ಭಾರತದಲ್ಲಿ ಸೆಪ್ಟೆಂಬರ್‌ 30ರವರೆಗೆ 7.73 ಲಕ್ಷಕ್ಕೂ ಹೆಚ್ಚು ಕಂಪನಿಗಳು ಸ್ಥಗಿತ!

ದೇಶದಲ್ಲಿ ಕಳೆದ ಸೆಪ್ಟೆಂಬರ್‌ 30ರ ವೇಳೆಗೆ 7.73 ಲಕ್ಷಕ್ಕೂ ಹೆಚ್ಚು ಕಂಪನಿಗಳು ಸ್ಥಗಿತವಾಗಿವೆ ಎಂಬ ಆಘಾತಕಾರಿ ಅಂಶವನ್ನು ಸರಕಾರದ ಅಂಕಿ ಅಂಶಗಳು ಬಹಿರಂಗ ಪಡಿಸಿವೆ. ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಮಾಹಿತಿ ಈ ಕುರಿತು ಬೆಳಕು ಚೆಲ್ಲಿದೆ.

ಭಾರತದಲ್ಲಿ ಸೆಪ್ಟೆಂಬರ್‌ 30ರವರೆಗೆ 7.73 ಲಕ್ಷಕ್ಕೂ ಹೆಚ್ಚು ಕಂಪನಿಗಳು ಸ್ಥಗಿತ!
Linkup
ಹೊಸದಿಲ್ಲಿ: ದೇಶದಲ್ಲಿ ಕಳೆದ ಸೆಪ್ಟೆಂಬರ್‌ 30ರ ವೇಳೆಗೆ 7.73 ಲಕ್ಷಕ್ಕೂ ಹೆಚ್ಚು ಕಂಪನಿಗಳು ಸ್ಥಗಿತವಾಗಿವೆ ಎಂಬ ಆಘಾತಕಾರಿ ಅಂಶವನ್ನು ಸರಕಾರದ ಅಂಕಿ ಅಂಶಗಳು ಬಹಿರಂಗ ಪಡಿಸಿವೆ. ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, 2021ರ ಸೆಪ್ಟೆಂಬರ 30ರ ವೇಳೆಗೆ ಒಟ್ಟು 22,32,699 ಕಂಪನಿಗಳು ನೋಂದಣಿಯಾಗಿತ್ತು. ಈ ಪೈಕಿ 7,73,070 ಕಂಪನಿಗಳು ಮುಚ್ಚಿವೆ. 2,298 ಕಂಪನಿಗಳು ತಾತ್ಕಾಲಿಕವಾಗಿ ನಿಷ್ಕ್ರಿಯವಾಗಿವೆ. 6,944 ಕಂಪನಿಗಳು ಮಾರಾಟ ಅಥವಾ ಹರಾಜಿನ ಮೂಲಕ ನಗದೀಕರಣದ ಪ್ರಕ್ರಿಯೆಯಲ್ಲಿವೆ. 36,110 ರದ್ದಾಗುವ ಹಂತದಲ್ಲಿದೆ. ಹೊಸ ಕಂಪನಿಗಳು 17,000: ಈ 2021ರ ಸೆಪ್ಟೆಂಬರ್‌ನಲ್ಲಿ 17,000 ಹೊಸ ಕಂಪನಿಗಳು ನೋಂದಣಿಯಾಗಿದೆ. ಇದರೊಂದಿಗೆ ಒಟ್ಟು ಸಕ್ರಿಯ ಕಂಪನಿಗಳ ಸಂಖ್ಯೆ 14.1 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕಾಪೊರ್‍ರೇಟ್‌ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 2021ರ ಸೆಪ್ಟೆಂಬರ್‌ ವೇಳೆಗೆ 4535 ಎಲ್‌ಎಲ್‌ಪಿಗಳು ನೋಂದಣಿಯಾಗಿವೆ. 2020ರ ಏಪ್ರಿಲ್‌ನಲ್ಲಿ ಹೊಸ ಕಂಪನಿಗಳ ಮಾಸಿಕ ನೋಂದಣಿ 3,209ಕ್ಕೆ ಕುಸಿದಿತ್ತು. ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ಪ್ರಕಾರ, ಅಕ್ಟೋಬರ್‌ ವೇಳೆಗೆ ನಿರುದ್ಯೋಗದ ಪ್ರಮಾಣ ಶೇ.7.8ರ ಮಟ್ಟದಲ್ಲಿದೆ.