ಪ್ರಧಾನಿ ಮೋದಿ ದೇಶ ಹಾಗೂ ಅವರ ಪಕ್ಷದ ಉನ್ನತ ನಾಯಕ: ಕುತೂಹಲಕ್ಕೆ ಕಾರಣವಾದ ಶಿವಸೇನಾ ಮುಖಂಡನ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಾಗೂ ಅವರ ಪಕ್ಷದ ಉನ್ನತ ನಾಯಕ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದ್ದ ಅವರ ಹೇಳಿಕೆ ಸಾಕಷ್ಟು ಅಚ್ಚರಿಕೆ ಕಾರಣವಾಗಿದೆ.

ಪ್ರಧಾನಿ ಮೋದಿ ದೇಶ ಹಾಗೂ ಅವರ ಪಕ್ಷದ ಉನ್ನತ ನಾಯಕ: ಕುತೂಹಲಕ್ಕೆ ಕಾರಣವಾದ ಶಿವಸೇನಾ ಮುಖಂಡನ ಹೇಳಿಕೆ
Linkup
ಹೊಸದಿಲ್ಲಿ: ಪ್ರಧಾನಿ ಅವರು ದೇಶ ಮತ್ತು ಅವರ ಪಕ್ಷದ 'ಉನ್ನತ ನಾಯಕ' ಎಂದು ಸಂಸದ ಹೇಳಿದ್ದಾರೆ. ಮರಾಠಾ ಕೋಟಾ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಎರಡು ದಿನಗಳ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಳೆಗುಂದಿದೆ. ಹೀಗಾಗಿ ರಾಜ್ಯ ಚುನಾವಣೆಗಳಲ್ಲಿ ಸ್ಥಳೀಯ ನಾಯಕರನ್ನೇ ಪ್ರಮುಖ ನಾಯಕರನ್ನಾಗಿ ಬಿಂಬಿಸಲು ಆರೆಸ್ಸೆಸ್ ಚಿಂತನೆ ನಡೆಸಿದೆ ಎಂಬ ಮಾಧ್ಯಮ ವರದಿಗಳ ಕುರಿತಾದ ಪ್ರಶ್ನೆಗೆ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ಇದರ ಬಗ್ಗೆ ಹೇಳಿಕೆ ನೀಡಲು ಬಯಸುವುದಿಲ್ಲ. ನಾನು ಮಾಧ್ಯಮ ವರದಿಗಳ ಆಧಾರದಲ್ಲಿ ಮಾತನಾಡುವುದಿಲ್ಲ. ಇದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಕಳೆದ ಏಳು ವರ್ಷಗಳಲ್ಲಿ ಬಿಜೆಪಿಯು ತನ್ನ ಯಶಸ್ಸನ್ನು ನರೇಂದ್ರ ಮೋದಿ ಅವರಲ್ಲಿ ಕಂಡಿದೆ. ಪ್ರಸ್ತುತ ದೇಶ ಹಾಗೂ ಅವರ ಪಕ್ಷಕ್ಕೆ ಅವರೇ ಉನ್ನತ ನಾಯಕರು' ಎಂದು ರಾವತ್ ಹೇಳಿದ್ದಾರೆ. ಪ್ರಧಾನಿಯು ಒಂದು ನಿರ್ದಿಷ್ಟ ಪಕ್ಷಕ್ಕೆ ಅಲ್ಲ, ಇಡೀ ದೇಶಕ್ಕೆ ಸಂಬಂಧಪಟ್ಟವರಾಗಿರುತ್ತಾರೆ. ಹೀಗಾಗಿ ಅಧಿಕಾರ ಯಂತ್ರದ ಮೇಲೆ ಒತ್ತಡ ಮಾಡುವ ಕಾರಣಕ್ಕಾಗಿ ಪ್ರಧಾನಿಯಾದವರು ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸಬಾರದು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. ಮರಾಠಾ ಕೋಟಾದ ಬಗ್ಗೆ ಚರ್ಚಿಸಲು ಸಹೋದ್ಯೋಗಿಗಳ ಜತೆ ದಿಲ್ಲಿಗೆ ತೆರಳಿದ್ದ ಉದ್ಧವ್ ಠಾಕ್ರೆ, ಮೋದಿ ಅವರೊಂದಿಗೆ ಕೆಲ ಸಮಯ ಪ್ರತ್ಯೇಕವಾಗಿ ಕೂಡ ಮಾತುಕತೆ ನಡೆಸಿದ್ದರು. 'ನಾವು ರಾಜಕೀಯವಾಗಿ ಜತೆಗೆ ಇರದೆ ಇರಬಹುದು. ಆದರೆ ಇದು ನಮ್ಮ ಸಂಬಂಧ ಒಡೆದಿದೆ ಎಂದರ್ಥವಲ್ಲ' ಎಂದು ಠಾಕ್ರೆ ಹೇಳಿಕೆ ನೀಡಿದ್ದರು. ಇದು ಮತ್ತು ಶಿವಸೇನಾ ನಡುವೆ ಹಳಸಿರುವ ಸಂಬಂಧವನ್ನು ಮರು ಜೋಡಿಸುವ ಪ್ರಯತ್ನ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ವದಂತಿಯನ್ನು ಶಿವಸೇನಾ ಮುಖವಾಣಿ 'ಸಾಮ್ನಾ' ತಳ್ಳಿಹಾಕಿದೆ. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಕಾರಣಗಳಿರಲಿಲ್ಲ ಎಂದು ಅದು ಹೇಳಿದೆ.