವಾಪಸ್‌ ಪಡೆಯಲು ತೀರ್ಮಾನಿಸಲಾಗಿದೆ' ಎಂದು ಸಭೆ ಬಳಿಕ ಜಂಟಿ ಪ್ರಕಟಣೆ ತಿಳಿಸಿದೆ. ಅಸ್ಸಾಂ ಗಡಿ ಪ್ರದೇಶ ಅಭಿವೃದ್ಧಿ ಸಚಿವ ಅತುಲ್‌ ಬೋರಾ, ಗಡಿ ಅಭಿವೃದ್ಧಿ ಇಲಾಖೆ ಆಯುಕ್ತ ಜಿ. ಡಿ. ತ್ರಿಪಾಠಿ, ಮಿಜೋರಾಂ ಗೃಹ ಸಚಿವ ಲಾಲ್‌ ಚಮ್ಲಿಯಾನ ಹಾಗೂ ಗೃಹ ಕಾರ್ಯದರ್ಶಿ ವನಲಾಲಂಗತ್ಸಕ ಅವರು ಐಜ್ವಾಲ್‌ನಲ್ಲಿ ಸಭೆ ನಡೆಸಿದ್ದು, ಗಡಿಯಲ್ಲಿ ಅಗತ್ಯ ವಸ್ತುಗಳ ಸರಬರಾಜಿಗೂ ಸಮ್ಮತಿ ಸೂಚಿಸಲಾಗಿದೆ. ಕಳೆದ ತಿಂಗಳಿಂದ ಅಸ್ಸಾಂ - ಮಿಜೋರಾಂ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷ ಜುಲೈ 26ರಂದು ಹಿಂಸಾಚಾರಕ್ಕೆ ತಿರುಗಿ, ಅಸ್ಸಾಂನ ಐವರು ನಾಗರಿಕರು ಹಾಗೂ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮಿಜೋರಾಂ ಸರಕಾರವು ಅಸ್ಸಾಂ ಮುಖ್ಯಮಂತ್ರಿ, ಕೆಲ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದೆ. ಕೇಂದ್ರದ ಮಧ್ಯಸ್ಥಿಕೆ: ಉಭಯ ರಾಜ್ಯಗಳು ಶಾಂತಿ ಸ್ಥಾಪನೆಗೆ ಒಪ್ಪಿಗೆ ಸೂಚಿಸಲು ಕೇಂದ್ರ ಸರಕಾರದ ಮಧ್ಯಸ್ಥಿಕೆಯೂ ಕಾರಣವಾಗಿದೆ. ಹಿಂಸೆ ನಡೆದ ದಿನವೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ಪರಿಸ್ಥಿತಿ ತಿಳಿಗೊಳಿಸುವಂತೆ ಸೂಚಿಸಿದ್ದರು. ಅಲ್ಲದೆ, ಜುಲೈ 28ರಂದು ಕೇಂದ್ರ ಗೃಹ ಸಚಿವಾಲಯದ ನೇತೃತ್ವದಲ್ಲಿ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ಶಾಂತಿ ಕಾಪಾಡುವಂತೆ ಸೂಚಿಸಲಾಗಿತ್ತು. ಅಲ್ಲದೆ, ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳಲಾಗಿತ್ತು.