ಅಭಿಮಾನಿಯ ಹಚ್ಚೆ ನೋಡಿ ರವಿಚಂದ್ರನ್ ನೀಡಿದ ಪ್ರತಿಕ್ರಿಯೆ ಇದು..

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಪ್ಪಟ ಅಭಿಮಾನಿಯಾಗಿರುವ ನಿರ್ದೇಶಕ ರಘುರಾಮ್ ವರ್ಷಗಳ ಹಿಂದೆಯೇ 'ರವಿಚಂದ್ರನ್' ಅವರ ಹೆಸರಿನಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು. ಅಂದು ರಘುರಾಮ್ ಹಾಕಿಸಿಕೊಂಡಿದ್ದ ಹಚ್ಚೆ ಕಂಡು ರವಿಚಂದ್ರನ್ ಮತ್ತವರ ಪತ್ನಿ ಹೇಳಿದ್ದೇನು ಗೊತ್ತಾ? ಆ ಇಂಟ್ರೆಸ್ಟಿಂಗ್ ಕಥೆಯನ್ನು ನಿರ್ದೇಶಕ ರಘುರಾಮ್ ನಿಮ್ಮ 'ವಿಜಯ ಕರ್ನಾಟಕ ವೆಬ್' ಆರಂಭಿಸಿರುವ ಕನಸುಗಾರನ ಕಹಾನಿ' ವಿಶೇಷ ಸರಣಿಯಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಯ ಹಚ್ಚೆ ನೋಡಿ ರವಿಚಂದ್ರನ್ ನೀಡಿದ ಪ್ರತಿಕ್ರಿಯೆ ಇದು..
Linkup
ತಾರೆಯರು ಅಂದ್ಮೇಲೆ ಅಭಿಮಾನಿಗಳು ಇದ್ದೇ ಇರುತ್ತಾರೆ. ಅಭಿಮಾನಿಗಳು ತಮ್ಮ ಅಭಿಮಾನವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಎಷ್ಟೋ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿರುವುದುಂಟು. ಅದೇ ರೀತಿ ಕ್ರೇಜಿ ಸ್ಟಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ನಿರ್ದೇಶಕ ಕೂಡ ವರ್ಷಗಳ ಹಿಂದೆಯೇ 'ರವಿಚಂದ್ರನ್' ಅವರ ಹೆಸರಿನಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು. ಅಂದು ರಘುರಾಮ್ ಹಾಕಿಸಿಕೊಂಡಿದ್ದ ಹಚ್ಚೆ ಕಂಡು ರವಿಚಂದ್ರನ್ ಮತ್ತವರ ಪತ್ನಿ ಹೇಳಿದ್ದೇನು ಗೊತ್ತಾ? ಆ ಇಂಟ್ರೆಸ್ಟಿಂಗ್ ಕಥೆಯನ್ನು ನಿರ್ದೇಶಕ ರಘುರಾಮ್ ನಿಮ್ಮ 'ವಿಜಯ ಕರ್ನಾಟಕ ವೆಬ್' ಆರಂಭಿಸಿರುವ '' ವಿಶೇಷ ಸರಣಿಯಲ್ಲಿ ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅಂದ್ರೆ ಹುಚ್ಚು! ''ಮೈಸೂರಿನಲ್ಲಿ 6ನೇ ಕ್ಲಾಸ್ ಓದುವಾಗ ಕೆಲ ಪದ್ಯಗಳನ್ನು ಶಿಕ್ಷಕರಿಗೆ ಒಪ್ಪಿಸಲೇಬೇಕಿತ್ತು. ನನಗೆ ಮೊದಲೇ ರವಿಚಂದ್ರನ್ ಸರ್ ಅಂದ್ರೆ ಹುಚ್ಚು. ಅವರ ಪ್ರಭಾವ ನನ್ನ ಮೇಲೆ ಹೇಗಿತ್ತು ಅಂದ್ರೆ.. 'ಇವನೇ ನೋಡು ಅನ್ನದಾತ..' ಪದ್ಯವನ್ನು 'ಪ್ರೇಮಲೋಕದಿಂದ ಬಂದ..' ಹಾಡಿನ ಟ್ಯೂನ್‌ನಲ್ಲಿ ನೆನಪಿನಲ್ಲಿಟ್ಟುಕೊಳ್ಳುತ್ತಿದೆ. ಹಾಗೆಯೇ ಅದನ್ನು ಶಿಕ್ಷಕರ ಮುಂದೆ ಹೇಳಿದಾಗ.. ಅವರು ನನ್ನನ್ನು ನೋಡಿ ನಕ್ಕುಬಿಟ್ಟಿದ್ದರು'' ''ರವಿಚಂದ್ರನ್ ಅವರು ಯಾವ ಸಿನಿಮಾದಲ್ಲಿ ಹೇಗೆ ಗೆಟಪ್ ಹಾಕಿಕೊಳ್ತಾರೆ, ಅದೇ ರೀತಿ ನಾನು ಹಾಕಿಕೊಳ್ಳಬೇಕು ಎಂಬ ಆಸೆ ನನಗೆ. 