ಇಂಧನ ಬೆಲೆ ಏರಿಕೆಗೆ ಪರಿಹಾರವಾಗಲಿದೆಯೇ 'ಫ್ಲೆಕ್ಸ್‌ ಫ್ಯೂಯೆಲ್‌ ಇಂಜಿನ್‌'? ತಿಳಿಯಲೇಬೇಕಾದ ಮಾಹಿತಿ

ಇಂಧನ ದರ ಇಳಿಸದ ಸರಕಾರ, ಇದಕ್ಕೊಂದು ಬೇರೆಯೇ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಪಳೆಯುಳಿಕೆ ಇಂಧನದ (ಪೆಟ್ರೋಲ್‌, ಡೀಸೆಲ್‌, ಕೆರೋಸಿನ್‌) ಬದಲು ಪರ್ಯಾಯ ಇಂಧನ ಬಳಕೆಯನ್ನು ಅನಿವಾರ್ಯ ಮಾಡುವತ್ತ ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಇಂಧನ ಬೆಲೆ ಏರಿಕೆಗೆ ಪರಿಹಾರವಾಗಲಿದೆಯೇ 'ಫ್ಲೆಕ್ಸ್‌ ಫ್ಯೂಯೆಲ್‌ ಇಂಜಿನ್‌'? ತಿಳಿಯಲೇಬೇಕಾದ ಮಾಹಿತಿ
Linkup
ಹೊಸದಿಲ್ಲಿ: ಪೆಟ್ರೋಲ್ ಬೆಲೆ ₹100ರ ಗಡಿ ದಾಟಿ ಹಲವು ದಿನಗಳೇ ಆಗಿವೆ. ದಿನೇದಿನೆ ಏರುತ್ತಲೇ ಇರುವ ಇಂಧನ ಬೆಲೆಯನ್ನು ಕಂಡು ಗ್ರಾಹಕ ಅಸಹಾಯಕನಂತೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಈ ಪರಿಸ್ಥಿತಿಯಲ್ಲಿ ಸರಕಾರ ಕೂಡ ಇಂಧನ ದರ ನಿಯಂತ್ರ ಕಷ್ಟ ಎಂದು ಕೈಚೆಲ್ಲಿ ಕುಳಿತಿದೆ. ಇಂಧನ ದರ ಇಳಿಸದ ಸರಕಾರ, ಇದಕ್ಕೊಂದು ಬೇರೆಯೇ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಪಳೆಯುಳಿಕೆ ಇಂಧನದ (, ಡೀಸೆಲ್‌, ಕೆರೋಸಿನ್‌) ಬದಲು ಪರ್ಯಾಯ ಇಂಧನ ಬಳಕೆಯನ್ನು ಅನಿವಾರ್ಯ ಮಾಡುವತ್ತ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಏಕೆಂದರೆ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯು ಜಾಗತಿಕ ಮಾರುಕಟ್ಟೆಯ ಮೌಲ್ಯದ ಮೇಲೆ ನಿರ್ಧಾರಿತವಾಗುತ್ತವೆ. ಹಾಗಾಗಿ, ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯ ಇಂಧನ ಹುಡುಕಬೇಕಾದ ಅನಿವಾರ್ಯತೆ ಸರಕಾರಕ್ಕಿದೆ. ಹೀಗಾಗಿಯೇ ಪೆಟ್ರೋಲ್ ಜಾಗಕ್ಕೆ ಇದೀಗ ಇಥೆನಾಲ್ ಬರಲಿದೆ. ಮುಂದಿನ ಕೆಲವು ದಿನಗಳಲ್ಲಿ ಸರ್ಕಾರ ಫ್ಲೆಕ್ಸ್ ಫ್ಯೂಯೆಲ್ ಇಂಜಿನ್ (flex-fuel engines) ಅನ್ನು ಮಾರುಕಟ್ಟೆಗೆ ತರುವ ಅತಿ ದೊಡ್ಡ ನಿರ್ಧಾರ ಪ್ರಕಟಿಸಲಿದೆ. ಇಂಥ ಪರ್ಯಾಯ ಇಂಧನ ಅಟೋಮೊಬೈಲ್ ಉದ್ಯಮಕ್ಕೆ ಅನಿವಾರ್ಯ ಎನ್ನಲಾಗಿದೆ. ಫ್ಲೆಕ್ಸ್ ಫ್ಯೂಯೆಲ್ ಅಂದರೆ, ಫ್ಲೆಕ್ಸಿಬಲ್ ಇಂಧನ (Flexible Fuel) ಎಂದರ್ಥ. ಈ ಕುರಿತು ಇತ್ತೀಚೆಗಷ್ಟೇ ರಸ್ತೆ ಮತ್ತು ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಪ್ರಸ್ತಾಪಿಸಿದ್ದರು. ಏನಿದು ಫ್ಲೆಕ್ಸ್ ಫ್ಯೂಯೆಲ್ ಇಂಜಿನ್? ಇದು ಕೂಡ ಪೆಟ್ರೋಲ್‌ ಇಂಧನ ಬಳಸಿ ಚಲಿಸುವಂತಹ ಮಾದರಿಯದ್ದೇ ಇಂಜಿನ್‌ ಆಗಿದೆ. ಆದರೆ, ಈ ಇಂಜಿನ್‌ ಬಳಸಿಯೂ ಕಾರ್ಯನಿರ್ವಹಿಸಲಿದೆ. ಎಥೆನಾಲ್‌ ಮತ್ತು ಪೆಟ್ರೋಲ್‌ ಎರಡರ ಮಿಶ್ರಣದಲ್ಲಿಯೂ ಕಾರ್ಯನಿರ್ವಹಿಸಲಿದೆ. ಬಹುದೊಡ್ಡ ಅನುಕೂಲವೆಂದರೆ, ಇದು ಶೇ.100 ಪೆಟ್ರೋಲ್‌ ಮೂಲಕವೂ ಕಾರ್ಯನಿರ್ವಹಿಸುತ್ತದೆ. ಶೇ.100 ಎಥೆನಾಲ್‌ನಿಂದಲೂ ಕಾರ್ಯನಿರ್ವಹಿಸಬಲ್ಲದೆ. ಯಾವುದೇ ಇಂಧನಕ್ಕಾದರೂ ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡಿಕೊಳ್ಳಬಲ್ಲದು. ಇದರಿಂದ ಅನುಕೂಲವೇನು? ಪೆಟ್ರೋಲ್‌ ದೇಶದ ಬಹುಭಾಗಗಳಲ್ಲಿ ಪ್ರತಿ ಲೀಟರ್‌ಗೆ 100 ರೂ. ಗಡಿ ದಾಟಿದೆ. ಆದರೆ, ಎಥೆನಾಲ್‌ ಬೆಲೆ ಪ್ರತಿ ಲೀಟರ್‌ಗೆ ₹60 ರಿಂದ 62ಕ್ಕೆ ಲಭ್ಯವಾಗಲಿದೆ. ಅಂದರೆ ಗ್ರಾಹಕರಿಗೆ ಪ್ರತಿ ಲೀಟರ್‌ಗೆ 30 ರಿಂದ 35 ರೂಪಾಯಿ ಉಳಿತಾಯವಾಗಲಿದೆ. ಇಷ್ಟೇ ಅಲ್ಲದೆ ವಾಯು ಮಾಲಿನ್ಯ ಪ್ರಮಾಣ ಕೂಡ ಕಡಿಮೆಯಾಗಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಫ್ಲೆಕ್ಸ್‌ ಇಂಧನವನ್ನು ದೇಶೀಯವಾಗಿಯೇ ಉತ್ಪಾದಿಸಬಹುದು. ಸಚಿವ ಗಡ್ಕರಿ ಹೇಳಿದ್ದೇನು..? ಸಭೆಯೊಂದರಲ್ಲಿ ಮಾತನಾಡಿದ ಸಚಿವ ಗಡ್ಕರಿ, ``ನಾನು ಸಾರಿಗೆ ಸಚಿವ. ನಾನೊಂದು ಆದೇಶ ಜಾರಿ ಮಾಡಲಿದ್ದೇನೆ. ಮುಂದಿನ ದಿನಗಳಲ್ಲಿ ಕೇವಲ ಪೆಟ್ರೋಲ್ ಇಂಜಿನ್‌ ಮಾತ್ರವೇ ಇರುವುದಿಲ್ಲ. ಬದಲಿಗೆ ಫ್ಲೆಕ್ಸ್ ಇಂಧನದ ಇಂಜಿನ್‌ ಕೂಡಾ ಇರಲಿದೆ. ಈ ಎರಡರಲ್ಲಿ ತಮ್ಮಿಚ್ಚೆಯ ಇಂಜಿನ್‌ ಆಯ್ಕೆ ಮಾಡಿಕೊಳ್ಳುವ ಅವಕಾಶ ಜನರಿಗೆ ಸಿಗಲಿದೆ. ಜನರು ಒಂದೋ ಕಚ್ಚಾ ತೈಲ ಬಳಸಬಹುದು. ಇಲ್ಲದಿದ್ದರೆ ಎಥೆನಾಲ್ ಬಳಸಬಹುದು. 8-10 ದಿನಗಳಲ್ಲಿ ಈ ಆದೇಶ ಜಾರಿಗೆ ಬರಲಿದೆ. ಫ್ಲೆಕ್ಸ್ ಫ್ಯೂಲ್ ಇಂಜನ್ ಅಟೋಮೊಬೈಲ್ ಕ್ಷೇತ್ರಕ್ಕೆ ಅನಿವಾರ್ಯ ಮಾಡಲು ಹೊರಟಿದ್ದೇವೆ ಎಂದು ತಿಳಿಸಿದ್ದಾರೆ. ಈಗಾಗಲೇ ಹಲವು ದೇಶಗಳಲ್ಲಿ ಜಾರಿ: ಫ್ಲೆಕ್ಸ್‌ ಇಂಧನವನ್ನು ಈಗಾಗಲೇ ಹಲವು ದೇಶಗಳಲ್ಲಿ ಪರಿಚಯಿಸಲಾಗಿದೆ. ಬ್ರೆಜಿಲ್, ಕೆನಡಾ (Canada) ಮತ್ತು ಅಮೆರಿಕದ ಆಟೋಮೊಬೈಲ್ ಕಂಪನಿಗಳು ಫ್ಲೆಕ್ಸ್ ಫ್ಯೂಯೆಲ್ ಇಂಧನ ಉತ್ಪಾದನೆ ಮಾಡುತ್ತಿವೆ. ಆದರೆ, ಪ್ರಸ್ತುತ ಭಾರತದಲ್ಲಿ ಶೇ.100 ಪೆಟ್ರೋಲ್ ಅಥವಾ 10 ಶೇ. ಬಯೋ ಇಥೆನಾಲ್ ಇಂಜಿನ್‌ಗಳ ಆಯ್ಕೆ ಸಿಗುತ್ತಿವೆ. ಗಡ್ಕರಿ ಪ್ರಕಾರ ‘ಇದೀಗ ಪ್ರತಿ ಲೀಟರ್ ಪೆಟ್ರೋಲಿನಲ್ಲಿ ಶೇ. 8.5 ಎಥನಾಲ್ ಸೇರಿಸಲಾಗುತ್ತಿದೆ. 2014ರಲ್ಲಿ ಇದರ ಪ್ರಮಾಣ ಕೇವಲ ಶೇ. 1 ರಿಂದ ಶೇ. 1.5 ರಷ್ಟಿತ್ತು. ಎಥನಾಲ್ ಖರೀದಿಯೂ ಈಗ ಹೆಚ್ಚಿದೆ ಎಂದು ಹೇಳಿದ್ದಾರೆ.