ಮೂರು ವರ್ಷಗಳ ಜೈಲು ವಾಸದ ಬಳಿಕ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಬಿಡುಗಡೆ

ಎಲ್ಗರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿ ಮೂರು ವರ್ಷಗಳ ಬಳಿಕ ವಕೀಲೆ- ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರು ಗುರುವಾರ ಬೈಕುಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರಿಗೆ ಎನ್‌ಐಎ ನ್ಯಾಯಾಲಯ 16 ಷರತ್ತುಗಳನ್ನು ವಿಧಿಸಿದೆ.

ಮೂರು ವರ್ಷಗಳ ಜೈಲು ವಾಸದ ಬಳಿಕ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಬಿಡುಗಡೆ
Linkup
ಮುಂಬಯಿ: ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ 16 ಜನರ ಪೈಕಿ ಒಬ್ಬರಾದ ವಕೀಲೆ- ಕಾರ್ಯಕರ್ತೆ (59) ಅವರು ಮೂರು ವರ್ಷಗಳ ಜೈಲುವಾಸದ ಬಳಿಕ ಗುರುವಾರ ಬೆಳಿಗ್ಗೆ ಬಿಡುಗಡೆಯಾದರು. ಬಾಂಬೆ ಹೈಕೋರ್ಟ್ ಡಿ. 1ರಂದು ಸುಧಾ ಅವರಿಗೆ ಡಿಫಾಲ್ಟ್ ನೀಡಿತ್ತು. ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ () ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಎರಡು ದಿನಗಳ ಹಿಂದೆ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. 'ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಮಗೆ ಯಾವುದೇ ಕಾರಣ ಕಾಣಿಸುತ್ತಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ' ಎಂದು ನ್ಯಾಯಮೂರ್ತಿಗಳಾದ ಉದಯ್ ಯು ಲಲಿತ್, ಎಸ್‌ಆರ್ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರ ನ್ಯಾಯಪೀಠ ಹೇಳಿತ್ತು. ಎನ್‌ಐಎ ನ್ಯಾಯಾಲಯ ಬುಧವಾರ ಜಾಮೀನು ಷರತ್ತುಗಳನ್ನು ನಿಗದಿಪಡಿಸಿದ ಬಳಿಕ ಬೈಕುಲ್ಲಾ ಮಹಿಳಾ ಕಾರಾಗೃಹದಿಂದ ಸುಧಾ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಡಿಫಾಲ್ಟ್ ಜಾಮೀನು (Default ) ಪಡೆದ ಮೊದಲ ಆರೋಪಿ ಎನಿಸಿದ್ದಾರೆ. ಬಂಧನಕ್ಕೊಳಗಾಗಿ 60, 90 ಹಾಗೂ 180 ದಿನಗಳ ತನಿಖೆಗೆ ನೀಡಿದ ಗರಿಷ್ಠ ದಿನಗಳು ಮುಗಿದ ಬಳಿಕ ಮತ್ತು ಯಾವುದೇ ಆರೋಪಪಟ್ಟಿ ಸಲ್ಲಿಕೆಯಾಗದೆ ಇದ್ದಾಗ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹತೆ ಪಡೆಯುತ್ತಾರೆ. ಇದನ್ನು ಡಿಫಾಲ್ಟ್ ಜಾಮೀನು ಎಂದು ಕರೆಯಲಾಗುತ್ತದೆ. ಸುಧಾ ಅವರಿಗೆ 16 ಷರತ್ತುಗಳನ್ನು ವಿಧಿಸಿ ವಿಶೇಷ ಎನ್‌ಐಎ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ. ಅವರು 50 ಸಾವಿರ ರೂ ನಗದು ಭದ್ರತಾ ಠೇವಣಿ ಇರಿಸಬೇಕು. ಅವರು ಮುಂಬಯಿಯಲ್ಲಿ ಈ ನ್ಯಾಯಾಲಯದ ವ್ಯಾಪ್ತಿಯ ಒಳಗಿನ ಪ್ರದೇಶದಲ್ಲಿ ವಾಸಿಸಬೇಕು. ನ್ಯಾಯಾಲಯದ ಪೂರ್ವ ಅನುಮತಿ ಇಲ್ಲದೆ ಮುಂಬಯಿಯಿಂದ ಹೊರಗೆ ಹೋಗುವಂತಿಲ್ಲ ಎಂದು ಆದೇಶಿಸಲಾಗಿದೆ. ಸುಧಾ ಅವರು ನಿರಂತರವಾಗಿ ವಿಚಾರಣೆಗಳಿಗೆ ಹಾಜರಾಗಬೇಕು. ಸುಧಾ ಅವರ ಕನಿಷ್ಠ ಮೂರು ರಕ್ತ ಸಂಬಂಧಿಕರ ವಾಸ ಮತ್ತು ಕೆಲಸದ ವಿಳಾಸಗಳ ವಿವರ ಸಲ್ಲಿಸಬೇಕು. ಅವರು ಸಲ್ಲಿಸಿದ್ದ ವಿವರಗಳ ದೃಢೀಕರಣಕ್ಕಾಗಿ ದಾಖಲೆಗಳನ್ನು ನೀಡಬೇಕು. ಅಲ್ಲದೆ, ಕೋರ್ಟ್ ಮುಂದೆ ಬಾಕಿ ಇರುವ ವಿಚಾರಣೆಗಳ ಕುರಿತು ಯಾವುದೇ ಮಾಧ್ಯಮದ ಎದುರು ಯಾವುದೇ ಹೇಳಿಕೆಗಳನ್ನು ನೀಡುವಂತಿಲ್ಲ. ಆರೋಪಿ ವಾಸಿಸುವ ಜಾಗದಲ್ಲಿ ಸಮೀಪದ ಸಂಬಂಧಿಕರ ಹೊರತು ಸಂದರ್ಶಕರು ಸೇರುವಂತಿಲ್ಲ. ಅವರ ವಿರುದ್ಧ ಆರೋಪಕ್ಕೆ ಹೋಲುವ ಚಟುವಟಿಕೆಗಳಲ್ಲಿ ಮತ್ತೆ ಭಾಗವಹಿಸುವಂತಿಲ್ಲ ಎಂದು ಸೂಚಿಸಲಾಗಿದೆ. 15 ಆರೋಪಿಗಳ ಪೈಕಿ ಸುಧಾ ಭಾರದ್ವಾಜ್, ಜಾಮೀನು ಪಡೆದ ಎರಡನೇ ಆರೋಪಿಯಾಗಿದ್ದಾರೆ. ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅನಾರೋಗ್ಯದ ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದರು. 2020ರ ಅಕ್ಟೋಬರ್ 8ರಿಂದ ತಲೋಜಾ ಜೈಲಿನಲ್ಲಿದ್ದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ (84) ಜುಲೈನಲ್ಲಿ ಮೃತಪಟ್ಟಿದ್ದರು. ಸುಧಾ ಅವರನ್ನು 2018ರ ಆಗಸ್ಟ್ 28ರಂದು ಬಂಧಿಸಲಾಗಿತ್ತು. ಬಳಿಕ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. 2018ರ ಅ. 27ರಂದು ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. 2017ರ ಡಿ. 31ರಂದು ಎಲ್ಗರ್ ಪರಿಷದ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು.