ಎಚ್‌ಡಿಎಫ್‌ಸಿ ಬ್ಯಾಂಕಿಗೆ 4ನೇ ತ್ರೈಮಾಸಿಕದಲ್ಲಿ ₹8,434 ಕೋಟಿ ನಿವ್ವಳ ಲಾಭ!

ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರ್ಚ್ಗೆ ಅಂತ್ಯಗೊಂಡ 4ನೇ ತ್ರೈಮಾಸಿಕದಲ್ಲಿ 8,186.5 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಶೇ. 18.2ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 6,927.69 ಕೋಟಿ ರೂ. ಲಾಭ ಗಳಿಸಿತ್ತು.

ಎಚ್‌ಡಿಎಫ್‌ಸಿ ಬ್ಯಾಂಕಿಗೆ 4ನೇ ತ್ರೈಮಾಸಿಕದಲ್ಲಿ ₹8,434 ಕೋಟಿ ನಿವ್ವಳ ಲಾಭ!
Linkup
ಮುಂಬಯಿ: ಮಾರ್ಚ್ಗೆ ಅಂತ್ಯಗೊಂಡ 4ನೇ ತ್ರೈಮಾಸಿಕದಲ್ಲಿ 8,186.5 ಕೋಟಿ ರೂ. ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಶೇ. 18.2ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 6,927.69 ಕೋಟಿ ರೂ. ಲಾಭ ಗಳಿಸಿತ್ತು. ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಇದಾಗಿದ್ದು, ನಿವ್ವಳ ಬಡ್ಡಿ ಆದಾಯ ಶೇ. 12.6ರಷ್ಟು ಹೆಚ್ಚಾಗಿದೆ. 17,120.15 ಕೋಟಿ ರೂ.ಗೆ ನಿವ್ವಳ ಬಡ್ಡಿ ಆದಾಯ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15,204.06 ಕೋಟಿ ರೂ. ಇತ್ತು. ದೇಶೀಯ ಚಿಲ್ಲರೆ ಸಾಲಗಳ ಪ್ರಮಾಣ ಶೇ. 6.7ರಷ್ಟು ಹೆಚ್ಚಾಗಿದ್ದರೆ, ಸಗಟು ಸಾಲಗಳ ಪ್ರಮಾಣ ಶೇ. 21.7ಕ್ಕೆ ಏರಿಕೆಯಾಗಿದೆ. ಒಟ್ಟು ಠೇವಣಿಗಳ ಮೊತ್ತವೂ 13,35,060 ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಠೇವಣಿ ಪ್ರಮಾಣವೂ ಶೇ.16.3ರಷ್ಟು ವೃದ್ಧಿಸಿದೆ. ನಿಬಂಧನೆ ಪೂರ್ವ ಕಾರ್ಯಾಚರಣೆಗಳಿಂದ ಗಳಿಸಿದ ಒಟ್ಟು ಲಾಭ 15,532.77 ಕೋಟಿ ರೂ.ಗಳಾಗಿವೆ. ಕಂಪನಿಯ ಬಡ್ಡಿಯೇತರ ಆದಾಯ 7,593.91 ಕೋಟಿ ರೂ. ತಲುಪಿದ್ದು, ಶೇ. 25.9ರಷ್ಟು ಬೆಳವಣಿಗೆ ಸಾಧಿಸಿದೆ. ತೆರಿಗೆ ಖರ್ಚುಗಳೂ ಶೇ. 18.1ರಷ್ಟು ಹೆಚ್ಚಳವಾಗಿದ್ದು 2,652.56 ಕೋಟಿ ರೂ.ಗೆ ಏರಿಕೆಯಾಗಿದೆ.