ಆಸ್ಪತ್ರೆ, ನರ್ಸಿಂಗ್‌ ಹೋಂಗಳಿಗೆ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ಸ್ವೀಕರಿಸಲು ಅನುಮತಿ

ಆಸ್ಪತ್ರೆಗಳು, ಔಷಧಾಲಯಗಳು, ನರ್ಸಿಂಗ್ ಹೋಂಗಳು, ಕೊರೊನಾ ಆರೈಕೆ ಕೇಂದ್ರಗಳು ಅಥವಾ ರೋಗಿಗಳಿಗೆ ಕೋವಿಡ್ -19 ಚಿಕಿತ್ಸೆಯನ್ನು ಒದಗಿಸುವ ಇತರ ವೈದ್ಯಕೀಯ ಸಂಸ್ಥೆಗಳಿಗೆ 2 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಸ್ವೀಕರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.

ಆಸ್ಪತ್ರೆ, ನರ್ಸಿಂಗ್‌ ಹೋಂಗಳಿಗೆ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ಸ್ವೀಕರಿಸಲು ಅನುಮತಿ
Linkup
ಹೊಸದಿಲ್ಲಿ: ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳಿಗೆ 2 ಲಕ್ಷ ರೂ.ಗೂ ಮೀರಿ ನಗದು ಸ್ವೀಕರಿಸಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಶನಿವಾರ ಅನುಮತಿ ನೀಡಿದೆ. ಏಪ್ರಿಲ್‌ 1 ರಿಂದ ಮೇ 31ರವರೆಗೆ ಈ ವಿನಾಯಿತಿ ಇರಲಿದೆ. ಬಿಲ್‌ ಪಾವತಿ ವೇಳೆ ರೋಗಿ ಮತ್ತು ಹಣ ಪಾವತಿಸುವವರ ಪ್ಯಾನ್‌ ಮತ್ತು ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಮತ್ತು ಇವರಿಬ್ಬರ ನಡುವಿನ ಸಂಬಂಧವನ್ನು ದಾಖಲು ಮಾಡಿಕೊಳ್ಳಲು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಅಧಿಸೂಚನೆಯ ಪ್ರಕಾರ, "ಆಸ್ಪತ್ರೆಗಳು, ಔಷಧಾಲಯಗಳು, ನರ್ಸಿಂಗ್ ಹೋಂಗಳು, ಕೋವಿಡ್‌ ಆರೈಕೆ ಕೇಂದ್ರಗಳು ಅಥವಾ ರೋಗಿಗಳಿಗೆ ಕೋವಿಡ್ -19 ಚಿಕಿತ್ಸೆಯನ್ನು ಒದಗಿಸುವ ಇತರ ವೈದ್ಯಕೀಯ ವ್ಯವಸ್ಥೆಗಳಿಗೆ" ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ST ಯ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ಈ ಸೆಕ್ಷನ್‌, ಯಾವುದೇ ವ್ಯಕ್ತಿಯು ಒಂದು ದಿನದಲ್ಲಿ ಒಬ್ಬ ವ್ಯಕ್ತಿಯಿಂದ, ಒಂದು ವಹಿವಾಟಿಗೆ ಸಂಬಂಧಿಸಿದಂತೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆಯುವುದನ್ನು ನಿರ್ಬಂಧಿಸುತ್ತದೆ. ಕಪ್ಪು ಹಣದ ವಹಿವಾಟನ್ನು ತಡೆಯಲು ಕೇಂದ್ರ ಸರಕಾರ 2017ರಲ್ಲಿ ಈ ನಿಯಮವನ್ನು ಜಾರಿಗೆ ತಂದಿತ್ತು.