
ಬೆಂಗಳೂರು: ಪಶ್ಚಿಮಘಟ್ಟಗಳಿಗೆ ಸ್ಥಳೀಯವಾಗಿರುವ 1972 ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಷೇಡ್ಯೂಲ್ -1 ರಲ್ಲಿ ಬರುವ ಮಲಬಾರ್ ಬ್ಯಾಂಡೆಡ್ ಸ್ವಾಲೋಟೇಲ್ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರವು ಆಜಾದಿ ಕಾ ಅಮೃತ್ ಮಹೋತ್ಸವದ 16ನೇ ವಾರವನ್ನು ಆಯೋಜಿಸಲು ಜೈವಿಕ ಉದ್ಯಾನವನವನ್ನು ಗುರುತಿಸಿದೆ.
ಮಲಬಾರ್ ಬ್ಯಾಂಡೆಡ್ ಸ್ವಾಲೋಟೇಲ್ ಚಿಟ್ಟೆ ಪ್ರಭೇದಗಳ ಬಗ್ಗೆ ಹೆಚ್ಚಿನ ಸ್ಥಳೀಯತೆ ಮತ್ತು ಅದರ ಪಾಲನೆ ಪದ್ದತಿಗಳ ಬಗ್ಗೆ ಸೀಮಿತ ಜ್ಞಾನದಿಂದಾಗಿ, ಈ ಪ್ರಭೇದದ ಚಿಟ್ಟೆಗಳನ್ನು ಯಾವುದೇ ಮೃಗಾಲಯಗಳಲ್ಲಿ ಇರಿಸಲಾಗಿಲ್ಲ. ಭಾರತದ ಪ್ರಾಣಿಸಂಗ್ರಹಾಲಯಗಳು ಈಗ ಸಾಮಾನ್ಯ ಪ್ರಭೇದಗಳೊಂದಿಗೆ ಚಿಟ್ಟೆ ಉದ್ಯಾನವನ್ನು ಸ್ಥಾಪಿಸುವ ಪ್ರಯೋಗ ಮಾಡುತ್ತಿವೆ. ಅದು ಸಂದರ್ಶಕರು ಮತ್ತು ಮಕ್ಕಳಿಗೆ ಜನಪ್ರಿಯವಾಗಲಿದೆ.
ಪರಿಸರ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡುವಲ್ಲಿ ಚಿಟ್ಟೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ಈ ವಾರದ ಸುದೀರ್ಘ ಕಾರ್ಯಕ್ರಮದಲ್ಲಿ ಚಿಟ್ಟೆಗಳನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ತಿಳಿಯಲು ಬನ್ನೇರುಘಟ್ಟ ಜೈವಿಕ ಉದ್ಯಾನವನದೊಂದಿಗೆ ಕೈಜೋಡಿಸಲು ಪ್ರತಿಯೊಬ್ಬರನ್ನು ಆಹ್ವಾನಿಸಲಾಗಿದೆ.
ಮಲಬಾರ್ ಬ್ಯಾಂಡೆಡ್ ಸ್ವಾಲೋಟೇಲ್ ಚಿಟ್ಟೆ ಮತ್ತು ನಾವು ಅವುಗಳನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಆನ್ಲೈನ್ ವೆಬಿನಾರ್ಗಾಳನ್ನು ನಡೆಸಲಾಗುವುದು. ಹಾಗೂ ಆನ್ಲೈಆನ್ ಮೂಲಕ ರಸಪ್ರಶ್ನೆ, ಚಿತ್ರಕಲೆ, ಕರಕುಶಲ, ಛಾಯಚಿತ್ರ ಮತ್ತು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಅದರಂತೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗುವುದು. ಈ ಸಂಬಂಧ ಆನ್ ಲೈನ್ ಲಿಂಕ್ ಅನ್ನು ವೆಬ್ಸೈಟ್ (https://bannerghattabiologicalpark.org) ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ನೀಡಲಾಗುವುದು.
ಚಿತ್ರಕಲೆ ಮತ್ತು ಕರಕುಶಲ ಸ್ವರ್ಧೆಗೆ ಸಂಬಂಧಿಸಿದ ವಿವರಗಳನ್ನು ಜುಲೈ 1 ರ ಒಳಗೆ ಹಾಗೂ ಛಾಯಚಿತ್ರ ಮತ್ತು ಭಾಷಣ ಸ್ಪರ್ಧೆಗೆ ಸಂಬಂಧಿಸಿದ ವಿವರಗಳನ್ನು educationbbp@gmail.com ಗೆ ಇ-ಮೈಲ್ ಮೂಲಕ ಕಳುಹಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