ಅಣ್ಣ ವಿಜಯ್ ರಾಘವೇಂದ್ರ, ಭಾವನಾ ರಾವ್ 'ಗ್ರೇ ಗೇಮ್ಸ್'ಗೆ ಶುಭ ಹಾರೈಸಿದ ನಟ ಶ್ರೀಮುರಳಿ

ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಭಾವನಾ ರಾವ್ ಅವರು 'ಗ್ರೇ ಗೇಮ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ 'ರೋರಿಂಗ್ ಸ್ಟಾರ್' ಶ್ರೀಮುರಳಿ ಅವರು ಆರಂಭ ಫಲಕ ತೋರಿ ಶುಭ ಹಾರೈಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಅಣ್ಣ ವಿಜಯ್ ರಾಘವೇಂದ್ರ, ಭಾವನಾ ರಾವ್ 'ಗ್ರೇ ಗೇಮ್ಸ್'ಗೆ ಶುಭ ಹಾರೈಸಿದ ನಟ ಶ್ರೀಮುರಳಿ
Linkup
ಚಿಕ್ಕವಯಸ್ಸಿನಿಂದಲ್ಲೂ ಅಭಿನಯದಿಂದ ಗಮನಸೆಳೆದಿರುವ ನಟ ವಿಜಯ ರಾಘವೇಂದ್ರ ಅವರ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. '' ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ನಟ ಶ್ರೀ ಮುರಳಿ ಆರಂಭ ಫಲಕ ತೋರಿ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. ಎಸ್.ಎ.ಚಿನ್ನೇಗೌಡ, ಬಿ.ಕೆ.ಶಿವರಾಂ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಸಿನಿಮಾಕ್ಕೆ ಶುಭ ಕೋರಿದರು. ನಿರ್ದೇಶಕ ಗಂಗಾಧರ್ ಸಾಲಿಮಠ್ ಮಾತನಾಡಿ, "ಸೈಬರ್ ಕ್ರೈಮ್ ಸುತ್ತ ನಡೆಯುವ ಕಥೆಯಿದು. ಸೈಕಲಾಜಿಸ್ಟ್ ಪಾತ್ರದಲ್ಲಿ ವಿಜಯ ರಾಘವೇಂದ್ರ ಅಭಿನಯಿಸುತ್ತಿದ್ದಾರೆ. ಗ್ರೇ ಗೇಮ್ ಆಡುವ ಇಪ್ಪತ್ತು ವರ್ಷದ ಹುಡುಗನ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೈ ನಟಿಸುತ್ತಿದ್ದಾರೆ. ವರ್ಕ್ ಶಾಪ್ ಮೂಲಕ ಜೈ ಅವರಿಗೆ ಅಭಿನಯದ ತರಬೇತಿ ನೀಡಲಾಗಿದೆ.‌ ಜೈ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.‌ ಸೈಬರ್ ಕೈಮ್‌ನ ವಿಶೇಷ ಅಧಿಕಾರಿ ಪಾತ್ರವನ್ನು ನಟಿ ಮಾಡಲಿದ್ದಾರೆ" ಎಂದು ಹೇಳಿದ್ದಾರೆ. ಈ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ಅಕ್ಟೋಬರ್ 8ರಿಂದ ಆರಂಭವಾಗಲಿದೆ. "ನನಗೆ ಈ ಅವಕಾಶ ಸಿಗಲು ಪ್ರಮುಖ ಕಾರಣ ರಾಘು ಮಾವ. ಅವರಿಗೆ ಹಾಗೂ ನಿರ್ದೇಶಕ, ನಿರ್ಮಾಪಕರಿಗೆ ತುಂಬಾ ಧನ್ಯವಾದ. ವರ್ಕ್‌ಶಾಪ್ ಮೂಲಕ ನಿರ್ದೇಶಕರು ಅಭಿನಯದ ತರಬೇತಿ ನೀಡಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ" ಎಂದರು ಜೈ. "ಎಲ್ಲರನ್ನೂ ಭೇಟಿಯಾಗಿ ಬಹಳ ದಿನಗಳಾಗಿತ್ತು. ಈಗ ಎಲ್ಲರನ್ನೂ ನೋಡಿ ಸಂತೋಷವಾಗಿದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಸೈಬರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಾರೆ ನಟಿ ಭಾವನಾ "ಸಾಮಾನ್ಯವಾಗಿ ನಾನು ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ನಿರ್ದೇಶಕರು ಹೇಳಿದ ಕೂಡಲೆ ಸಿನಿಮಾ ಒಪ್ಪಿಕೊಳ್ಳೋಣ ಅನಿಸಿತು. ಇತ್ತೀಚೆಗೆ ನಾನು‌, ಜೈ ಜೊತೆ ವರ್ಕ್ ಶಾಪ್ ನಲ್ಲಿ ಪಾಲ್ಗೊಂಡಿದ್ದೆ. ಜೈ ಉತ್ತಮವಾಗಿ ನಟಿಸುತ್ತಾನೆ. ನಾನು ಚಿನ್ನೇಗೌಡರ ಕುಟುಂಬವನ್ನು ಚಿಕ್ಕಂದಿನಿಂದಲೂ ಬಲ್ಲೆ. ಈಗ ಅವರ ಕುಟುಂಬದವರ ಜೊತೆ ನಟಿಸುವ ಅವಕಾಶ ದೊರಕಿದ್ದು ಖುಷಿಯಾಗಿದೆ ಎಂದರು ಅಪರ್ಣಾ. "ಗ್ರೇ ಗೇಮ್ಸ್"ಗೆ ವರುಣ್ ಅವರ ಛಾಯಾಗ್ರಹಣವಿದ್ದು, ಶ್ರೀಯನ್ಶ್ ಶ್ರೀರಾಮ್ ಹಾಗೂ ಡೋಲೇಶ್ವರ ರಾಜ್ ಸಂಕು ಸಂಗೀತ ನೀಡುತ್ತಿದ್ದಾರೆ. ದತ್ತಣ್ಣ ನಿರ್ಮಾಣ ನಿರ್ವಹಣೆ ಹಾಗೂ ರಂಜಿತ್ ಅವರ ಸಂಕಲನ ಈ ಚಿತ್ರಕ್ಕಿದೆ. ಡೋಲೇಶ್ವರ ರಾಜ್ ಸಂಕು, ಅರವಿಂದ್ ಜೋಷಿ, ಸತೀಶ್ ಗ್ರಾಮ್ ಪುರೋಹಿತ್ ಈ ಚಿತ್ರದ ಸಹ ನಿರ್ಮಾಪಕರು. ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಬಸವರಾಜ್ ಕೆಡದ್ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಸೀತಾರಾಮ್‌ ಬಿನೋಯ್‌ ಕೇಸ್‌ ನಂ. 18' ಸಿನಿಮಾ ನಂತರದಲ್ಲಿ ನಟ ಅವರು, 'ಕದ್ದ ಚಿತ್ರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಟೀಸರ್‌ ರಿಲೀಸ್‌ ಆಗಿದೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಸುಹಾಸ್‌ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.