ಆಸ್ಪತ್ರೆಯಲ್ಲಿ ಬೆಡ್‌, ರೆಮಿಡಿಸಿವಿಯರ್‌ ಔಷಧ ಸಿಗದೆ ಬೆಂಗಳೂರಿನ ವೈದ್ಯೆಯ ಕೊರೊನಾ ಸೋಂಕಿತ ತಂದೆ ಸಾವು!

ನನ್ನ ಸಹದ್ಯೋಗಿಯ ತಂದೆಗೆ ಬೆಡ್‌ ವ್ಯವಸ್ಥೆ ಮಾಡಲು ನನಗೆ ಸಾಧ್ಯವಾಗಿಲ್ಲ. ಇದು ನನಗೆ ತುಂಬಾ ನೋವು ತಂದು ಕೊಟ್ಟಿದೆ. ಎಲ್ಲ ಕಡೆ ಬೆಡ್‌ ತುಂಬಿದೆ, ಸರಿಯಾಗಿ ರೆಮಿಡಿಸಿವಿಯರ್‌ ಔಷಧ ಕೊರೆತ ಕೂಡ. ಇಲ್ಲಿ ರೋಗ ಬಂದರೆ ಸಾವು ಖಂಡಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಅಶ್ವಿನಿ ಅವರ ಸಹದ್ಯೋಗಿಯೊಬ್ಬರು ನೋವು ತೋಡಿಕೊಂಡಿದ್ದಾರೆ. ಈ ಮೂಲಕ ಬೆಂಗಳೂರಿನ ನೈಜ ಪರಿಸ್ಥಿತಿ ಮುನ್ನೆಲೆಗೆ ಬಂದಿದೆ.

ಆಸ್ಪತ್ರೆಯಲ್ಲಿ ಬೆಡ್‌, ರೆಮಿಡಿಸಿವಿಯರ್‌ ಔಷಧ ಸಿಗದೆ ಬೆಂಗಳೂರಿನ ವೈದ್ಯೆಯ ಕೊರೊನಾ ಸೋಂಕಿತ ತಂದೆ ಸಾವು!
Linkup
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣ ಕೇಕೆ ಹಾಕುತ್ತಿದೆ. ದಿನ ನಿತ್ಯ ಭಾರೀ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅಲ್ಲದೇ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇನ್ನು ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿದೆ ಅಲ್ಲದೆ. ರೆಮಿಡಿಸಿವಿಯರ್‌ ಇಂಜೆಕ್ಷನ್‌ ಕೊರತೆ ಇದೆ ಎನ್ನುವ ವರದಿಗಳು ಕೇಳಿಬರುತ್ತಿವೆ. ಆದರೆ ಸರಕಾರ ಮಾತ್ರ ಎಲ್ಲವೂ ಸರಿ ಎನ್ನುತ್ತಿದೆ. ಆದರೆ ಬೆಂಗಳೂರಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಹಾಗೂ ಭೀಕರವಾಗಿದೆ ಎನ್ನುವುದಕ್ಕೆ ಈ ಚಿಂತಾಜನಕ ಸ್ಟೋರಿಯೊಂದು ತೋರಿಸಿಕೊಟ್ಟಿದೆ. ಹೌದು, ವೈದ್ಯರೊಬ್ಬರು ತನ್ನ ಕೋವಿಡ್‌ ಸೋಂಕಿತ ತಂದೆಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್‌ ವ್ಯವಸ್ಥೆ ಮಾಡಿಕೊಡಲು ವಿಫಲರಾಗಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರು ಆಸ್ಪತ್ರೆಯಲ್ಲಿ ಬೆಡ್‌ ಸಿಕ್ಕಿಲ್ಲ. ಅಲ್ಲದೇ ರೆಮಿಡಿಸಿವಿಯರ್‌ ಇಂಜೆಕ್ಷನ್‌ ಕೂಡ ಸಿಗದೆ ಅವರ ತಂದೆ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಹೌದು, ಬೆಂಗಳೂರಿನ ಲ್ಯಾಬ್‌ವೊಂದರಲ್ಲಿ ಆಂತರಿಕ ಔಷಧ ತಜ್ಞರಾಗಿರುವ ಡಾ. ಅಶ್ವಿನಿ ಸರೋಡೆ ಎಂಬವರ ತಂದೆಗೆ ಎಪ್ರಿಲ್‌ ಮೊದಲ ವಾರದಲ್ಲಿ ಕೊರೊನಾ ಸೋಂಕು ತಗುಲಿದೆ. ದಿನ ಕಳೆದಂತೆ ಸೋಂಕಿನ ತೀವ್ರತೆಯಿಂದ ಅವರಿಗೆ ವಾಂತಿಯಾಗಲು ಆರಂಭವಾಗಿದೆ. ಈ ಹಿನ್ನೆಲೆ 70 ವರ್ಷದ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಅಶ್ವಿನಿ ಮುಂದಾಗುತ್ತಾರೆ. ಆದರೆ ಎಲ್ಲೂ ಬೆಡ್ ಖಾಲಿ ಇಲ್ಲ ಎನ್ನುವ ಮಾಹಿತಿ ಸಿಗುತ್ತದೆ. ತನ್ನ ಪರಿಚಯಸ್ಥ ವೈದ್ಯರುಗಳ ಬಳಿಯೂ ತನ್ನ ಸಮಸ್ಯೆಯನ್ನು ವಿವರಿಸಿ ಬೆಡ್‌ ವ್ಯವಸ್ಥೆ ಮಾಡಿಕೊಡಲು ಕೇಳಿಕೊಂಡಿದ್ದಾರೆ. ಆದರೂ ಎಲ್ಲೂ ಬೆಡ್‌ ಖಾಲಿ ಇಲ್ಲದ ಹಿನ್ನೆಲೆ ಬೆಡ್‌ ಸಿಕ್ಕಿಲ್ಲ. ಕೊನೆಗೆ ತೀವ್ರ ಸಮಸ್ಯೆ ಇದ್ದಿದ್ದರಿಂದ ಬೆಂಗಳೂರಿನ ಒಂದು ಖಾಸಗಿ ಆಸ್ಪತ್ರೆ ಅಶ್ವಿನಿ ಅವರ ತಂದೆಗೆ ಬೆಡ್‌ ವ್ಯವಸ್ಥೆ ಮಾಡಿಕೊಟ್ಟಿದೆ. ಆದರೆ ದುರಾದೃಷ್ಟಕರವೆಂದರೆ ಅಲ್ಲಿ ರೆಮಿಡಿಸಿವಿಯರ್‌ ಔಷಧವಿರಲಿಲ್ಲ. ಇಷ್ಟೇಲ್ಲ ಬೆಳವಣಿಗೆ ಬಳಿಕ ಅಶ್ವಿನಿ ಅವರು ತಮ್ಮ ತಂದೆಯನ್ನು ಕಳೆದುಕೊಳ್ಳುವಂತೆ ಆಗಿದೆ. ಇನ್ನು ಅವರ ತಾಯಿಗೂ ಕೊರೊನಾ ಸೋಂಕು ತಗುಲಿದೆ ಎಂದು ಅಶ್ವಿನಿ ಅವರು ತಿಳಿಸಿದ್ದಾರೆ. ಕಿಡ್ನಿ ಸಂಬಂಧ ರೋಗಿಯಾಗಿರುವ ಅಶ್ವಿನಿ ತಂದೆ ಇತ್ತೀಚೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಈ ವೇಳೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಅಶ್ವಿನಿ ತಿಳಿಸಿದ್ದಾರೆ. ಇನ್ನು ಅಶ್ವಿನಿ ಜೀವನದಲ್ಲಿ ನಡೆದ ಘಟನೆ ಬಗ್ಗೆ ಅವರ ಸಹದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ನನ್ನ ಸಹದ್ಯೋಗಿಯ ತಂದೆಗೆ ಬೆಡ್‌ ವ್ಯವಸ್ಥೆ ಮಾಡಲು ನನಗೆ ಸಾಧ್ಯವಾಗಿಲ್ಲ. ಇದು ನನಗೆ ತುಂಬಾ ನೋವು ತಂದು ಕೊಟ್ಟಿದೆ. ಎಲ್ಲ ಕಡೆ ಬೆಡ್‌ ತುಂಬಿದೆ, ಸರಿಯಾಗಿ ರೆಮಿಡಿಸಿವಿಯರ್‌ ಔಷಧ ಕೊರೆತ ಕೂಡ. ಇಲ್ಲಿ ರೋಗ ಬಂದರೆ ಸಾವು ಖಂಡಿತ ಎಂದು ನೋವು ತೋಡಿಕೊಂಡಿದ್ದಾರೆ.