ಅಮೆರಿಕನ್‌ ಎಕ್ಸ್‌ಪ್ರೆಸ್‌, ಡಿನ್ನರ್ಸ್‌ ಕ್ಲಬ್‌ ಕ್ರೆಡಿಟ್‌ ಕಾರ್ಡ್‌ಗೆ ಆರ್‌ಬಿಐ ನಿಷೇಧ

ಈ ಎರಡು ಕ್ರೆಡಿಟ್‌ ಕಾರ್ಡ್‌ ಕಂಪನಿಗಳು ಆರ್‌ಬಿಐ ನಿಯಮಗಳ ಅನ್ವಯ ಪೇಮೆಂಟ್‌ ಸಿಸ್ಟಮ್‌ ಡೇಟಾಗಳನ್ನು ಭಾರತದಲ್ಲಿ ಸ್ಟೋರೇಜ್‌ ಮಾಡಿಲ್ಲ. ಹೀಗಾಗಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಠಿಣ ನಿರ್ಧಾರ ತಗೆದುಕೊಂಡಿದೆ.

ಅಮೆರಿಕನ್‌ ಎಕ್ಸ್‌ಪ್ರೆಸ್‌, ಡಿನ್ನರ್ಸ್‌ ಕ್ಲಬ್‌ ಕ್ರೆಡಿಟ್‌ ಕಾರ್ಡ್‌ಗೆ ಆರ್‌ಬಿಐ ನಿಷೇಧ
Linkup
ಹೊಸದಿಲ್ಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿತರಕ ಕಂಪನಿಗಳಾದ ಬ್ಯಾಂಕಿಂಗ್‌ ಕಾರ್ಪ್‌ ಮತ್ತು ಡಿನ್ನರ್ಸ್ ಕ್ಲಬ್‌ ಇಂಟರ್‌ನ್ಯಾಷನಲ್‌ ಲಿ.ಗೆ ನಿರ್ಬಂಧ ಹೇರಿದೆ. ದೇಶೀಯ ಗ್ರಾಹಕರಿಗೆ 2021ರ ಮೇ 1 ರಿಂದ ಹೊಸ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸದಂತೆ ನಿಷೇಧ ಹೇರಿದೆ. ಹಾಲಿ ಗ್ರಾಹಕರಿಗೆ ಈ ಅದೇಶದಿಂದ ಯಾವುದೇ ತೊಂದರೆ ಆಗುವುದಿಲ್ಲ. ಈ ಕಂಪನಿಗಳು ನಿಯಮಗಳ ಅನ್ವಯ ಪೇಮೆಂಟ್‌ ಸಿಸ್ಟಮ್‌ ಡೇಟಾಗಳನ್ನು ಭಾರತದಲ್ಲಿ ಸ್ಟೋರೇಜ್‌ ಮಾಡಿರಲಿಲ್ಲ. ಹೀಗಾಗಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಠಿಣ ನಿರ್ಧಾರಕ್ಕೆ ಬಂದಿದೆ. 6 ತಿಂಗಳಿನೊಳಗೆ ಪೇಮೆಂಟ್‌ ಸಿಸ್ಟಮ್‌ಗೆ ಸಂಬಂಧಿಸಿದ ಎಲ್ಲ ಡೇಟಾಗಳನ್ನು ಭಾರತದಲ್ಲಿಯೇ ಸ್ಟೋರೇಜ್‌ ಮಾಡುವಂತೆ ಆರ್‌ಬಿಐ ಈ ಎರಡೂ ಸಂಸ್ಥೆಗಳಿಗೆ 2018ರ ಏಪ್ರಿಲ್‌ 6 ರಂದೇ ಸೂಚಿಸಿತ್ತು. ಆದರೆ ಇದನ್ನು ಈ ಸಂಸ್ಥೆಗಳು ಪಾಲಿಸಿರಲಿಲ್ಲ. ಹೀಗಾಗಿ ಈ ಎರಡೂ ಸಂಸ್ಥೆಗಳಿಗೆ ಹೊಸ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸದಂತೆ ಆರ್‌ಬಿಐ ಸೂಚನೆ ನೀಡಿದೆ. ಅಮೆರಿಕನ್‌ ಎಕ್ಸ್‌ಪ್ರೆಸ್‌ ಮತ್ತು ಆರಂಭದಲ್ಲೇ ಭಾರತ ಪ್ರವೇಶಿಸಿದ ಕ್ರೆಡಿಟ್‌ ಕಾರ್ಡ್‌ ಕಂಪನಿಗಳಾಗಿವೆ. ನಂಬಿಕಸ್ಥ ಸಂಸ್ಥೆಗಳಾಗಿ ಇವು ಹೆಸರು ಮಾಡಿದ್ದು, ಶ್ರೀಮಂತ ವರ್ಗದಲ್ಲಿ ಇವುಗಳ ಕ್ರೆಡಿಟ್‌ ಕಾರ್ಡ್‌ ಬಳಕೆ ಹೆಚ್ಚಿದೆ. ವೀಸಾ, ಮಾಸ್ಟರ್‌ ಕಾರ್ಡ್‌ ದೇಶಕ್ಕೆ ಬರುವ ಮೊದಲು ಮಾರುಕಟ್ಟೆಯಲ್ಲಿ ಇವುಗಳದ್ದೇ ಪಾಲು ಹೆಚ್ಚಿತ್ತು. ಇಲ್ಲಿಯವರೆಗೆ ಅಮೆರಿಕನ್‌ ಎಕ್ಸ್‌ಪ್ರೆಸ್‌ ಭಾರತದಲ್ಲಿ 15 ಲಕ್ಷ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಿದೆ.