ಷೇರು ಮಾರುಕಟ್ಟೆ ಆರಂಭಕ್ಕೂ ಮುನ್ನ ಗಮನಿಸಬೇಕಾದ 10 ಸಂಗತಿಗಳು

ಏಷಿಯಾದ ಮಾರುಕಟ್ಟೆಗಳು ಮಂಗಳವಾರ ಏರಿಕೆ ಕಾಣುವ ಎಲ್ಲಾ ಸಾಧ್ಯತೆ ಇದೆ. ಇಂದು ಮಹಿಳೆಯರ ಬಾಟಮ್‌ ವೇರ್‌ ಬ್ರ್ಯಾಂಡ್‌ ಗೋ ಕಲರ್ಸ್‌ನ ಮಾತೃ ಸಂಸ್ಥೆ ಗೋ ಫ್ಯಾಷನ್‌ ಶೇ. 65-70ರಷ್ಟು ಪ್ರೀಮಿಯ ದರದೊಂದಿಗೆ ಷೇರು ಮಾರುಕಟ್ಟೆ ಕೂಡ ಪ್ರವೇಶಿಸುತ್ತಿದೆ.

ಷೇರು ಮಾರುಕಟ್ಟೆ ಆರಂಭಕ್ಕೂ ಮುನ್ನ ಗಮನಿಸಬೇಕಾದ 10 ಸಂಗತಿಗಳು
Linkup
ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಎಚ್ಚರಿಕೆಯಿಂದ ಆರಂಭವಾಗುವ ನಿರೀಕ್ಷೆ ಇದೆ. ಎಸ್‌ಜಿಎಕ್ಸ್‌ ನಿಫ್ಟಿ ಸೂಚ್ಯಂಕ ಸೋಮವಾರ ಕೇವಲ 18 ಅಂಕ ಗಳಿಕೆ ದಾಖಲಿಸಿರುವುದರಿಂದ ಮಂಗಳವಾರ ಯಾವುದೇ ಏರಿಳಿತ ಕಾಣದೇ ಅಥವಾ ಸ್ವಲ್ಪ ಮಟ್ಟಿಗೆ ಏರಿಕೆ ಕಾಣುವ ಸಾಧ್ಯತೆ ಇದೆ. ನವೆಂಬರ್‌ 29ರಂದು ಸೆನ್ಸೆಕ್ಸ್‌ 153.43 ಅಂಕಗಳ ಏರಿಕೆಯೊಂದಿಗೆ 57,260.58 ಅಂಕಗಳಿಗೆ ದಿನದಂತ್ಯಕ್ಕೆ ಸ್ಥಿರವಾಗಿತ್ತು. ನಿಫ್ಟಿ50 ಸೂಚ್ಯಂಕ 27.50 ಅಂಕಗಳ ಗಳಿಕೆಯೊಂದಿಗೆ 17,054 ಅಂಕಗಳಿಗೆ ದಿನದ ವಹಿವಾಟು ಕೊನೆಗೊಳಿಸಿತ್ತು. ಅಮೆರಿಕ ಮಾರುಕಟ್ಟೆ ಅಮೆರಿಕದ ವಾಲ್‌ಸ್ಟ್ರೀಟ್‌ ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ಗಳಿಕೆ ದಾಖಲಿಸಿದ್ದು, ಶುಕ್ರವಾರ ಕಳೆದುಕೊಂಡ ಒಂದಿಷ್ಟು ಅಂಕಗಳನ್ನು ಮರಳಿ ಪಡೆದುಕೊಂಡಿದೆ. ಅಧ್ಯಕ್ಷ ಜೋ ಬೈಡನ್‌ ಭರವಸೆ ಬಳಿಕ ಕೊರೊನಾದ ಹೊಸ ರೂಪಾಂತರಿ ‘ಒಮಿಕ್ರಾನ್‌’ನಿಂದ ದೇಶದಲ್ಲಿ ಲಾಕ್‌ಡೌನ್‌ ಆಗಲಿಕ್ಕಿಲ್ಲ ಎಂಬ ವಿಶ್ವಾಸ ಹೂಡಿಕೆದಾರರಲ್ಲಿ ಮೂಡಿದ್ದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಡೌ ಜೋನ್ಸ್‌ ಇಂಡಸ್ಟ್ರಿಯಲ್‌ ಎವರೇಜ್‌ 236.6 