ಆನ್‌ಲೈನ್‌ ಕ್ಲಾಸ್‌ ವೇಳೆ ಟೀಚರ್‌ಗೆ ಮರ್ಮಾಂಗ ಪ್ರದರ್ಶನ; ವಿಕೃತಿ ಮೆರೆದ ಅಪ್ರಾಪ್ತ ವಿದ್ಯಾರ್ಥಿಯ ಬಂಧನ

ಪಾಠ ಆಲಿಸುವ ನಡುವೆ ಅಪ್ರಾಪ್ತ ಬಾಲಕ ದಿಢೀರನೆ ಪ್ಯಾಂಟ್‌ ಕಳಚಿ ವಿಕೃತಿ ಪ್ರದರ್ಶನಕ್ಕೆ ಇಳಿಯುತ್ತಿದ್ದ. ಮೊದಲು ತಾಳ್ಮೆಯಿಂದಲೇ ಟೀಚರ್‌ ಬುದ್ಧಿ ಹೇಳಿದ್ದರು. ಆದರೂ ಕೇಳದ ಪುಂಡ ಶಿಷ್ಯ ಮಾರ್ಚ್ 2ರವರೆಗೆ ತನ್ನ ಕಪಿಚೇಷ್ಟೆ ಮುಂದುವರಿಸಿದ. ಕೊನೆಗೆ ಟೀಚರ್‌ ದೂರಿನ ಮೇರೆಗೆ ಶಿಷ್ಯನ ಬಂಧನವಾಗಿದೆ.

ಆನ್‌ಲೈನ್‌ ಕ್ಲಾಸ್‌ ವೇಳೆ ಟೀಚರ್‌ಗೆ ಮರ್ಮಾಂಗ ಪ್ರದರ್ಶನ; ವಿಕೃತಿ ಮೆರೆದ ಅಪ್ರಾಪ್ತ ವಿದ್ಯಾರ್ಥಿಯ ಬಂಧನ
Linkup
ಮುಂಬಯಿ: ಕೋವಿಡ್‌ ಕಷ್ಟ ಕಾಲದಲ್ಲಿ ಆನ್‌ಲೈನ್‌ ತರಗತಿ ಮೊರೆ ಹೋಗಿರುವ ವಿದ್ಯಾರ್ಥಿಗಳು, ಪಾಠ ಆಲಿಸುವ ಜತೆಗೆ ಅನೇಕ ಚೇಷ್ಟೆ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಮುಂಬಯಿನ ತಮ್ಮ ನಿವಾಸದಲ್ಲಿ ಕುಳಿತು ಪಾಠ ಮಾಡುತ್ತಿದ್ದ ಲೇಡಿ ಟೀಚರ್‌ವೊಬ್ಬರಿಗೆ ರಾಜಸ್ಥಾನದ ಶಿಷ್ಯನೊಬ್ಬ ಆನ್‌ಲೈನ್‌ನಲ್ಲಿಯೇ ಶಿಶ್ನ ತೋರಿಸಿ ವಿಕೃತಿ ಮೆರೆದು ಸಿಕ್ಕಿ ಬಿದ್ದಿದ್ದಾನೆ. ಜೈಸಲ್ಮೇರ್‌ನ ತನ್ನ ಪೋಷಕರ ನಿವಾಸದಲ್ಲಿ ಉಳಿದು ಆನ್‌ಲೈನ್‌ ಪಾಠ ಆಲಿಸುತ್ತಿದ್ದ 15 ವರ್ಷದ ವಿದ್ಯಾರ್ಥಿ, ಕಳೆದ ಫೆಬ್ರವರಿಯಿಂದಲೇ ಚೇಷ್ಟೆ ಶುರು ಮಾಡಿದ್ದ ಎಂದು ತಿಳಿದು ಬಂದಿದೆ. ಪಾಠ ಆಲಿಸುವ ನಡುವೆ ದಿಢೀರನೆ ಪ್ಯಾಂಟ್‌ ಕಳಚಿ ವಿಕೃತಿ ಪ್ರದರ್ಶನಕ್ಕೆ ಇಳಿಯುತ್ತಿದ್ದ. ಮೊದಲು ತಾಳ್ಮೆಯಿಂದಲೇ ಟೀಚರ್‌ ಬುದ್ಧಿ ಹೇಳಿದ್ದರು. ಆದರೂ ಕೇಳದ ಪುಂಡ ಶಿಷ್ಯ ಮಾರ್ಚ್ 2ರವರೆಗೆ ತನ್ನ ಕಪಿಚೇಷ್ಟೆ ಮುಂದುವರಿಸಿದ. ಕೊನೆಗೆ ಟೀಚರ್‌ ದೂರಿನ ಮೇರೆಗೆ ಶಿಷ್ಯನ ಬಂಧನವಾಗಿದೆ. ‘ನಾನು ತಮಾಷೆಗೆ ಆ ರೀತಿ ಮಾಡಿದೆ. ತಪ್ಪಾಯ್ತು’ ಎಂದು ಈಗ ಆರೋಪಿ ಗೋಗರೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.