ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊರೊನಾ ಲಸಿಕೆಯ ಪರೀಕ್ಷೆ ಆರಂಭ

ಭಾರತ್‌ ಬಯೋಟೆಕ್‌ ಮಕ್ಕಳಿಗಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ ಲಸಿಕೆಯ ಪರೀಕ್ಷೆ ದಿಲ್ಲಿಯ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಆರಂಭಗೊಂಡಿದ್ದು, ಮಕ್ಕಳಿಗಾಗಿ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಿದೆ.

ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊರೊನಾ ಲಸಿಕೆಯ ಪರೀಕ್ಷೆ ಆರಂಭ
Linkup
ಹೊಸದಿಲ್ಲಿ: ಮಕ್ಕಳಿಗಾಗಿ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಲಸಿಕೆಯ ಟ್ರಯಲ್ಸ್‌ ದಿಲ್ಲಿಯ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಸೋಮವಾರ ಆರಂಭಗೊಂಡಿದೆ. ಈ ಮೂಲಕ 2 ರಿಂದ 18 ವರ್ಷದ ಮಕ್ಕಳಿಗಾಗಿ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಿದೆ. ದಿಲ್ಲಿಯಲ್ಲಿ ಸುಮಾರು 525 ಆರೋಗ್ಯವಂತ ಮಕ್ಕಳು ಲಸಿಕೆಯ ಪರೀಕ್ಷೆಗೆ ಒಳಪಡಲಿದ್ದಾರೆ. ಅವರೆಲ್ಲರ ಆರೋಗ್ಯ ಹಾಗೂ ದೇಹ ಸ್ಥಿತಿಯ ಬಗ್ಗೆ ಸದ್ಯ ತಪಾಸಣೆ ನಡೆಸಲಾಗುತ್ತಿದ್ದು, ಅದರ ವರದಿ ಬಂದ ಬಳಿಕ ಅವರೆಲ್ಲರಿಗೂ ಸಿದ್ಧಗೊಂಡಿರುವ ಲಸಿಕೆ ಚುಚ್ಚಲಾಗುತ್ತದೆ. ಮೊದಲ ಡೋಸ್‌ ಕೊಟ್ಟ 28 ದಿನಗಳ ಬಳಿಕ ಎರಡನೇ ಡೋಸ್‌ ನೀಡಲಾಗುತ್ತದೆ. ಅವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಪತ್ತೆ ಹಚ್ಚಿ ಸೂಕ್ತವಾಗಿದ್ದರೆ ಸರಕಾರದ ಒಪ್ಪಿಗೆ ಬಳಿಕ ಸಾರ್ವತ್ರಿಕ ಬಳಕೆ ಆರಂಭಗೊಳ್ಳಲಿದೆ. ದಿಲ್ಲಿ ಏಮ್ಸ್‌ ಮಾತ್ರವಲ್ಲದೆ ಬಿಹಾರದ ಪಟನಾದಲ್ಲಿರುವ ಏಮ್ಸ್‌ನಲ್ಲಿಯೂ ಕ್ಲಿನಿಕಲ್‌ ಟ್ರಯಲ್‌ ನಡೆಯಲಿದೆ. ''ಟ್ರಯಲ್‌ ನಡೆಸಲು ಮುಂದಾಗಿರುವ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅವರ ವರದಿ ಬಂದ ಬಳಿಕ ಲಸಿಕೆಯನ್ನು ಅವರ ಮೇಲೆ ಪ್ರಯೋಗಿಸಲಾಗುವುದು,'' ಎಂದು ಏಮ್ಸ್‌ನ ಸಮುದಾಯ ಔಷಧ ವಿಭಾಗದ ವೈದ್ಯ ಡಾ. ಸಂಜಯ್‌ ರಾಯ್‌ ಮಾಹಿತಿ ನೀಡಿದ್ದಾರೆ. ಮಕ್ಕಳಿಗೆ ನೀಡುವ ಕೊವ್ಯಾಕ್ಸಿನ್‌ ಲಸಿಕೆಯ ಎರಡು ಹಾಗೂ ಮೂರನೇ ಹಂತದ ಪ್ರಯೋಗಕ್ಕೆ ಮೇ 12ರಂದು ಭಾರತದ ಔಷಧ ನಿಯಂತ್ರಣ ಸಂಸ್ಥೆ ಒಪ್ಪಿಗೆ ಕೊಟ್ಟಿತ್ತು. ಅದೇ ರೀತಿ ಮುಂದಿನ ಹಂತದಲ್ಲಿ ಮಕ್ಕಳಿಗೂ ಬಾಧಿಸುವ ಸಾಧ್ಯತೆ ಇದೆ ಎಂದು ಸರಕಾರ ಎಚ್ಚರಿಸಿದೆ. ಹೀಗಾಗಿ ಲಸಿಕೆ ಸಿದ್ಧತೆ ಕಾರ್ಯಕ್ಕೆ ಇನ್ನಷ್ಟು ಇಂಬು ದೊರಕಿದೆ. 13-14 ಕೋಟಿ ಮಕ್ಕಳು ಭಾರತದಲ್ಲಿಸುಮಾರು 13ರಿಂದ 14 ಕೋಟಿಯಷ್ಟು 2 ರಿಂದ 18ರ ಒಳಗಿನ ಮಯೋಮಾನದ ಮಕ್ಕಳಿದ್ದಾರೆ. 26-28 ಕೋಟಿ ಡೋಸ್‌ ಸದ್ಯದ ಅಂದಾಜಿನ ಪ್ರಕಾರ ಇಷ್ಟು ಡೋಸ್‌ ಲಸಿಕೆ ಮಕ್ಕಳಿಗಾಗಿ ಅಗತ್ಯವಿದೆ ಝೈಡುಸ್‌ನ ಕ್ಯಾಡಿಲಾ ಲಸಿಕೆ ಭಾರತದ ಪ್ರಮುಖ ಫಾರ್ಮಾಸ್ಯುಟಿಕಲ್‌ ಸಂಸ್ಥೆಯಾಗಿರುವ ಝೈಡುಸ್‌ ಕೂಡಾ ಮಕ್ಕಳಿಗಾಗಿ ಲಸಿಕೆ ಅಭಿವೃದ್ಧಿಪಡಿಸಿದ್ದು ಸರಕಾರದ ಒಪ್ಪಿಗೆಗೆ ಕಾಯುತ್ತಿದೆ. ಮೂಗಿನ ಮೂಲಕ ನೀಡುವ ಕೊವ್ಯಾಕ್ಸಿನ್‌ ಲಸಿಕೆಯೂ ಅಭಿವೃದ್ಧಿ ಹಂತದಲ್ಲಿದೆ. ಇದು ಯಶಸ್ಸು ಕಂಡರೆ ಮಕ್ಕಳ ಮೇಲೆ ಬಳಸಲು ಮತ್ತಷ್ಟು ಅನುಕೂಲವಾಗಲಿದೆ.