ಅಂಕ ಏರಿಕೆ ಕಂಡು 35,135.94 ಅಂಕಗಳಿಗೆ ಏರಿಕೆ ಕಂಡಿದೆ. ಎಸ್‌&ಪಿ 500 ಸೂಚ್ಯಂಕ 60.65 ಅಂಕ ಮೇಲೇರಿ 4,655.27 ಅಂಕ ತಲುಪಿದೆ. ನಾಸ್ದಾಕ್‌ ಕಾಂಪೋಸಿಟ್‌ 291.18 ಅಂಕ ಮೇಲೇರಿ 15,782.83ಕ್ಕೆ ಮುಟ್ಟಿದೆ. ಏಷಿಯಾದ ಮಾರುಕಟ್ಟೆಗಳು ಏಷಿಯಾದ ಮಾರುಕಟ್ಟೆಗಳು ಮಂಗಳವಾರ ಏರಿಕೆ ಕಾಣುವ ಎಲ್ಲಾ ಸಾಧ್ಯತೆ ಇದೆ. ಚೀನಾದ ನವೆಂಬರ್‌ನ ಕೈಗಾರಿಕಾ ಚಟುವಟಿಕೆ ದತ್ತಾಂಶಗಳು ಬಿಡುಗಡೆಯಾದ ಬಳಿಕ ಜಪಾನ್‌ನ ಷೇರು ಮಾರುಕಟ್ಟೆಗಳು ಏರಿಕೆ ಕಂಡಿವೆ. ಜಪಾನ್‌ನ ನಿಕ್ಕಿ ಸೂಚ್ಯಂಕ ಸೋಮವಾರ 225 ಅಂಕಗಳ ಗಳಿಕೆ ದಾಖಲಿಸಿದೆ. ಎಸ್‌ಜಿಎಕ್ಸ್‌ ನಿಫ್ಟಿ ಸಿಂಗಾಪುರಿಯನ್‌ ಎಕ್ಸ್‌ಚೇಂಜ್‌ನಲ್ಲಿ ನಿಫ್ಟಿ ಫ್ಯೂಚರ್‌ಗಳು 17,108 ಅಂಕಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿವೆ. ನಿನ್ನೆ 18 ಅಂಕ ಗಳಿಕೆ ದಾಖಲಿಸಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ನಿಫ್ಟಿ ಏರಿಳಿತ ಕಾಣದೆ ಅಥವಾ ಸ್ವಲ್ಪ ಮಟ್ಟಿಗೆ ಮಂಗಳವಾರ ಏರಿಕೆ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಮುಖ ರೇಟಿಂಗ್ ಏಜೆನ್ಸಿ ಇಂಡಿಯಾ ರೇಟಿಂಗ್ಸ್ ಆರ್ಥಿಕತೆಯು ಎರಡನೇ ತ್ರೈಮಾಸಿದಲ್ಲಿ (Q2) ಶೇ. 8.3ರ ದರದಲ್ಲಿ ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 9.4 ಇರಬಹುದು ಎಂದು ಅಂದಾಜಿಸಿದೆ. ಏಜೆನ್ಸಿಯು ಸತತ ಒಂಬತ್ತು ತ್ರೈಮಾಸಿಕಗಳಿಂದ ಶೇ. 3ಕ್ಕಿಂತ ಹೆಚ್ಚಿನ ಬೆಳವಣಿಗೆ ಕಾಣುತ್ತಿರುವ ಕೃಷಿ ವಲಯ ಗ್ರಾಹಕರು ಖರ್ಚು ಮಾಡುವುದನ್ನು ಹೆಚ್ಚಿಸಿದೆ. ಪರಿಣಾಮ ಖಾಸಗಿ ಬಳಕೆಯ ವೆಚ್ಚದಲ್ಲಿ ಹೆಚ್ಚಳವಾಗಿದೆ, ಇದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 