ಉಚಿತ ತೀರ್ಥಯಾತ್ರೆ ಪ್ರವಾಸ ಯೋಜನೆಯಲ್ಲಿ ಅಯೋಧ್ಯೆಯನ್ನು ಸೇರ್ಪಡೆಗೊಳಿಸಿದ ದಿಲ್ಲಿ ಸರ್ಕಾರ

ಕೇಜ್ರಿವಾಲ್ ಸರ್ಕಾರ ‘ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆ’ ಜಾರಿಗೊಳಿಸಿದ್ದು, ಇದರಲ್ಲಿ ಯಾತ್ರಾ ಸ್ಥಳಗಳಾದ ವೈಷ್ಣೋದೇವಿ, ರಾಮೇಶ್ವರಮ್, ದ್ವಾರಕಾಪುರಿ, ಹರಿದ್ವಾರ್, ರಿಷಿಕೇಶ್, ಮಥುರಾ ಮತ್ತು ವೃಂದಾವನ ಸೇರಿದೆ. ಈ ತೀರ್ಥ ಕ್ಷೇತ್ರಗಳಿಗೆ ದಿಲ್ಲಿಯ ಜನತೆ ಉಚಿತವಾಗಿ ಸರ್ಕಾರದ ವತಿಯಿಂದ ಪ್ರಯಾಣ ಬೆಳೆಸಬಹುದಾಗಿದೆ. ಇದೀಗ ಈ ಪಟ್ಟಿಯಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ಸೇರ್ಪಡೆಯಾಗಿದೆ.

ಉಚಿತ ತೀರ್ಥಯಾತ್ರೆ ಪ್ರವಾಸ ಯೋಜನೆಯಲ್ಲಿ ಅಯೋಧ್ಯೆಯನ್ನು ಸೇರ್ಪಡೆಗೊಳಿಸಿದ ದಿಲ್ಲಿ ಸರ್ಕಾರ
Linkup
ದಿಲ್ಲಿ: ನೇತೃತ್ವದ ಅಯೋಧ್ಯಾ ರಾಮಮಂದಿರವನ್ನು ತನ್ನ ಯೋಜನೆಯಲ್ಲಿ ಸೇರಿಸಿಕೊಂಡಿದೆ. ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಹನುಮಾನ್‌ಗರಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಯೋಜನೆಯನ್ನು ಘೋಷಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್ ‘ರಾಮ್‌ಲಲ್ಲಾ ಮುಂದೆ ನಮಸ್ಕರಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇಂತಹ ಅವಕಾಶ ಪ್ರತಿಯೊಬ್ಬರಿಗೂ ಸಿಗಬೇಕೆಂದು ನಾನು ಬಯಸುತ್ತೇನೆ. ನನ್ನ ಸಾಮರ್ಥ್ಯವನ್ನು ಬಳಸಿ ಇಲ್ಲಿಗೆ ಹೆಚ್ಚು ಹೆಚ್ಚು ಜನರು ಭೇಟಿ ನೀಡಿ ದೇವರ ದರ್ಶನ ಪಡೆಯುವಂತೆ ನಾನು ಮಾಡುತ್ತೇನೆ’ ಎಂದು ಇದೇ ವೇಲೆ ಹೇಳಿದರು. ಕೇಜ್ರಿವಾಲ್ ಸರ್ಕಾರ ‘ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆ’ ಜಾರಿಗೊಳಿಸಿದ್ದು, ಇದರಲ್ಲಿ ಯಾತ್ರಾ ಸ್ಥಳಗಳಾದ ವೈಷ್ಣೋದೇವಿ, ರಾಮೇಶ್ವರಮ್, ದ್ವಾರಕಾಪುರಿ, ಹರಿದ್ವಾರ್, ರಿಷಿಕೇಶ್, ಮಥುರಾ ಮತ್ತು ವೃಂದಾವನ ಸೇರಿದೆ. ಈ ತೀರ್ಥ ಕ್ಷೇತ್ರಗಳಿಗೆ ದಿಲ್ಲಿಯ ಜನತೆ ಉಚಿತವಾಗಿ ಸರ್ಕಾರದ ವತಿಯಿಂದ ಪ್ರಯಾಣ ಬೆಳೆಸಬಹುದಾಗಿದೆ. ಇದೀಗ ಈ ಪಟ್ಟಿಯಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ಸೇರ್ಪಡೆಯಾಗಿದೆ. ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಅಯೋಧ್ಯಾ ರಾಮ ಜನ್ಮಭೂಮಿಯನ್ನು ತೀರ್ಥಯಾತ್ರಾ ಯೋಜನೆಯಲ್ಲಿ ಅಧಿಕೃತವಾಗಿ ಸೇರಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು. ನನ್ನ ದೇಶದ ಸಮೃದ್ಧಿ ಹಾಗೂ ಕೊರೊನಾ ಸಾಂಕ್ರಾಮಿಕ ಕಾಯಿಲೆ ಕೊನೆಗೊಳ್ಳಲು ರಾಮನಲ್ಲಿ ಪ್ರಾರ್ಥಿಸಿರುವುದಾಗಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇನ್ನು, ಅಯೋಧ್ಯೆಗೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿರುವುದನ್ನು ವಿರೋಧಿಸಿರುವ ಅಯೋಧ್ಯೆ ಸಾದರ್ ಕ್ಷೇತ್ರದ ಬಿಜೆಪಿ ಶಾಸಕ ವೇದ್ ಪ್ರಕಾಶ್ ಗುಪ್ತಾ, ‘ ಆಮ್ ಆದ್ಮಿ ಪಾರ್ಟಿ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣಕ್ಕೆ ವಿರೋಧವಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಬದಲಿಗೆ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಅರವಿಂದ ಕೇಜ್ರಿವಾಲ್ ಹೇಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ದಿಲ್ಲಿ ಸಿಎಂ ಕೇಜ್ರಿವಾಲ್ ರಾಮಮಂದಿರ ಸಮೀಪ ಹಾದು ಹೋಗುವ ವೇಳೆ ಕೆಲವೊಂದು ಯುವಕರು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪರ ಘೋಷಣೆ ಕೂಗಿದ್ದರು ಎಂದು ವರದಿಯಾಗಿದೆ. ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ 403 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದ್ದು, ಇದೇ ಕಾರಣಕ್ಕಾಗಿ ಎರಡು ದಿನಗಳ ಕಾಲ ಉತ್ತರಪ್ರದೇಶ ಪ್ರವಾಸದಲ್ಲಿದ್ದರು ಎನ್ನಲಾಗಿದೆ. ಇನ್ನು ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಯಲ್ಲಿ ರಾಮ ಜನ್ಮಭೂಮಿಯನ್ನು ಸೇರಿಸಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.