ಹಠಾತ್ ಆಸ್ಪತ್ರೆಗೆ ದಾಖಲಾಗಿದ್ದ ರಚಿತಾ ರಾಮ್: ಡಿಂಪಲ್ ಕ್ವೀನ್‌ಗೆ ಏನಾಯ್ತು?

ತೀವ್ರ ಆಯಾಸದಿಂದ ಬಳಲುತ್ತಿದ್ದ ನಟಿ ರಚಿತಾ ರಾಮ್ ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದರು. ಶೀತ ಹಾಗೂ ಜ್ವರ ಕಾಡುತ್ತಿದ್ದರಿಂದ ಕೂಡಲೆ ಆಸ್ಪತ್ರೆಗೆ ನಟಿ ರಚಿತಾ ರಾಮ್ ಭೇಟಿ ನೀಡಿದ್ದರು. ಇದೀಗ ಕೊಂಚ ಸುಧಾರಿಸಿಕೊಂಡಿರುವ ನಟಿ ರಚಿತಾ ರಾಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಹಠಾತ್ ಆಸ್ಪತ್ರೆಗೆ ದಾಖಲಾಗಿದ್ದ ರಚಿತಾ ರಾಮ್: ಡಿಂಪಲ್ ಕ್ವೀನ್‌ಗೆ ಏನಾಯ್ತು?
Linkup
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ () ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಆಯಾಸದಿಂದ ಬಳಲುತ್ತಿದ್ದ ನಟಿ ರಚಿತಾ ರಾಮ್ ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದರು. ಶೀತ ಹಾಗೂ ಜ್ವರ ಕಾಡುತ್ತಿದ್ದರಿಂದ ಕೂಡಲೆ ಆಸ್ಪತ್ರೆಗೆ ನಟಿ ರಚಿತಾ ರಾಮ್ ಭೇಟಿ ನೀಡಿದ್ದರು. ಇದೀಗ ಕೊಂಚ ಸುಧಾರಿಸಿಕೊಂಡಿರುವ ನಟಿ ರಚಿತಾ ರಾಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಟಿ ರಚಿತಾ ರಾಮ್‌ಗೆ ಅನಾರೋಗ್ಯ ಸದ್ಯ ಕನ್ನಡ ಚಿತ್ರರಂಗದಲ್ಲಿನ ಟಾಪ್ ನಟಿಯರ ಪೈಕಿ ನಟಿ ರಚಿತಾ ರಾಮ್ ಕೂಡ ಒಬ್ಬರು. ನಟಿ ರಚಿತಾ ರಾಮ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆ ಇದೆ. ಚಂದನವನದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ರಚಿತಾ ರಾಮ್ ಕೂಡ ಒಬ್ಬರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ರಚಿತಾ ರಾಮ್‌ಗೆ ಕೆಲ ದಿನಗಳಿಂದ ತೀವ್ರ ಆಯಾಸ ಉಂಟಾಗುತ್ತಿದೆ. ಅದರಲ್ಲೂ, ಡಿಸೆಂಬರ್ ಆರಂಭದಿಂದಲೂ ರಚಿತಾ ರಾಮ್ ಶೆಡ್ಯೂಲ್ ತುಂಬಾ ಟೈಟ್ ಆಗಿತ್ತು. ಒಂದ್ಕಡೆ ‘ಏಕ್ ಲವ್ ಯಾ’, ಇನ್ನೊಂದ್ಕಡೆ ‘ಲವ್ ಯೂ ರಚ್ಚು’ ಪ್ರಚಾರ ಕಾರ್ಯಗಳಲ್ಲಿ ರಚಿತಾ ರಾಮ್ ಬಿಜಿಯಾಗಿದ್ದರು. ‘ಏಕ್ ಲವ್ ಯಾ’ ಪ್ರಮೋಷನ್ ನಿಮಿತ್ತ ಇತ್ತೀಚೆಗಷ್ಟೇ ಶಿವಮೊಗ್ಗಕ್ಕೂ ನಟಿ ರಚಿತಾ ರಾಮ್ ಭೇಟಿ ನೀಡಿದ್ದರು. ನಾನ್ ಸ್ಟಾಪ್ ಶೂಟಿಂಗ್ ಮತ್ತು ಪ್ರಮೋಷನ್ ಕಾರ್ಯಕ್ರಮಗಳಿಂದ ನಟಿ ರಚಿತಾ ರಾಮ್ ಅತಿಯಾದ ಒತ್ತಡಕ್ಕೆ ಒಳಗಾಗಿದ್ದರು. ಒಂದ್ಕಡೆ ಸ್ಟ್ರೆಸ್, ಇನ್ನೊಂದ್ಕಡೆ ಶೀತ ಹಾಗೂ ಜ್ವರ ಕೂಡ ರಚಿತಾ ರಾಮ್‌ಗೆ ಕಾಣಿಸಿಕೊಳ್ತು. ಹೀಗಾಗಿ, ಶಿವಮೊಗ್ಗದಿಂದ ವಾಪಸ್ ಬಂದ್ಮೇಲೆ ನಟಿ ರಚಿತಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ನಟಿ ರಚಿತಾ ರಾಮ್ ಇಂದು (ಡಿಸೆಂಬರ್ 28) ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಮನೆಯಲ್ಲಿ ರಚಿತಾ ರಾಮ್ ವಿಶ್ರಾಂತಿ ಪಡೆಯುತ್ತಿದ್ದಾರೆ. ರಚಿತಾ ರಾಮ್ ಕೈಯಲ್ಲಿವೆ ಸಾಲು ಸಾಲು ಚಿತ್ರಗಳು ಕನ್ನಡ ಚಿತ್ರರಂಗದ ಸದ್ಯದ ಬಿಜಿಯೆಸ್ಟ್ ನಟಿ ರಚಿತಾ ರಾಮ್. ರಮೇಶ್ ಅರವಿಂದ್, ರಚಿತಾ ರಾಮ್ ಅಭಿನಯದ ‘100’ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿತ್ತು. ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ ‘ಲವ್ ಯೂ ರಚ್ಚು’ ಸಿನಿಮಾ ಡಿಸೆಂಬರ್ 31 ರಂದು ಬಿಡುಗಡೆಯಾಗಲಿದೆ. ‘ಏಕ್ ಲವ್ ಯಾ’ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ. ಇದಲ್ಲದೆ, ರಚಿತಾ ರಾಮ್ ಕೈಯಲ್ಲಿ ‘ಮಾನ್ಸೂನ್ ರಾಗ’, ತೆಲುಗಿನ ‘ಸೂಪರ್ ಮಚ್ಚಿ’, ‘ವೀರಂ’, ‘ಲಿಲ್ಲಿ’, ‘ಮ್ಯಾಟ್ನಿ’, ‘ಏಪ್ರಿಲ್’, ‘ಬ್ಯಾಡ್ ಮ್ಯಾನರ್ಸ್’, ‘ಶಬರಿ.. ಸರ್ಚಿಂಗ್ ಫಾರ್ ರಾವಣ’, ‘ಲವ್ ಮಿ ಆರ್ ಹೇಟ್ ಮಿ’, ‘ರವಿ ಬೋಪಣ್ಣ’, ‘ಡಾಲಿ’, ‘ಪಂಕಜ ಕಸ್ತೂರಿ’, ‘ಕ್ರಾಂತಿ’, ‘ಗರಡಿ’ ಚಿತ್ರಗಳಿವೆ. ಈ ಪೈಕಿ ಕೆಲ ಸಿನಿಮಾಗಳ ಶೂಟಿಂಗ್‌ನಲ್ಲಿ ರಚಿತಾ ರಾಮ್ ತೊಡಗಿದ್ದರು.