ಟಿಆರ್‌ಪಿ ಹಗರಣದ ಚಾರ್ಜ್‌ಶೀಟ್‌ನಲ್ಲಿ ಪತ್ರಕರ್ತ ಅರ್ನಬ್‌ ಹೆಸರು

ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಮಂಗಳವಾರ ಬರೋಬ್ಬರಿ 1800 ಪುಟಗಳ 2ನೇ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಲ್ಲಿ ರಿಪಬ್ಲಿಕ್‌ ಟಿವಿಯ ಅರ್ನಬ್‌ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ.

ಟಿಆರ್‌ಪಿ ಹಗರಣದ ಚಾರ್ಜ್‌ಶೀಟ್‌ನಲ್ಲಿ ಪತ್ರಕರ್ತ ಅರ್ನಬ್‌ ಹೆಸರು
Linkup
ಮುಂಬಯಿ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಎರಡನೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಬರೋಬ್ಬರಿ 1800 ಪುಟಗಳ ಎರಡನೇ ಚಾರ್ಜ್‌ಶೀಟ್‌ನಲ್ಲಿ ರಿಪಬ್ಲಿಕ್‌ ಟಿವಿಯ ಹಿರಿಯ ಪತ್ರಕರ್ತ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ. ಹಗರಣದ ಕುರಿತು ತನಿಖೆ ನಡೆಸುತ್ತಿರುವ ಕ್ರೈಂ ಬ್ರ್ಯಾಂಚ್‌ ಈ ದೋಷಾರೋಪ ಪಟ್ಟಿ ಸಲ್ಲಿಸಿದೆ. 'ಚಾರ್ಜ್‌ಶೀಟ್‌ನಲ್ಲಿ ಹಲವು ಆರೋಪಿಗಳ ಹೆಸರುಗಳಿದ್ದು, ಅರ್ನಬ್‌ ಗೋಸ್ವಾಮಿ ಹಾಗೂ ಎಆರ್‌ಜಿ ಔಟ್ಲಿಯರ್‌ ಸಂಸ್ಥೆಯ ಇನ್ನು ನಾಲ್ವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ,'' ಎಂದು ಅರ್ನಬ್‌ ಗೋಸ್ವಾಮಿ ಪರ ವಕೀಲರು ತಿಳಿಸಿದ್ದಾರೆ. ಎಆರ್‌ಜಿ ಔಟ್ಲಿಯರ್‌ ರಿಪಬ್ಲಿಕ್‌ ಟಿವಿಯ ಮೂಲ ಸಂಸ್ಥೆಯಾಗಿದೆ. ನಕಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೆಳಕಿಗೆ ಬಂದಿತ್ತು. 9 ತಿಂಗಳ ಹಿಂದೆ ನಡೆದ ಈ ಪ್ರಕರಣದಲ್ಲಿ ಕೆಲವು ಚಾನೆಲ್‌ಗಳು (ರಿಪಬ್ಲಿಕ್‌ ಟಿವಿ, ಬಾಕ್ಸ್‌ ಸಿನೆಮಾ, ಫಕ್ತ್‌ ಮರಾಠಿ) ಟಿಆರ್‌ಪಿ ಮಾಹಿತಿಯನ್ನು ತಿರುಚಿವೆ ಎಂದು ಆರೋಪಿಸಿದ್ದ 'ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್ ಕೌನ್ಸಿಲ್‌' (ಬಾರ್ಕ್) ಸಂಸ್ಥೆಯು ಎಚ್‌ಆರ್‌ಜಿ ಸಂಸ್ಥೆ ಮೂಲಕ ದೂರು ಸಲ್ಲಿಸಿತ್ತು.