ರಿಲೀಸ್ ಆದ ಒಂದೇ ವಾರಕ್ಕೆ 'ಕೃಷ್ಣ ಟಾಕೀಸ್' ಪ್ರದರ್ಶನ ನಿಲ್ಲಿಸಲು ಚಿತ್ರತಂಡ ತೀರ್ಮಾನ! ಕಾರಣವೇನು?

ಕೊರೊನಾ ಸಂಕಷ್ಟದ ಮಧ್ಯೆಯೂ ಅಜಯ್ ರಾವ್, ಅಪೂರ್ವಾ, ಸಿಂಧೂ ಲೋಕನಾಥ್ ಅಭಿನಯದ 'ಕೃಷ್ಣ ಟಾಕೀಸ್‌' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಆದರೆ, ಈಗ ಸಿನಿಮಾ ಪ್ರದರ್ಶನವನ್ನೇ ನಿಲ್ಲಿಸಲು ಚಿತ್ರತಂಡ ನಿರ್ಧಾರ ಮಾಡಿದೆ.

ರಿಲೀಸ್ ಆದ ಒಂದೇ ವಾರಕ್ಕೆ 'ಕೃಷ್ಣ ಟಾಕೀಸ್' ಪ್ರದರ್ಶನ ನಿಲ್ಲಿಸಲು ಚಿತ್ರತಂಡ ತೀರ್ಮಾನ! ಕಾರಣವೇನು?
Linkup
ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ರಾಜ್ಯಾದ್ಯಂತ ಕೊರೊನಾನಿಂದಾಗಿ ಮತ್ತೆ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಶೇ.50 ಆಸನ ಭರ್ತಿಗೆ ಮಾತ್ರ ಸರ್ಕಾರ ಆದೇಶ ನೀಡಿದೆ. ಈ ಮಧ್ಯೆ ಕೊರೊನಾದಿಂದಾಗಿ ಮತ್ತೆ ಕರಾಳ ದಿನಗಳು ಎದುರಾಗುವ ಸೂಚನೆ ಸಿಗುತ್ತಿದೆ. ಮೂರು ದಿನಗಳ ಹಿಂದೆ (ಏ.16) ರಿಲೀಸ್ ಆಗಿದ್ದ ನಟನೆಯ 'ಕೃಷ್ಣ ಟಾಕೀಸ್‌' ಸಿನಿಮಾದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ. ವಿಜಯಾನಂದ್ ನಿರ್ದೇಶನದ‌ '' ಚಿತ್ರಕ್ಕೆ ಒಳ್ಳೆಯ ಆರಂಭ ಸಿಕ್ಕಿತ್ತು. ಜೊತೆಗೆ ನೋಡಿದವರಿಂದಲೂ ಉತ್ತಮ ವಿಮರ್ಶೆಯನ್ನು ಪಡೆದುಕೊಂಡಿತ್ತು. ಆದರೆ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ. 'ಸರ್ಕಾರ ಕೂಡ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡುವ ಸಾಧ್ಯತೆಯಿದೆ.‌ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುವುದು ನೋಡೋಣ. ಎಲ್ಲಕ್ಕಿಂತ ಆರೋಗ್ಯವೇ ಮುಖ್ಯ ಎಂಬ ಉದ್ದೇಶದಿಂದ ಏಪ್ರಿಲ್ 22ರವರೆಗೂ ಮಾತ್ರ ಚಿತ್ರವನ್ನು ಪ್ರದರ್ಶಿಸಿ, ನಂತರ ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ' ಎಂದು ಚಿತ್ರದ ನಿರ್ಮಾಪಕ ಗೋವಿಂದರಾಜು ತಿಳಿಸಿದ್ದಾರೆ. 'ಒಂದು ವೇಳೆ ನಾಳೆಯಿಂದಲೇ ಚಿತ್ರಮಂದಿರ ಮುಚ್ಚಬೇಕು ಎಂದು ಸರ್ಕಾರ ಆದೇಶ ನೀಡಿದರೆ, ಅದಕ್ಕೂ ನಾವು ಬದ್ಧ ಇದ್ದೇವೆ. ಕೂಡಲೇ ಸಿನಿಮಾ ಪ್ರದರ್ಶನ ನಿಲ್ಲಿಸಲಿದ್ದೇವೆ. ಈ ಎಲ್ಲ ಸಮಸ್ಯೆಗಳು ಬಗೆಹರಿದ ಮೇಲೆ ಮತ್ತೆ 'ಕೃಷ್ಣ ಟಾಕೀಸ್' ಬಿಡುಗಡೆ ಮಾಡಲಿದ್ದೇವೆ' ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್. ಹಾರರ್‌ ಥ್ರಿಲ್ಲರ್ ಮಾದರಿಯ ಈ ಸಿನಿಮಾದಲ್ಲಿ ನಾಯಕಿಯಾಗಿ ಅಪೂರ್ವಾ ನಟಿಸಿದ್ದರು. ಸಿಂಧೂ ಲೋಕನಾಥ್ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ಚಿಕ್ಕಣ್ಣ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.