Rahul Gandhi ವೈಷ್ಣೋದೇವಿ ಯಾತ್ರೆ ಕೈಗೊಂಡ ಸ್ಥಳಗಳನ್ನು ಗಂಗಾಜಲದಿಂದ ಶುದ್ಧಿ ಮಾಡಿದ ಬಿಜೆಪಿ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವೈಷ್ಣೋದೇವಿ ಯಾತ್ರೆ ಕೈಗೊಂಡಿದ್ದ ಸ್ಥಳಗಳನ್ನು ಜಮ್ಮು ಕಾಶ್ಮೀರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗಂಗಾಜಲ ಸಿಂಪಡಿಸಿ ಶುದ್ಧೀಕರಣ ಮಾಡಿದ್ದಾರೆ.

Rahul Gandhi ವೈಷ್ಣೋದೇವಿ ಯಾತ್ರೆ ಕೈಗೊಂಡ ಸ್ಥಳಗಳನ್ನು ಗಂಗಾಜಲದಿಂದ ಶುದ್ಧಿ ಮಾಡಿದ ಬಿಜೆಪಿ!
Linkup
ಶ್ರೀನಗರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ವೈಷ್ಣೋ ದೇವಿ ಯಾತ್ರೆ ಕೈಗೊಂಡ ಸ್ಥಳಗಳನ್ನು ಜಮ್ಮು ಕಾಶ್ಮೀರ ಕಾರ್ಯಕರ್ತರು ಹಾಕಿ ಶುದ್ಧಿ ಮಾಡಿದ್ದಾರೆ. ವೈಷ್ಣೋ ದೇವಿ ಭೇಟಿ ವೇಳೆ ರಾಹುಲ್‌ ಗಾಂಧಿ ವೈಷ್ಣೋ ದೇವಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಅವರು ಭೇಟಿ ನೀಡಿದ ಸ್ಥಳಗಳನ್ನು ಗಂಗಾಜಲ ಹಾಕಿ ಶುದ್ಧಿ ಮಾಡಿರುವುದಾಗಿ ಬಿಜೆಪಿ ಹೇಳಿದೆ. ಜಮ್ಮು ಕಾಶ್ಮೀರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅರುಣ್‌ ಜಮ್ವಾಲ್‌ ಅವರ ನೇತೃತ್ವದಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆದಿದ್ದು, ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ದೇಗುಲದ ಪಾವಿತ್ರ್ಯತೆಯನ್ನು ಹಾಳುಗೆಡವಿದ್ದರಿಂದ ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ವೈಷ್ಣೋ ದೇವಿ ಯಾತ್ರೆ ನಡೆಯುವ ದಾರಿಯಲ್ಲಿ ಕಾಂಗ್ರೆಸ್‌ ಬಾವುಟಗಳನ್ನು ತಂದು ರಾಜಕೀಯ ಘೋಷಣೆ ಕೂಗಿದ್ದಾರೆ. ಇದರಿಂದ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ ವೈಷ್ಣೋ ದೇವಿ ಯಾತ್ರೆಯ ದಾರಿಯಲ್ಲಿ ಗಂಗಾಜಲವನ್ನು ಸಿಂಪಡಿಸಿ ಶುದ್ಧೀಕರಣ ಮಾಡಿದ್ದೇವೆ ಎಂದು ಬಿಜೆಪಿ ಹೇಳಿದೆ. ಸೆಪ್ಟೆಂಬರ್‌ 9 ರಂದು ವೈಷ್ಣೋ ದೇವಿ ಯಾತ್ರೆ ಕೈಗೊಂಡಿದ್ದ ರಾಹುಲ್‌ ಗಾಂಧಿ, ಕಾತ್ರಾ ಬೇಸ್‌ ಕ್ಯಾಂಪ್‌ನಿಂದ ದೇವಿಯ ನೆಲೆ ಇರುವ ತ್ರಿಕುಟಾ ಬೆಟ್ಟದ ವರೆಗೆ ಸುಮಾರು 13 ಕಿಲೋ ಮೀಟರ್‌ ಪಾದಯಾತ್ರೆ ಮಾಡಿ ದೇವಿಯ ದರ್ಶನ ಪಡೆದಿದ್ದರು. ಈ ವೇಳೆ ದೇಗುಲದ ಪ್ರಧಾನ ಅರ್ಚಕ ಹಾಗೂ ಆರತಿ ಅರ್ಚಕರನ್ನು ಭೇಟಿ ಮಾಡಿ ಆಶೀರ್ವಾದವನ್ನೂ ಪಡೆದುಕೊಂಡಿದ್ದರು. ಯಾತ್ರೆಯುದ್ಧಕ್ಕೂ ತಮ್ಮ ನಾಯಕರನಿಗೆ ಕಾಂಗ್ರೆಸ್‌ ಕಾರ್ತಕರ್ತರು ಸ್ಥಳೀಯ ನಾಯಕರು ಸಾಥ್‌ ನೀಡಿದ್ದರು. ಘೋಷಣೆಗಳನ್ನೂ ಕೂಗಿ ಸ್ವಾಗತ ಕೋರಿದ್ದರು. ಇದರಿಂದಾಗಿ ದೇಗುಲ ಪಾವಿತ್ರ್ಯತೆ ಹಾಳಾಗಿದೆ ಎಂದು ಬಿಜೆಪಿ ಗಂಗಾಜಲ ಸಿಂಪಡಿಸಿದ ಶುದ್ಧೀಕರಣ ಮಾಡಿದೆ.