ಅದಿತಿ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗ ಯಾರು? ರೈತನನ್ನು ಮದುವೆಯಾಗುತ್ತಿದ್ದಾರಾ ಅದಿತಿ?

ವರದಿಗಳ ಪ್ರಕಾರ, ನಟಿ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗನ ಹೆಸರು ಯಶಸ್. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಇದೀಗ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಅದಿತಿ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗ ಯಾರು? ರೈತನನ್ನು ಮದುವೆಯಾಗುತ್ತಿದ್ದಾರಾ ಅದಿತಿ?
Linkup
ಕನ್ನಡ ಚಿತ್ರರಂಗದಲ್ಲಿ ಸದ್ಯ ಮುಂಚೂಣಿಯಲ್ಲಿರುವ ನಾಯಕಿಯರ ಪೈಕಿ ಕೂಡ ಒಬ್ಬರು. ‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ರಂಗನಾಯಕಿ’, ‘ಬ್ರಹ್ಮಾಚಾರಿ’, ‘ಆನ’ ಮುಂತಾದ ಚಿತ್ರಗಳಲ್ಲಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಸದ್ಯ ಅದಿತಿ ಪ್ರಭುದೇವ ಕೈಯಲ್ಲಿ ‘ತೋತಾಪುರಿ’, ‘ಗಜಾನನ ಅಂಡ್ ಗ್ಯಾಂಗ್’, ‘ಓಲ್ಡ್ ಮಾಂಕ್’, ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’, ‘ಅಂದೊಂದಿತ್ತು ಕಾಲ’, ‘ಮಾಫಿಯಾ’ ಸೇರಿದಂತೆ ಸಾಕಷ್ಟು ಚಿತ್ರಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿರುವಾಗಲೇ ನಟಿ ಅದಿತಿ ಪ್ರಭುದೇವ ಹುಡುಗರಿಗೆಲ್ಲಾ ಹಾರ್ಟ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಸದ್ದಿಲ್ಲದೇ ನಟಿ ಅದಿತಿ ಪ್ರಭುದೇವ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಹೌದು.. ನಟಿ ಅದಿತಿ ಪ್ರಭುದೇವ ಅವರ ಎಂಗೇಜ್‌ಮೆಂಟ್ ನೆರವೇರಿದೆ. ತಾವು ಮಾಡಿಕೊಂಡಿರುವ ವಿಷಯವನ್ನು ಸ್ವತಃ ನಟಿ ಅದಿತಿ ಪ್ರಭುದೇವ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ‘’ಕನಸೊಂದು ಕನಸಿನಂತೆ ನನಸಾಯಿತು’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ನಟಿ ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ. ಜೊತೆಗೆ #engaged ಅಂತಲೂ ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ. ಹಾಗೇ, ತಮ್ಮ ಹುಡುಗನ ಕೈಹಿಡಿದುಕೊಂಡಿರುವ ಫೋಟೋವನ್ನೂ ನಟಿ ಅದಿತಿ ಪ್ರಭುದೇವ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ನಟಿ ಅದಿತಿ ಪ್ರಭುದೇವ ಅವರ ಕೈ ಬೆರಳಿನಲ್ಲಿರುವ ಉಂಗುರ ಹೈಲೈಟ್ ಆಗಿದೆ. ಇದನ್ನ ನೋಡಿದ ಅಭಿಮಾನಿಗಳು ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ನಟಿ ಅದಿತಿ ಪ್ರಭುದೇವ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಜಗಜ್ಜಾಹೀರಾಗಿದೆ. ಆದರೆ, ನಟಿ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗ ಯಾರು ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಹುಡುಗ ಯಾರು? ವರದಿಗಳ ಪ್ರಕಾರ, ನಟಿ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗನ ಹೆಸರು ಯಶಸ್. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಇದೀಗ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಅದಿತಿ ಪ್ರಭುದೇವ ಮದುವೆಯಾಗಲಿರುವ ಹುಡುಗ ಯಶಸ್ ಮೂಲತಃ ಚಿಕ್ಕಮಗಳೂರಿನವರು. ಯಶಸ್ ಕಾಫಿ ತೋಟದ ಮಾಲೀಕರೂ ಹೌದು. ರೈತರ ಕುಟುಂಬದಲ್ಲಿ ಬೆಳೆದಿರುವ ಯಶಸ್ ಅವರ ಜೊತೆ ಅದಿತಿ ಪ್ರಭುದೇವ ಸಪ್ತಪದಿ ತುಳಿಯಲಿದ್ದಾರೆ ಎಂದು ವರದಿಯಾಗಿದೆ. ಅಂದು ಅದಿತಿ ಪ್ರಭುದೇವ ಹೇಳಿದ್ದೇನು? ಕೆಲ ದಿನಗಳ ಹಿಂದಷ್ಟೇ 'ಏಕ್ ಲವ್ ಯಾ' ಸಿನಿಮಾದ ಇವೆಂಟ್‌ಗೆ ಅದಿತಿ ಪ್ರಭುದೇವ ಆಗಮಿಸಿದ್ದರು. ಅಂದು ‘ಏಕ್‌ ಲವ್ ಯಾ’ ಸಿನಿಮಾದ ಹುಡುಗಿಯರ ಲವ್ ಬ್ರೇಕಪ್‌ ಸಾಂಗ್ ರಿಲೀಸ್ ಆಗಿತ್ತು. 'ಹುಡುಗರಿಗೆ ಬೇಕಿರುವ ಥರ ಲವ್ ಬ್ರೇಕ್‌ಅಪ್‌ ಸಾಂಗ್ ಹುಡುಗಿಯರಿಗೆ ಬೇಕಾಗಿಲ್ಲ. ಬಾಯಿ ಮುಚ್ಚಿಕೊಂಡೇ ಎಲ್ಲವನ್ನೂ ಫೀಲ್ ಮಾಡ್ತಿವಿ. ಅದರಲ್ಲಿ ಈ ಬಾರಿಗೆ ಹುಡುಗಿಯರಿಗೆಂದೇ ಒಂದು ಸಾಂಗ್ ಕೂಡ ಕೊಟ್ಟಿದ್ದಾರೆ ಪ್ರೇಮ್ ಸಾರ್. ಅವರೆಂದರೆ ಯಾವಾಗಲೂ ವಿಶೇಷತೆ. ಇನ್ನು, ನಾನು ಲವ್ವೇ ಮಾಡಿಲ್ಲ. ಇನ್ನೂ ಬ್ರೇಕ್ ಎಲ್ಲಿಂದ ಆಗತ್ತೆ? ನಾನು ಲವ್ವೆಲ್ಲ ಮಾಡಲ್ಲ, ಡೈರೆಕ್ಟ್ ಆಗಿ ಆಗ್ತೀನಿ. ನನಗೆ ಪ್ರೀತಿ ಮೇಲೆ ನಂಬಿಕೆ ಆದರೆ. ಲವ್ ಮ್ಯಾರೇಜ್ ಅಲ್ಲಿ ನಂಬಿಕೆ ಇಲ್ಲ' ಎಂದು ಅದಿತಿ ಪ್ರಭುದೇವ ಹೇಳಿದ್ದರು.