10 ರಷ್ಟಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಇನ್ನೊಂದು ಕಡೆ ಮೊದಲ ತ್ರೈಮಾಸಿಕದಿಂದ ಎರಡನೇ ತ್ರೈಮಾಸಿಕದ ಹೊತ್ತಿಗೆ ಲಸಿಕೆ ಅಭಿಯಾನ ತೀವ್ರ ವೇಗ ಪಡೆದುಕೊಂಡಿದೆ. ಜೂನ್‌ ಅಂತ್ಯದಲ್ಲಿ ದೇಶದಲ್ಲಿ ನೀಡಲಾದ ಲಸಿಕೆ ಡೋಸ್‌ಗಳ ಸಂಖ್ಯೆ 33.57 ಕೋಟಿ ಇತ್ತು. ಅದು ಅಕ್ಟೋಬರ್‌ ಅಂತ್ಯಕ್ಕೆ 89.02 ಕೋಟಿಗೆ ಏರಿಕೆಯಾಗಿತ್ತು. ಮತ್ತೆ ಕಚ್ಚಾ ತೈಲ ದರ ಏರಿಕೆ ಸೋಮವಾರ ಮತ್ತೆ ಕಚ್ಚಾ ತೈಲ ದರಗಳು ಏರಿಕೆ ಕಂಡಿವೆ. ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್‌+ ಜನವರಿಯಿಂದ ಹೆಚ್ಚುವರಿ ತೈಲ ಉತ್ಪಾದನೆ ಆರಂಭಿಸದೇ ಇರಬಹುದು ಎಂಬ ಆತಂಕ ಹುಟ್ಟಿಕೊಂಡಿದ್ದು, ಇದಕ್ಕೆ ಕಾರಣವಾಗಿದೆ. ಈ ಮೂಲಕ ಕಳೆದ ವಾರ ಕುಸಿತ ಕಂಡಿದ್ದ ದರ ಈ ವಾರ ಏರಿಕೆ ಕಾಣುತ್ತಿದೆ. ಡಬ್ಲ್ಯೂಟಿಐ ಮಾದರಿಯ ಕಚ್ಚಾ ತೈಲ ದರ 99 ಸೆಂಟ್‌ ಏರಿಕೆಯಾಗಿದ್ದು ಬ್ಯಾರಲ್‌ಗೆ 70.94 ಡಾಲರ್‌ಗೆ ಏರಿಕೆಯಾಗಿದೆ. ಬ್ರೆಂಟ್‌ ಮಾದರಿಯ ಕಚ್ಚಾ ತೈಲ ದರದಲ್ಲಿ 82 ಸೆಂಟ್‌ ಏರಿಕೆ ಕಂಡಿದ್ದು ಬ್ಯಾರಲ್‌ಗೆ 74.26 ಡಾಲರ್‌ಗೆ ಹೆಚ್ಚಳವಾಗಿದೆ. ಜಾಗತಿಕ ಆರ್ಥಿಕತೆಯ ಮೇಲೆ ಒಮಿಕ್ರಾನ್‌ ಆತಂಕ, ಮೂಡೀಸ್‌ ವಿಶ್ಲೇಷಣೆ ಒಮಿಕ್ರಾನ್‌ನಿಂದಾಗಿ ಜಾಗತಿಕ ಆರ್ಥಿಕ ದೃಷ್ಟಿಕೋನದ ಮೇಲೆ ಅನಿಶ್ಚಿತತೆಗಳು ಮನೆ ಮಾಡಿವೆ ಎಂದು ಮೂಡೀಸ್‌ ಅನಾಲಿಟಿಕ್ಸ್‌ ಹೇಳಿದ್ದು, ಇದರ ಪ್ರಸರಣ ವೇಗ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ, ಸಾವಿನ ದರಗಳು ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ. ಒಮಿಕ್ರಾನ್‌ ವೇಗವಾಗಿ ಹರಡುತ್ತಿದೆಯಾದರೂ ಇದರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ಇನ್ನೂ ಎರಡು ವಾರ ಬೇಕು ಎಂದು ಅದು ಹೇಳಿದೆ. ಎಆರ್‌ಎಸ್‌ಎಸ್‌ ಇನ್ಫ್ರಾಸ್ಟ್ರಕ್ಚರ್‌ ಸೇರಿ 6 ಜನರನ್ನು ಮಾರುಕಟ್ಟೆಯಿಂದ ನಿಷೇಧಿಸಿದ ಸೆಬಿ ಎಆರ್‌ಎಸ್‌ಎಸ್‌ ಇನ್ಫ್ರಾಸ್ಟ್ರಕ್ಚರ್‌ ಪ್ರಾಜೆಕ್ಟ್ಸ್‌ ಲಿ. ಮತ್ತು ಆರು ವ್ಯಕ್ತಿಗಳನ್ನು ಬಂಡವಾಳ ಮಾರುಕಟ್ಟೆಯಿಂದ ಒಂದು ವರ್ಷಗಳ ಕಾಲ ಸೆಬಿ ನಿಷೇಧಿಸಿದೆ. ಜತೆಗೆ 47.5 ಲಕ್ಷ ದಂಡ ಕೂಡ ವಿಧಿಸಿದೆ. ಕಂಪನಿಯ ಹಣಕಾಸಿನ ಬಗ್ಗೆ ತಪ್ಪುಲೆಕ್ಕ ನೀಡಿದ್ದಕ್ಕೆ ಈ ಶಿಕ್ಷೆ ವಿಧಿಸಿದೆ. ಆರು ವ್ಯಕ್ತಿಗಳಲ್ಲಿ ಕಂಪನಿಯ ನಿರ್ದೇಶಕರು, ಸಿಇಒ, ಸಿಐಒ ಸೇರಿದ್ದಾರೆ. ಇಂದು ಗೋ ಫ್ಯಾಷನ್‌ ಷೇರು ಜರ್ನಿ ಆರಂಭ ಮಹಿಳೆಯರ ಬಾಟಮ್‌ ವೇರ್‌ ಬ್ರ್ಯಾಂಡ್‌ ಗೋ ಕಲರ್ಸ್‌ನ ಮಾತೃ ಸಂಸ್ಥೆ ಗೋ ಫ್ಯಾಷನ್‌ ಶೇ. 65-70ರಷ್ಟು ಪ್ರೀಮಿಯ ದರದೊಂದಿಗೆ ಇಂದು ಷೇರು ಮಾರುಕಟ್ಟೆ ಪ್ರವೇಶಿಸಲಿದೆ. ಗ್ರೇ ಮಾರ್ಕೆಟ್‌ನಲ್ಲಿ ಕಂಪನಿಯ ಷೇರುಗಳು ಶೇ. 65-75ರಷ್ಟು ಪ್ರೀಮಿಯಂ ದರದಲ್ಲಿ ಲಭ್ಯವಿದೆ. ಈ ಮೂಲಕ ಆರಂಭಿಕ ಕೊಡುಗೆ ಬೆಲೆ (ಐಪಿಒ) 690 ರೂ.ನಿಂದ ಷೇರು ಬೆಲೆ 1,140 - 1,210ರ ಸುಮಾರಿಗೆ ಏರಿಕೆ ಕಂಡಿದೆ. ಎಫ್‌ಐಐ ಮತ್ತು ಡಿಐಐ ಡಾಟಾ ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,332.21 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ವೇಳೆ ದೇಶಿ ಸಾಂಸ್ಥಿಕ ಹೂಡಿಕೆದಾರರು 4,611.41 ಕೋಟಿ ರೂ. ಮೊತ್ತದ ಷೇರುಗಳನ್ನು ಖರೀದಿಸಿರುವುದು ಡಾಟಾದಿಂದ ತಿಳಿದು ಬಂದಿದೆ. ಎನ್‌ಎಸ್‌ಇನಲ್ಲಿ ಎಫ್‌&ಒ ಅಡಿಯಲ್ಲಿ ನಿಷೇಧ ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಎಫ್‌&ಒ ಅಡಿಯಲ್ಲಿ ನವೆಂಬರ್‌ 30 ರಂದು ನಿಷೇಧಕ್ಕೆ ಒಳಗಾಗಿದೆ.