ಬೆಂಗಳೂರಿನಲ್ಲಿ ಬಾಂಗ್ಲಾ ವಲಸಿಗರ ಹಾವಳಿ; ಜನವಸತಿಗೂ ವ್ಯಾಪಿಸಿದ ಕಸದ ದಂಧೆ!

ಆಟೊ ರಿಕ್ಷಾದಲ್ಲಿ ನಾನಾ ಕಡೆ ತಿರುಗಾಡಿ ವಲಸಿಗರು ಕಸ ತಂದು ರಾಶಿ ಹಾಕುತ್ತಿದ್ದಾರೆ. ಇದರಲ್ಲಿ ಪ್ಲಾಸ್ಟಿಕ್‌, ವೈರ್‌ ಸೇರಿ ನಾನಾ ತ್ಯಾಜ್ಯ ವಸ್ತುಗಳು ಸೇರಿರುತ್ತವೆ. ಕೆಲ ವಸ್ತುಗಳನ್ನು ಇಟ್ಟುಕೊಂಡು ಬೇಡವಾಗಿರುವ ವಸ್ತುಗಳನ್ನು ಇಲ್ಲಿಯೇ ಬೆಂಕಿ ಹಾಕಿ ಸುಡುತ್ತಾರೆ. ಕಸಕ್ಕೆ ಹಾಕಿದ ಬೆಂಕಿ ಮನೆಗಳಿಗೆ ಪಕ್ಕದಲ್ಲೇ ಇರುವ ಮನೆಗಳಿಗೂ ಹಬ್ಬುವ ಆತಂಕವಿದೆ.

ಬೆಂಗಳೂರಿನಲ್ಲಿ ಬಾಂಗ್ಲಾ ವಲಸಿಗರ ಹಾವಳಿ; ಜನವಸತಿಗೂ ವ್ಯಾಪಿಸಿದ ಕಸದ ದಂಧೆ!
Linkup
ಶಶಿಕುಮಾರ್‌ ಎಸ್‌ ದಕ್ಷಿಣ ಬೆಂಗಳೂರು: ಬಾಂಗ್ಲಾವಲಸಿಗರು ಇತ್ತೀಚಿನ ದಿನಗಳಲ್ಲಿ ಜನವಸತಿ ಪ್ರದೇಶಕ್ಕೂ ವಕ್ಕರಿಸುತ್ತಿದ್ದು, ಸುರಿದು ಸ್ಥಳೀಯರ ನೆಮ್ಮದಿ ಕಸಿಯುತ್ತಿದ್ದಾರೆ. ಸುಮಾರು 5000ಕ್ಕೂ ಹೆಚ್ಚು ಜನರು ವಾಸಿಸುವ ಬೇಗೂರಿನ ವಿಶ್ವಪ್ರಿಯ ಬಡಾವಣೆಯಲ್ಲಿ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡ ಜಾಗದಲ್ಲಿ ಬಾಂಗ್ಲಾವಲಸಿಗರು ಕಸ ಬೇರ್ಪಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾಲ್ಕು ನಿವೇಶನಗಳ ಮಾಲೀಕರಾಗಿರುವ ಸ್ಥಳೀಯರೊಬ್ಬರು ಜಾಗ ನೀಡುವ ಮೂಲಕ ಬಾಂಗ್ಲಾವಲಸಿಗರಿಗೆ ಬೆಂಬಲವಾಗಿ ನಿಂತಿದ್ದಾರೆ. ಆಟೊ, ರಿಕ್ಷಾದಲ್ಲಿ ನಾನಾ ಕಡೆ ತಿರುಗಾಡಿ ವಲಸಿಗರು ಕಸ ತಂದು ರಾಶಿ ಹಾಕುತ್ತಿದ್ದಾರೆ. ಇದರಲ್ಲಿ ಪ್ಲಾಸ್ಟಿಕ್‌, ವೈರ್‌ ಸೇರಿ ನಾನಾ ತ್ಯಾಜ್ಯ ವಸ್ತುಗಳು ಸೇರಿರುತ್ತವೆ. ಕೆಲ ವಸ್ತುಗಳನ್ನು ಇಟ್ಟುಕೊಂಡು ಬೇಡವಾಗಿರುವ ವಸ್ತುಗಳನ್ನು ಇಲ್ಲಿಯೇ ಬೆಂಕಿ ಹಾಕಿ ಸುಡುತ್ತಾರೆ. ಕಸಕ್ಕೆ ಹಾಕಿದ ಬೆಂಕಿ ಮನೆಗಳಿಗೆ ಪಕ್ಕದಲ್ಲೇ ಇರುವ ಮನೆಗಳಿಗೂ ಹಬ್ಬುವ ಆತಂಕವಿದೆ. ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳನ್ನು ಸುಟ್ಟಾಗ ಬರುವ ದುರ್ವಾಸನೆ ಸ್ಥಳೀಯರಲ್ಲಿ ಉಸಿರಾಟದ ಸಮಸ್ಯೆ ಉಂಟು ಮಾಡುತ್ತಿದೆ. ಕಸದ ರಾಶಿ ಸೊಳ್ಳೆ ಉತ್ಪತ್ತಿ ತಾಣವಾಗಿಯೂ ಪರಿವರ್ತನೆಯಾಗಿದೆ. ''ಪಾಲಿಕೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. 15 ದಿನಗಳು ಕಳೆದಿವೆ. ಆದರೂ ಪ್ರಯೋಜನವಾಗಿಲ್ಲ,'' ಎಂದು ವಿಶ್ವಪ್ರಿಯ ಬಡಾವಣೆ ನಿವಾಸಿ ಕೃಷ್ಣಮೂರ್ತಿ ದೂರಿದರು. ''ಕಸ ಬೇರ್ಪಡಿಸಲು ವಲಸಿಗರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ನಿವಾಸಿಗಳಿಗೆ ಕಿರಿಕಿರಿ ಆಗುತ್ತಿರುವ ಬಗ್ಗೆ ಜಾಗದ ಮಾಲೀಕರಿಗೆ ಫೋನ್‌ ಮಾಡಿ ತಿಳಿಸಿದ್ದೇವೆ. ಇದಕ್ಕೆ ಅವರು ಸ್ಪಂದಿಸಿಲ್ಲ. ಪೊಲೀಸರಿಗೆ, ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಣ ಪಡೆದು ಸುಮ್ಮನಾಗುತ್ತಿದ್ದಾರೆ,'' ಎಂದು ವಿಶ್ವ ಪ್ರಿಯ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ರಾಮಣ್ಣ ದೂರಿದರು. ಬೇಗೂರು ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯ ಎಂ.ಆಂಜಿನಪ್ಪ ಈ ಕುರಿತು ಪ್ರತಿಕ್ರಿಯಿಸಿ, ''ಕಳೆದ ಬಾರಿ ಕಸ ಬೇರ್ಪಡಿಸುವ ಚಟುವಟಿಕೆಗೆ ತಡೆಯೊಡ್ಡಿ, ಜಾಗ ತೆರವು ಮಾಡಿಸಿದ್ದೆವು. ಸ್ಥಳೀಯರಲ್ಲೇ ಕೆಲವರು ವಲಸಿಗರಿಗೆ ಬೆಂಬಲ ನೀಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ,'' ಎಂದರು. ವಿಶ್ವಪ್ರಿಯ ಬಡಾವಣೆಯಲ್ಲಿ ನಿವೇಶನದಲ್ಲಿ ಕಸ ಬೇರ್ಪಡಿಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಜಾಗದ ಮಾಲೀಕರಿಗೆ ನೋಟಿಸ್‌ ನೀಡಿ ತೆರವು ಮಾಡಲು ತಿಳಿಸುತ್ತೇವೆ. ಶ್ರೀಧರ್‌, ಪಾಲಿಕೆ ಆರೋಗ್ಯ ಅಧಿಕಾರಿ, ಬೇಗೂರು ವಾರ್ಡ್‌