'ಚಿಕ್ಕೆಜಮಾನ್ರು' ಸಿನಿಮಾದಲ್ಲಿ ತಲೆಕೂದಲನ್ನು ಮೇಲೆತ್ತಿ ಬಾಚುತ್ತಿದ್ದರು. ನಾನೂ ಅದೇ ರೀತಿ ಕಾಣಬೇಕು.. ಹಣೆ ದೊಡ್ಡದಾಗಿ ಕಾಣಬೇಕು ಅಂತ ತಲೆಕೂದಲನ್ನು ಸುಟ್ಟುಕೊಂಡೆ. 'ಶ್ರೀರಾಮಚಂದ್ರ' ಸಿನಿಮಾ ಬಂದಾಗ ಉಬ್ಬುಹಲ್ಲು, ತಲೆಗೆ ಕ್ಯಾಪ್ ಹಾಕಿಕೊಂಡು ಓಡಾಡುತ್ತಿದ್ದೆ'' ಎಂದು ರಘುರಾಮ್ ಹೇಳಿದ್ದಾರೆ. ಹಚ್ಚೆ ನೋಡಿ ರವಿಚಂದ್ರನ್ ಹೇಳಿದ್ದೇನು? ''ಅಂದಿನ ನನ್ನ ಗೆಳತಿ.. ಇಂದಿನ ಪತ್ನಿ, ರವಿಚಂದ್ರನ್ ಹೆಸರು ಹಾಗೂ ಹೂವನ್ನು ನಾನು ಹಚ್ಚೆ ಹಾಕಿಸಿಕೊಂಡೆ. ಅದನ್ನ ತೋರಿಸಲು ಹೋದಾಗ ರವಿ ಸರ್ ಮನೆಯಲ್ಲಿ ಅವರ ಪತ್ನಿ ನನಗೆ ಬೈದಿದ್ರು. ಕೂಡಲೆ ಇಂಜೆಕ್ಷನ್ ತೆಗೆದುಕೊಳ್ಳಲು ಹೇಳಿದ್ದರು'' ''ಕೆಲ ದಿನಗಳ ಬಳಿಕ ರವಿ ಸರ್‌ಗೆ ನನ್ನ ಹಚ್ಚೆಯನ್ನು ತೋರಿಸಿದೆ. ಆಗ ಅವರು ನನಗೆ ಬೈದಿದ್ರು. ''ನನ್ನ ಮೇಲಿನ ಅಭಿಮಾನ ಓಕೆ. ಆದರೆ, ನಿಮ್ಮ ದೇಹಕ್ಕೆ ಯಾಕೆ ನೋವು ಮಾಡಿಕೊಳ್ತೀರಾ. ನನ್ನ ಮಗ ಹೀಗೆಲ್ಲಾ ಮಾಡಿಕೊಳ್ತಾನೆ ಅಂತ ನಿಮ್ಮ ತಂದೆ-ತಾಯಿಗೆ ಎಷ್ಟು ಬೇಜಾರು ಆಗಬಹುದು.. ಅಭಿಮಾನ-ಪ್ರೀತಿ ಇಟ್ಟುಕೊಳ್ಳಿ, ಆದರೆ ಯಾವತ್ತೂ ನಿಮಗೆ ನೀವೇ ಶಿಕ್ಷೆ ಕೊಟ್ಟುಕೊಳ್ಳಬೇಡಿ. ನನಗೆ ತುಂಬಾ ಹರ್ಟ್ ಆಗುತ್ತೆ'' ಅಂತ ನನಗೆ ಹೇಳಿದ್ದರು'' ಎಂದು ರಘುರಾಮ್ ಅಂದಿನ ದಿನಗಳನ್ನು ನೆನಪಿಸಿಕೊಂಡರು. ಪ್ರತಿ ಚಿತ್ರವನ್ನೂ ಡೆಕೊರೇಟ್ ಮಾಡ್ತಾರೆ ''ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಸ್ಪೇಸ್ ಕೊಡುತ್ತಾರೆ. ಅವರು ಸಿನಿಮಾನ ಡೆಕೊರೇಟ್ ಮಾಡ್ತಾರೆ. ಬರೀ ಹೀರೋಯಿನ್‌ಗಳನ್ನ ಮಾತ್ರ ಚೆನ್ನಾಗಿ ತೋರಿಸುತ್ತಾರೆ ಅಂತಲ್ಲ. 'ಪುಟ್ನಂಜ' ಸಿನಿಮಾದಲ್ಲಿ ಪುಟ್ಟಮಲ್ಲಿ ಎಂಬ ಪಾತ್ರವನ್ನೂ ಅದ್ಭುತವಾಗಿ ತೋರಿಸಿದ್ದಾರೆ'' ''ರವಿ ಸರ್‌ಗೆ ಸುಳ್ಳು ಹೇಳಬಾರದು. ಸುಳ್ಳು ಹೇಳಿದರೆ ಅವರಿಗೆ ತುಂಬಾ ಕೋಪ ಬರುತ್ತದೆ. ಪ್ರಯತ್ನ ಪಡದೆ ಕಾರಣ ಹೇಳಿದರೆ ಅವರು ಒಪ್ಪುವುದಿಲ್ಲ'' ''ನಾನು ನಿರ್ದೇಶಕ ಆಗುವ ಮುನ್ನ ನನಗೆ ಅನೇಕ ಸಲಹೆಗಳನ್ನು ರವಿಚಂದ್ರನ್ ನೀಡಿದರು. ಶೂಟಿಂಗ್ ಪ್ರೋಗ್ರಾಂಗಳನ್ನು ಹೇಗೆ ಶೆಡ್ಯೂಲ್‌ ಮಾಡಬೇಕು ಎಂಬುದನ್ನು ನನಗೆ ಹೇಳಿಕೊಟ್ಟರು. ಇವತ್ತಿಗೂ ನಾನು ಅದೇ ಫಾರ್ಮ್ಯಾಟ್‌ನಲ್ಲಿ ಕೆಲಸ ಮಾಡುವುದು'' ಎಂದರು ರಘುರಾಮ್.