Samantha: ನಟಿ ಸಮಂತಾರನ್ನು ಸ್ಪರ್ಶಿಸದೆ ರಕ್ಷಿಸಿದ ನಟ ವರುಣ್‌ ಧವನ್ ಗುಣವನ್ನು ಮೆಚ್ಚಿದ ನೆಟ್ಟಿಗರು

ಬಾಲಿವುಡ್ ನಟ ವರುಣ್ ಧವನ್ ಅವರು ಮುಂಬೈನಲ್ಲಿ ಸಮಂತಾರನ್ನು ರಕ್ಷಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ, ರಶ್ಮಿಕಾ ಮಂದಣ್ಣ ಜೊತೆ ಟ್ರೆಂಡಿಂಗ್ ಸಾಂಗ್‌ಗೆ ಕೂಡ ಹೆಜ್ಜೆ ಹಾಕಿದ್ದಾರೆ.

Samantha: ನಟಿ ಸಮಂತಾರನ್ನು ಸ್ಪರ್ಶಿಸದೆ ರಕ್ಷಿಸಿದ ನಟ ವರುಣ್‌ ಧವನ್ ಗುಣವನ್ನು ಮೆಚ್ಚಿದ ನೆಟ್ಟಿಗರು
Linkup
ನಟ ಇತ್ತೀಚೆಗೆ ದಕ್ಷಿಣ ಭಾರತೀಯ ನಟಿಯರ ಜೊತೆ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದಾರೆ. ಆ ನಟಿಯರಲ್ಲಿ , ಇರೋದು ವಿಶೇಷ. ಈ ವೇಳೆ ಸಮಂತಾರನ್ನು ವರುಣ್ ರಕ್ಷಿಸಿದ ರೀತಿ, ರಶ್ಮಿಕಾ ಜೊತೆಗೆ ಡ್ಯಾನ್ಸ್ ಮಾಡಿದ ಕುರಿತು ಚರ್ಚೆಯಾಗುತ್ತಿದೆ. ರಶ್ಮಿಕಾ ಮಂದಣ್ಣ ಜೊತೆ ಡ್ಯಾನ್ಸ್ ( ) ರಶ್ಮಿಕಾ ಮಂದಣ್ಣ ಹಾಗೂ ವರುಣ್ ಧವನ್‌ ಜಾಹೀರಾತಿಗೋಸ್ಕರ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ವೇಳೆ ದಳಪತಿ ವಿಜಯ್ ಅವರ 'Arabic Kuthu' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ವರುಣ್ ಧವನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಇನ್ನೇನು ಡ್ಯಾನ್ಸ್ ಮುಗಿಯಿತು ಎನ್ನುವಾಗ ರಶ್ಮಿಕಾ ವರುಣ್‌ಗೆ ಛಮಕ್ ಕೊಟ್ಟಿದ್ದಾರೆ. ಸಮಂತಾರನ್ನು ರಕ್ಷಿಸಿದ ವರುಣ್ ಧವನ್ ( ) ಮುಂಬೈನಲ್ಲಿ ವರುಣ್ ಧವನ್, ಸಮಂತಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಪಾಪರಾಜಿಗಳು ಫೋಟೋಕ್ಕೆ ಪೋಸ್ ಕೊಡುವಂತೆ ಬೇಡಿಕೆ ಇಟ್ಟಾಗ ವರುಣ್ ಧವನ್, "ಅವರನ್ನು ಹೆದರಿಸಬೇಡಿ" ಎಂದಿದ್ದಾರೆ. ವರುಣ್ ಮಾತು ಕೇಳಿ ಸಮಂತಾ ನಕ್ಕಿದ್ದಾರೆ. ಸಮಂತಾ ಮುಂದೆ ಸಾಗುತ್ತಿದ್ದಂತೆ ವರುಣ್ ಅವರನ್ನು ರಕ್ಷಿಸುತ್ತ ಸಮಂತಾ ಹಿಂದೆ ಸಾಗಿದ್ದಾರೆ. ಸಮಂತಾ ಸುತ್ತ ವರುಣ್ ಕೈಗಳನ್ನು ಮುಂದೆ ಮಾಡಿ ಅವರನ್ನು ರಕ್ಷಿಸಿದ್ದಾರೆ. ಸಮಂತಾ ಕಾರ್‌ವೊಳಗೆ ಹೋಗುವವರೆಗೂ ವರುಣ್ ಅವರ ಹಿಂದೆ ಹೋಗಿದ್ದರು. ಈ ವಿಡಿಯೋ ನೋಡಿ ಅನೇಕರು ವರುಣ್‌ರನ್ನು ಮೆಚ್ಚಿದ್ದಾರೆ. ವರುಣ್‌ಗೆ ಥ್ಯಾಂಕ್ಯೂ ಎಂದು ಹೇಳಿ ಸಮಂತಾ ಅಲ್ಲಿಂದ ಹೊರಟಿದ್ದಾರೆ. ವರುಣ್ ಕೆಲಸಕ್ಕೆ ಮೆಚ್ಚುಗೆ ಈ ವಿಡಿಯೋಕ್ಕೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದು, "ಕೈಗಳನ್ನು ಮುಂದೆ ಚಾಚಿ ಸಮಂತಾರನ್ನು ರಕ್ಷಿಸಿದ್ದು ಇಷ್ಟ ಆಯ್ತು. ಸಮಂತಾರನ್ನು ವರುಣ್ ಟಚ್ ಮಾಡಲೇ ಇಲ್ಲ. ವರುಣ್ ತುಂಬ ಒಳ್ಳೆಯ ವ್ಯಕ್ತಿ. ಈ ರೀತಿ ಸಹಕಲಾವಿದರು ಸಿಗಬೇಕು. ಯಾವಾಗಲೂ ಸಹಕಲಾವಿದರನ್ನು ವರುಣ್ ರಕ್ಷಿಸುತ್ತಾರೆ. ವರುಣ್ ತುಂಬ ವಿಧೇಯ ವ್ಯಕ್ತಿ. ಲವ್ ಯೂ ಸ್ಯಾಮ್" ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವರುಣ್, ಸಮಂತಾ ಒಟ್ಟಿಗೆ ಸಿನಿಮಾ? ( ) "ನೀವಿಬ್ಬರೂ ಒಟ್ಟಿಗೆ ಯಾವುದಾದರೂ ಪ್ರಾಜೆಕ್ಟ್ ಮಾಡುತ್ತೀರಾ? ನಿಮ್ಮಿಬ್ಬರನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದೇನೆ" ಎಂದು ಕೂಡ ಕೆಲವರು ಹೇಳಿದ್ದಾರೆ ಅಮೆಜಾನ್ ಪ್ರೈಮ್ ಸಿರೀಸ್‌ನ ಪ್ರಾಜೆಕ್ಟ್‌ಗೋಸ್ಕರ ರಾಜ್ & ಡಿಕೆಗೋಸ್ಕರ ವರುಣ್, ಸಮಂತಾ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂಬೈನಲ್ಲಿ ಸಮಂತಾ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಮದ್ಯಪಾನ ಪ್ರಚಾರಕ್ಕಾಗಿ ಸಮಂತಾ ಬೋಲ್ಡ್ ಉಡುಗೆ ತೊಟ್ಟಿದ್ದು ಕೂಡ ಸಾಕಷ್ಟು ಚರ್ಚೆಯಾಗಿತ್ತು. ನಾಗ ಚೈತನ್ಯ ಅವರಿಗೆ ವಿಚ್ಛೇದನ ನೀಡಿದ ಬಳಿಕ ಸಮಂತಾ ಸಿನಿಮಾಗಳತ್ತ ಗಮನಹರಿಸುತ್ತಿದ್ದಾರೆ.