ಹೋಟೆಲ್ ಮಾಲೀಕ ಸಂದೇಶ್ ಬಳಿ ಬೇಸರ ಹೊರಹಾಕಿದ ನಟ 'ಚಾಲೆಂಜಿಂಗ್ ಸ್ಟಾರ್' ದರ್ಶನ್!

'ಚಾಲೆಂಜಿಂಗ್ ಸ್ಟಾರ್' ನಟ ದರ್ಶನ್ ಅವರು ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು. ಅದಕ್ಕೆ ಹೋಟೆಲ್ ಮಾಲೀಕ ಪ್ರತಿಕ್ರಿಯೆ ನೀಡಿದ್ದು, ನಟ ದರ್ಶನ್ ಕೂಡ ಉತ್ತರ ಕೊಡಲಿದ್ದಾರಂತೆ.

ಹೋಟೆಲ್ ಮಾಲೀಕ ಸಂದೇಶ್ ಬಳಿ ಬೇಸರ ಹೊರಹಾಕಿದ ನಟ 'ಚಾಲೆಂಜಿಂಗ್ ಸ್ಟಾರ್' ದರ್ಶನ್!
Linkup
ನಟ 'ಚಾಲೆಂಜಿಂಗ್ ಸ್ಟಾರ್' ಅವರು ಕಳೆದ ಜೂನ್ ತಿಂಗಳಿನಲ್ಲಿ ಮೈಸೂರಿನ ಹೋಟೆಲ್‌ನಲ್ಲಿ ಗೋಪಾಲ್ ರಾಜ್ ಪಪ್ಪು ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ, ತೋಟದ ಮನೆಯ ವಾಚ್‌ಮ್ಯಾನ್‌ಗೆ ಹೊಡೆದಿದ್ದಾರೆ, ಗಂಗಾಧರ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತ್ರಕರ್ತ / ನಿರ್ದೇಶಕ ಆರೋಪ ಮಾಡಿದ್ದರು. ಈ ಆರೋಪಕ್ಕೆ ಹೋಟೆಲ್ ಮಾಲೀಕ ಸಂದೇಶ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇವೆಲ್ಲವುಗಳ ನಂತರದಲ್ಲಿ ದರ್ಶನ್ ಏನು ಹೇಳ್ತಾರೆ? ಎಂಬ ಪ್ರಶ್ನೆ ಎದ್ದಿದೆ. ನಾಳೆ ಆಷಾಢ ಮಾಸದ ಶುಕ್ರವಾರವಿದ್ದು ನಟ ದರ್ಶನ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ. ಹೀಗಾಗಿ ಅವರು ಇಂದು ಸಂಜೆಯೇ ಹಳದಿ ಬಣ್ಣದ ಅವರ ಲ್ಯಾಂಬೋರ್ಗಿನಿ ಕಾರ್‌ನಲ್ಲಿ ಮೈಸೂರು ತಲುಪಿದ್ದಾರೆ. ಅಷ್ಟೇ ಅಲ್ಲದೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ತಂಗಿದ್ದಾರೆ. ದರ್ಶನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ ಎಂದು ಸಂದೇಶ್ ಮಾಧ್ಯಮದವರಿಗೆ ಹೇಳಿದ್ದರು. ಅದರಂತೆ ಮಾಧ್ಯಮದವರು ಹೋಟೆಲ್ ಮುಂದೆ ಕಾದಿದ್ದಾರೆ. ಆದರೆ ದರ್ಶನ್ ನಾಳೆ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಂದೇಶ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, "ದರ್ಶನ್ ಈಗ ತಾನೇ ಹೋಟೆಲ್‌ಗೆ ಬಂದು ಕಾಫಿ ಕುಡಿದಿದ್ದಾರೆ. ನಾವಿಬ್ಬರೂ ಚೆನ್ನಾಗಿದ್ದೇವೆ. ನಾಳೆ ಅವರು ಮಾಧ್ಯಮದ ಜೊತೆ ಮಾತನಾಡುತ್ತಾರೆ. 25 ಕೋಟಿ ರೂಪಾಯಿ ವಿಚಾರದಲ್ಲಿ ನನಗೆ ತೊಂದರೆಯಾಗಿದೆ, ಅದರ ಕುರಿತು ಎಲ್ಲರೂ ಮಾತನಾಡೋದು ಬಿಟ್ಟು ಈಗ ಈ ವಿಷಯ ಹಿಡಿದುಕೊಂಡಿದ್ದಾರೆ ಅಂತ ದರ್ಶನ್ ಬೇಸರ ಮಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ. ದರ್ಶನ್ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಸಂದೇಶ್ ಹಾಗೂ ದರ್ಶನ್ ನಡುವೆ ಜಗಳ ನಡೆದಿದೆ. ಆನಂತರ ಒಂದು ತಿಂಗಳಿನಿಂದ ದರ್ಶನ್ ಮೈಸೂರಿನ ಆ ಹೋಟೆಲ್‌ಗೆ ಹೋಗಿಲ್ಲ ಅಂತ ಇಂದ್ರಜಿತ್ ಹೇಳಿದ್ದರು. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಂದೇಶ್ ಕೊರೊನಾ ಕಾರಣದಿಂದ ದರ್ಶನ್ ಎರಡು ತಿಂಗಳಿನಿಂದ ನಮ್ಮ ಹೋಟೆಲ್‌ಗೆ ಬಂದಿಲ್ಲ, ತೋಟದ ಮನೆಯಲ್ಲಿ ಇದ್ದರು ಎಂದು ಹೇಳಿಕೆ ನೀಡಿದ್ದರು.