ಯುಪಿ ಎಲೆಕ್ಷನ್ ಹೊಸ್ತಿಲಲ್ಲೇ ಕಾಂಗ್ರೆಸ್‌ಗೆ 'ಕೈ'ಕೊಟ್ಟು ಬಿಜೆಪಿ ಸೇರಿದ ಬ್ರಾಹ್ಮಣ ನಾಯಕ ಜಿತಿನ್ ಪ್ರಸಾದ್

ಕೊರೊನಾ ನಿರ್ವಹಣಾ ವೈಫಲ್ಯ ಆರೋಪ ಹೊತ್ತು ನಲುಗಿರುವ ಯೋಗಿ ಆದಿತ್ಯನಾಥ್ ಸಾರಥ್ಯದ ಉತ್ತರ ಪ್ರದೇಶ ಸರ್ಕಾರ, ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸುವ ಭೀತಿಯಲ್ಲಿತ್ತು. ಆದ್ರೆ, ಇದೀಗ ಯುಪಿ ಬಿಜೆಪಿಗೆ ಬಲ ಸಿಕ್ಕಂತಾಗಿದೆ.

ಯುಪಿ ಎಲೆಕ್ಷನ್ ಹೊಸ್ತಿಲಲ್ಲೇ ಕಾಂಗ್ರೆಸ್‌ಗೆ 'ಕೈ'ಕೊಟ್ಟು ಬಿಜೆಪಿ ಸೇರಿದ ಬ್ರಾಹ್ಮಣ ನಾಯಕ ಜಿತಿನ್ ಪ್ರಸಾದ್
Linkup
: ಚುನಾವಣೆಗೆ 1 ವರ್ಷ ಬಾಕಿ ಉಳಿದಿರುವಾಗಲೇ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಿದ್ದತೆ ಆರಂಭಿಸಿರುವ ಬಿಜೆಪಿಗೆ 'ನಿರೀಕ್ಷಿತ' ಉಡುಗೊರೆಯೊಂದು ಸಿಕ್ಕಿದೆ. ಈ 'ಗಿಫ್ಟ್‌'ನ ಹೆಸರು, ..! ಹೌದು.. ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ, ಬ್ರಾಹ್ಮಣ ಸಮುದಾಯದ ಜಿತಿನ್ ಪ್ರಸಾದ್, ಇದೀಗ ‘ಕೈ’ ಕೊಟ್ಟು ಕಮಲ ಹಿಡಿದಿದ್ದಾರೆ. 47 ವರ್ಷ ವಯಸ್ಸಿನ ಪ್ರಸಾದ್, ಹಿರಿಯ ಕಾಂಗ್ರೆಸ್ ನಾಯಕರು, ಮಾಜಿ ಕೇಂದ್ರ ಸಚಿವರೂ ಕೂಡಾ.. ಇದೀಗ ಅವರು ಸೇರ್ಪಡೆಗೊಂಡಿರೋದು, ಉತ್ತರ ಪ್ರದೇಶದಲ್ಲಿ ಸಹಜವಾಗಿಯೇ ಬಿಜೆಪಿ ಬಲವನ್ನು ಹೆಚ್ಚಿಸಿದೆ. ಕೊರೊನಾ ನಿರ್ವಹಣಾ ವೈಫಲ್ಯ ಆರೋಪ ಹೊತ್ತು ನಲುಗಿರುವ ಸಾರಥ್ಯದ ಉತ್ತರ ಪ್ರದೇಶ ಸರ್ಕಾರ, ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸುವ ಭೀತಿಯಲ್ಲಿತ್ತು. ಆದ್ರೆ, ಇದೀಗ ಯುಪಿ ಬಿಜೆಪಿಗೆ ಬಲ ಸಿಕ್ಕಂತಾಗಿದೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ಸಹಜವಾಗಿಯೇ ಇರುಸು ಮುರುಸು ಉಂಟುಮಾಡಿದೆ. ಹಾಗೆ ನೋಡಿದ್ರೆ ಇದೇನೂ ಅನಿರೀಕ್ಷಿತ ಬೆಳವಣಿಗೆ ಅಲ್ಲ. 2019ರಿಂದಲೇ ಜಿತಿನ್ ಪ್ರಸಾದ್ ಮಾನಸಿಕವಾಗಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಬಹುತೇಕ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇದೀಗ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಅದರಲ್ಲೂ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸೇರಿರೋದು ಮಹತ್ವ ಪಡೆದುಕೊಂಡಿದೆ. 2019ರ ಲೋಕಸಭೆ ಚುನಾವಣೆ ಹೊತ್ತಲ್ಲೇ ಜಿತಿನ್ ಪ್ರಸಾದ್ ಬಿಜೆಪಿ ಸೇರುತ್ತಾರೆ ಎಂಬ ಗುಸುಗುಸು ಇತ್ತಾದರೂ, ಇದೀಗ ಈ ಬೆಳವಣಿಗೆ ಸತ್ಯವಾಗಿದೆ. ಕಾಂಗ್ರೆಸ್‌ ನಾಯಕ ದಿವಂಗತ ಜಿತೇಂದ್ರ ಪ್ರಸಾದ್ ಅವರ ಪುತ್ರನಾಗಿರುವ ಜಿತಿನ್, 2004, 2009ರ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ನಡೆದ 2 ಚುನಾವಣೆಗಳಲ್ಲಿ ಸೋಲು ಕಂಡಿದ್ದರು. ಇದೀಗ ಜಿತಿನ್ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿರೋದ್ರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷ ಹಾಗೂ ನೆಹರೂ ಕುಟುಂಬ ಜಿತಿನ್ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ರಾಜಕೀಯದಲ್ಲಿ ಗುರ್ತಿಸಿಕೊಳ್ಳುವಂತೆ ಮಾಡಿತ್ತು. ಇದನ್ನು ಅವರು ಮರೆಯಬಾರದಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.