Happy Birthday Kiccha Sudeep: ಅಭಿನಯ ಚಕ್ರವರ್ತಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ರಾಜಕಾರಣಿಗಳು

ಜನ್ಮದಿನದ ಸಡಗರದಲ್ಲಿರುವ ಕಿಚ್ಚ ಸುದೀಪ್‌ ಅವರಿಗೆ ತಾರೆಯರು ಹಾಗೂ ಅಭಿಮಾನಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಟ್ವಿಟ್ಟರ್ ಮುಖಾಂತರ ಕಿಚ್ಚ ಸುದೀಪ್‌ಗೆ ರಾಜಕಾರಣಿಗಳು ಬರ್ತಡೇ ವಿಶ್ ಮಾಡಿದ್ದಾರೆ.

Happy Birthday Kiccha Sudeep: ಅಭಿನಯ ಚಕ್ರವರ್ತಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ರಾಜಕಾರಣಿಗಳು
Linkup
ಅಭಿನಯ ಚಕ್ರವರ್ತಿ ಅವರಿಗಿಂದು ಜನ್ಮದಿನದ ಸಂಭ್ರಮ. ಇವತ್ತು ತಮ್ಮ ಬರ್ತಡೇಯನ್ನ ಕಿಚ್ಚ ಸುದೀಪ್ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಆಚರಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಗುಣವಾಗಿ ಅಭಿಮಾನಿಗಳ ಜೊತೆಗೆ ಸಾರ್ವಜನಿಕವಾಗಿ ಕಿಚ್ಚ ಸುದೀಪ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಜನ್ಮದಿನದ ಸಡಗರದಲ್ಲಿರುವ ಕಿಚ್ಚ ಸುದೀಪ್‌ ಅವರಿಗೆ ತಾರೆಯರು ಹಾಗೂ ಅಭಿಮಾನಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಟ್ವಿಟ್ಟರ್ ಮುಖಾಂತರ ಕಿಚ್ಚ ಸುದೀಪ್‌ಗೆ ರಾಜಕಾರಣಿಗಳು ಬರ್ತಡೇ ವಿಶ್ ಮಾಡಿದ್ದಾರೆ. ಡಾ.ಕೆ.ಸುಧಾಕರ್ ''ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತ ತಮಗೆ ಆಯುರಾರೋಗ್ಯ ಹಾಗೂ ಸಮೃದ್ಧಿ ಕರುಣಿಸಲಿ'' ಆರಗ ಜ್ಞಾನೇಂದ್ರ ''ಸಿನಿಮಾ ರಂಗದ ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ದೀರ್ಘ ಆಯಸ್ಸು, ಆರೋಗ್ಯ ನೀಡಲಿ. ಇನ್ನೂ ಹೆಚ್ಚಿನ ಕಲಾತ್ಮಕ ಚಿತ್ರಗಳ ಮೂಲಕ ಜನರ ಮನ ರಂಜಿಸಲಿ ಎಂದು ಹಾರೈಸುತ್ತೇನೆ'' ಬಿ.ಶ್ರೀರಾಮುಲು ''ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಬಹುಭಾಷಾ ತಾರೆ ಆತ್ಮೀಯರಾದ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಲಿ, ಮುಂಬರುವ ಚಿತ್ರಗಳಿಗೆ ಹಾಗೂ ಸಮಾಜಕ್ಕೆ ತಮ್ಮಿಂದ ಹೆಚ್ಚು ಸೇವೆ ನೀಡಲು ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ'' ಗಾಲಿ ಜನಾರ್ಧನ ರೆಡ್ಡಿ ''ಬಹುಮುಖ ಮತ್ತು ಬಹುಭಾಷಾ ಪ್ರತಿಭೆ ಆತ್ಮೀಯ ಸಹೋದರ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮುಂಬರುವ ಎಲ್ಲಾ ಚಿತ್ರಗಳೂ ಯಶಸ್ವಿಯಾಗಿ ಉತ್ತುಂಗದ ಸ್ಥಾನಕ್ಕೇರಲಿ, ಯುವ ಪ್ರತಿಭೆಗಳಿಗೆ ಇವರಿಂದ ಮಾರ್ಗದರ್ಶನ ದೊರೆಯಲಿ. ದೇವರು ಇವರಿಗೆ ಆರೋಗ್ಯ, ಆಯುಷ್ಯ ಕರುಣಿಸಲಿ ಎಂದು ಆಶಿಸುತ್ತೇನೆ'' ವಿಜಯೇಂದ್ರ ಯಡಿಯೂರಪ್ಪ ''ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ, ನಮ್ಮೆಲ್ಲರ ನೆಚ್ಚಿನ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯವನ್ನು ದೀರ್ಘಾಯುಷ್ಯವನ್ನು ಮತ್ತು ಚಿತ್ರರಂಗದ ಹಾಗೂ ಸಮಾಜಸೇವೆಯ ತಮ್ಮ ಎಲ್ಲಾ ಪ್ರಯತ್ನಗಳಿಗೆ ಮತ್ತಷ್ಟು ಯಶಸ್ಸನ್ನು ಕರುಣಿಸಲಿ ಎಂದು ಹಾರೈಸುತ್ತೇನೆ'' ಚೆಲುವರಾಯಸ್ವಾಮಿ ''ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಾಯಕ ನಟ, ನಿರ್ಮಾಪಕ, ಹಿನ್ನಲೆ ಗಾಯಕ, ನಿರ್ದೇಶಕ ಹಾಗೂ ಬಹುಮುಖ ಮತ್ತು ಬಹುಭಾಷಾ ಪ್ರತಿಭೆಯಾದ ಕಿಚ್ಚ ಸುದೀಪ್ ಅವರು ಈಗ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇವರು ಹೆಚ್ಚಿನ ಸೇವೆ ಸಲ್ಲಿಸಿ, ಉತ್ತುಂಗದ ಸ್ಥಾನಕ್ಕೇರಲಿ, ಯುವ ಪ್ರತಿಭೆಗಳಿಗೆ ಇವರಿಂದ ಮಾರ್ಗದರ್ಶನ ದೊರೆಯಲಿ. ಮುಂಬರುವ ಎಲ್ಲಾ ಚಿತ್ರಗಳು ಯಶಸ್ವಿಯಾಗಲಿ, ದೇವರು ಇವರಿಗೆ ಆಯೋಗ್ಯ, ಆಯುಷ್ಯ ಕರುಣಿಸಲಿ ಎಂದು ಆಶಿಸುತ್ತಾ ಮತ್ತೊಮ್ಮೆ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು'' ದೊಡ್ಡ ಗಣೇಶ್ ''ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು'' ನಟ ರಮೇಶ್ ಅರವಿಂದ್ ''ಹ್ಯಾಪಿ ಬರ್ತಡೇ ಕಿಚ್ಚ ಸುದೀಪ್'' ನಿರ್ದೇಶಕ ಸುನಿ ''ಭಾರತದ 'ಕನ್ನಡತನ'.. ಸದಾ ಕಿಚ್ಚಿನ ತರುಣ.. ಈಗಿನ 'ವಿಕ್ರಾಂತ್ ರೋಣ' ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸದಾ ಏರುಗತಿಯಲ್ಲಿರಲಿ ನಿಮ್ಮ ಜೀವನ'' ಗಾಯಕ ರಾಜೇಶ್ ಕೃಷ್ಣನ್ ''ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮೆಲ್ಲ ಕನಸುಗಳು ಈಡೇರಲಿ''