ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ನೆಡುಮುಡಿ ವೇಣು ವಿಧಿವಶ; ದೊಡ್ಡ ನಷ್ಟ ಎಂದ ಚಿತ್ರರಂಗ

ಮೂರು ಬಾರಿ ರಾಷ್ಟ್ರ ಪ್ರಶಸ್ತಿ, 6 ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದ ಖ್ಯಾತ ತಮಿಳು, ಮಲಯಾಳಂ ನಟ ನೆಡುಮುಡಿ ವೇಣು ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಆ ಕುರಿತು ಮಾಹಿತಿ ಇಲ್ಲಿದೆ.

ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ನೆಡುಮುಡಿ ವೇಣು ವಿಧಿವಶ; ದೊಡ್ಡ ನಷ್ಟ ಎಂದ ಚಿತ್ರರಂಗ
Linkup
ವಿಜೇತ ನಟ 73ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಂದು (ಸೋಮವಾರ) ನಿಧನರಾಗಿದ್ದಾರೆ. ಲಿವರ್ ಸಮಸ್ಯೆಯಿಂದ ಅವರ ಆರೋಗ್ಯ ಚಿಂತಾಜನಕವಾಗಿತ್ತು, ಹೀಗಾಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ನೆಡುಮುಡಿ ವೇಣು ನಟನೆ ರಂಗಭೂಮಿ ಕಲಾವಿದರಾಗಿ ನೆಡುಮುಡಿ ವೇಣು ಅವರು 'ಕವಾಲಂ ನಾರಾಯಣ ಪಣಿಕೆರ್' ನಾಟಕದ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. 1978ರಲ್ಲಿ ತೆರೆಕಂಡ ಜಿ ಅರವಿಂದನ್ ನಿರ್ದೇಶನದ ಸಿನಿಮಾ 'ತಂಬು' ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ನೆಡುಮುಡಿ ವೇಣು ಸಕ್ರಿಯವಾಗಿ ಕೆಲಸ ಮಾಡಿದ್ದು, ಅವರು ನಟಿಸಿದ ಸಿನಿಮಾಗಳ ಸಂಖ್ಯೆ 500ಕ್ಕೂ ಅಧಿಕವಾಗಿದೆ. ನೆಡುಮುಡಿ ಅಭಿನಯಕ್ಕೆ ಫಿದಾ ಆಗಿದ್ದ ತಮಿಳು, ಮಲಯಾಳಂ ಚಿತ್ರರಂಗ ಇಷ್ಟು ವರ್ಷಗಳ ಕಾಲ ಅದ್ಭುತವಾದ ನಟನೆ ಮೂಲಕ ಅವರು ಹೆಸರು ಮಾಡಿದ್ದರು. ಗಂಭೀರವಾದ ಪಾತ್ರಗಳಿಂದ ಹಿಡಿದು ಕಾಮಿಡಿ ಪಾತ್ರವನ್ನು ಕೂಡ ನೆಡುಮುಡಿ ಮಾಡುತ್ತಿದ್ದರು. ಹೀಗಾಗಿ ಅವರನ್ನು ತಮಿಳು, ಮಲಯಾಳಂ ಚಿತ್ರರಂಗ ಪ್ರಶಂಸೆ ಮಾಡುತ್ತದೆ. ಮೂರು ರಾಷ್ಟ್ರ ಪ್ರಶಸ್ತಿ, 6 ರಾಜ್ಯ ಪ್ರಶಸ್ತಿ ಪಡೆದಿದ್ದ ನೆಡುಮುಡಿ ವೇಣು 'ಕಟ್ಟಾಥೆ ಕಿಲಿಕ್ಕೂಡು', 'ತೀರ್ಥಂ', 'ಶ್ರುತಿ', 'ಅಂಬದ ಜಾನೆ', 'ಒರು ಕಥಾ ಒರು ನುನ್ನಕ್ಕಥಾ', 'ಸವಿದಾಮ್', 'ಅಂಗಾನೆ ಒರು ಅವಧಿಕ್ಕಲಥು' ಸಿನಿಮಾಗಳಲ್ಲಿ ಸಿನಿಮಾಳಲ್ಲಿ ನೆಡುಮುಡಿ ವೇಣು ಅವರು ಸ್ಕ್ರೀನ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ನೆಡುಮುಡಿ ವೇಣು ಅವರಿಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ, 6 ಬಾರಿ ರಾಜ್ಯ ಪ್ರಶಸ್ತಿ ಸಿಕ್ಕಿದೆ. 'chaurahen' ಎಂಬ ಇಂಗ್ಲಿಷ್ ಸಿನಿಮಾದಲ್ಲಿಯೂ ನೆಡುಮುಡಿ ನಟಿಸಿದ್ದರು. Thenmavin Kombath', ' Bharatham', ‘Thanmathra’ ಮುಂತಾದ ಸಿನಿಮಾಗಳಲ್ಲಿ ಮೋಹನ್‌ಲಾಲ್ ಜೊತೆ ನೆಡುಮುಡಿ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಇತ್ತೀಚೆಗೆ ನೆಡುಮುಡಿ ಅಭಿನಯದ Aanum Pennum ಸಿನಿಮಾ ರಿಲೀಸ್ ಆಗಿತ್ತು. ನೆಡುಮುಡಿ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗ ಮಲಯಾಳಂ ನಟ ಪೃಥ್ವಿರಾಜ್ ಅವರು ಟ್ವೀಟ್ ಮಾಡಿ ನೆಡುಮುಡಿ ನಿಧನಕ್ಕೆ ಸಂತಾಪ ಸೂಚಿಸಿದ್ದು, ನಿರ್ದೇಶಕ ಸಂಗೀತ ಶಿವನ್ ಕೂಡ ಮರುಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮಲಯಾಳಂ ಚಿತ್ರರಂಗದವರು ನೆಡುಮುಡಿ ನಿಧನ ದೊಡ್ಡ ನಷ್ಟ ಎಂದು ಹೇಳುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆಲೆಬ್ರಿಟಿಗಳೂ ಸೇರಿದಂತೆ ಚಿತ್ರರಂಗ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ನಿಧನಕ್ಕೆ ಸಂತಾಪ ಸೂಚಿಸುತ್ತಿದೆ. ಕನ್ನಡ ಧಾರಾವಾಹಿ, ಸಿನಿಮಾ ನಟ ಉಮೇಶ್ ಹೆಗಡೆ ಕೂಡ ನಿಧನರಾಗಿದ್ದು, ಇಂದು (ಅ. 11) ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.