ಮಾಲಾಶ್ರೀಗೆ ಫೋನ್ ಮಾಡಿ ಮಾತನಾಡೋಕೆ ಒಂಥರ ಬೇಜಾರು ಆಗತ್ತೆ: ನಟ ಶಿವರಾಜ್‌ಕುಮಾರ್

ಕನಸಿನ ರಾಣಿ ಮಾಲಾಶ್ರೀ ಪತಿ ರಾಮು ಅವರು ಕೊರೊನಾ ವೈರಸ್ ಸೋಂಕಿಗೆ ತಗುಲಿ ಕೆಲ ತಿಂಗಳುಗಳ ಹಿಂದೆ ನಿಧನರಾದರು. ಅವರ ಕುರಿತು ನಟ ಶಿವರಾಜ್‌ಕುಮಾರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಮಾಲಾಶ್ರೀಗೆ ಫೋನ್ ಮಾಡಿ ಮಾತನಾಡೋಕೆ ಒಂಥರ ಬೇಜಾರು ಆಗತ್ತೆ: ನಟ ಶಿವರಾಜ್‌ಕುಮಾರ್
Linkup
ಕೊರೊನಾ ಎರಡನೇ ಅಲೆಗೆ ಕರ್ನಾಟಕ ಸೇರಿ ಅನೇಕ ರಾಜ್ಯಗಳು ತತ್ತರಿಸಿ ಹೋಗಿವೆ, ಸಾಕಷ್ಟು ಜನರನ್ನು ಕಳೆದುಕೊಂಡಿದ್ದೇವೆ. ನಟಿ ಗಂಡ ನಿರ್ಮಾಪಕ ಕೂಡ ಕೊರೊನಾದಿಂದ ಸಾವನ್ನಪ್ಪಿದ್ದರು. ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಸಿನಿಮಾಗಳನ್ನು ನೀಡಿದ್ದ ರಾಮು ಹಾಗು ದೊಡ್ಮನೆ ಕುಟುಂಬಕ್ಕೆ ಉತ್ತಮ ಬಾಂಧವ್ಯವಿತ್ತು. ರಾಮು, ಥಿಯೇಟರ್, ಕೊರೊನಾ ಸಮಸ್ಯೆ ಕುರಿತು ಹ್ಯಾಟ್ರಿಕ್ ಹೀರೋ ಡಾ ಅವರು ಮಾಧ್ಯಮಗಳ ಪ್ರಶ್ನೆಗೆ ನೀಡಿದ್ದಾರೆ. ರಾಮು ಅವರನ್ನು ಕಳೆದುಕೊಂಡಿದ್ದೇವೆ............ ಪ್ರತಿನಿತ್ಯ ರಾಮು ಬಗ್ಗೆ ಮಾತನಾಡುತ್ತಿರುತ್ತೇವೆ. ಯಾವ ರೀತಿ ಸಿನಿಮಾ ಮಾಡಬೇಕು, ಹೇಗೆ ಅದ್ದೂರಿಯಾಗಿ ಮಾಡಬೇಕು ಎಂದು ತೋರಿಸಿದ್ದು ರಾಮು. ರಾಮು ಧೈರ್ಯ, ಚಿತ್ರರಂಗದ ಬಗೆಗಿನ ಕಾಳಜಿ ಮೆಚ್ಚಬೇಕು. ನಮಗೂ ಅವರಿಗೂ ಹತ್ತಿರದ ಸಂಬಂಧ ಇತ್ತು, ರಾಮು ಆತ್ಮಕ್ಕೆ ಶಾಂತಿ ಸಿಗಲಿ. ರಾಮು ಅವರು ಏನು ಬಿಟ್ಟು ಹೋಗಿದ್ದಾರೋ ಅದನ್ನು ಫಾಲೋ ಮಾಡೋಣ. ರಾಮು ಹೋಗಿರೋದು ತುಂಬ ದೊಡ್ಡ ನಷ್ಟ. ಚಿತ್ರರಂಗದಲ್ಲಿ ಹೇಗೆ ಅದ್ದೂರಿ ಸಿನಿಮಾ ಮಾಡಬೇಕು ಎಂದು ತೋರಿಸಿಕೊಟ್ಟರು. ಡಿಟಿಎಸ್ ಸಿನಿಮಾ, Ak47 ಸಿನಿಮಾ ಮಾಡಿದ್ದು ದೊಡ್ಡ ವಿಷಯ. ಅವರಿಗೆ ಧೈರ್ಯ ಜಾಸ್ತಿ, ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮಾಲಾಶ್ರೀ ನೆನಪು ಮಾಡಿಕೊಂಡರೆ ಬೇಸರ ಆಗತ್ತೆ., ಫೋನ್ ಮಾಡಿ ಮಾತನಾಡೋಕೂ ಒಂಥರ ಆಗತ್ತೆ. ನಾವು ಅವರನ್ನು ಖುಷಿಯಿಂದ ನೋಡಿ ಅಭ್ಯಾಸ. Ak47 ಸಿನಿಮಾ ವೇಳೆ ಮಾಲಾಶ್ರೀ ಕೂಡ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದರು. ನಾವೆಲ್ಲ ಅವರ ಜೊತೆಗಿದ್ದೇವೆ, ಬೆಂಬಲ ನೀಡುತ್ತೇವೆ ಎಂದು ಹೇಳ್ತೀವಿ. ಥಿಯೇಟರ್ ಆರಂಭವಾಗುವ ಬಗ್ಗೆ ಏನು ಹೇಳ್ತೀರಾ? ಜನರಿಗೆ, ಚಿತ್ರರಂಗ ಯಾರಿಗೂ ಅನ್ಯಾಯ ಆಗಬಾರದು, ಸರ್ಕಾರದ ಮೇಲೆ ಒತ್ತಡ ಹಾಕೋಕೆ ಆಗಲ್ಲ. ವೈದ್ಯರ, ಸರ್ಕಾರದ ಸಲಹೆ ತೆಗೆದುಕೊಳ್ಳಬೇಕು, ನಾವು ನಿಯಮ ಪಾಲಿಸಬೇಕು. ಇನ್ನಷ್ಟು ಕೊರೊನಾ ಕಮ್ಮಿ ಆಗಲಿ. ನಾನು ಮಾತನಾಡಿದ್ದು ಕೇಳಬೇಕು ಎಂದು ಈಗ ಮಾಸ್ಕ್ ತೆಗೆದು ಮಾತನಾಡುತ್ತಿದ್ದೇನೆ. ಹೀಗಾಗಿ ನಿಮ್ಮ ಹಾಗೂ ನಿಮ್ಮ ಮನೆಯವರಿಗಾಗಿ ಮಾಸ್ಕ್ ಹಾಕಿಕೊಳ್ಳಿ, ಸ್ಯಾನಿಟೈಸ್ ಮಾಡಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಚಿತ್ರರಂಗದ ಮುಂದಿನ ದಿನಗಳ ಬಗ್ಗೆ ಏನು ಹೇಳ್ತೀರಾ? ಎಲ್ಲರಿಗೂ ಕಷ್ಟ ಇದೆ, ದೇವರು ಅನ್ನುವವನು ಬಿಡಲ್ಲ. ನಾವು ಭರವಸೆ ಕಳೆದುಕೊಳ್ಳಬಾರದು. ಒಂದು ಕಳೆದುಕೊಂಡಾಗ ಇನ್ನೊಂದು ಒಳ್ಳೆಯದನ್ನು ಮಾಡಬಹುದು. ಏನೋ ಒಂದು ಪವಾಡ ಆಗಬಹುದು. ನಾವು ನಮ್ಮ ವಿಲ್ ಪವರ್ ಹೆಚ್ಚು ಮಾಡಿಕೊಳ್ಳೋಣ. ನಮ್ಮ ಚಿತ್ರರಂಗ ಅಂದರೆ ಸ್ವಾರ್ಥ ಆಗತ್ತೆ, ಸಾಕಷ್ಟು ಕುಟುಂಬಗಳು ಮನೆಯ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಚಿತ್ರರಂಗ ಕೂಡ ಸಾಕಷ್ಟು ಕಲಾವಿದರನ್ನು ಕಳೆದುಕೊಂಡಿದೆ. ಎರಡನೇ ಅಲೆ ಈ ಮಟ್ಟಕ್ಕೆ ಅಟ್ಯಾಕ್ ಮಾಡಿದೆ ಅಂದರೆ ನಾವು ಎಲ್ಲೋ ಒಂದು ಕಡೆ ಇನ್ನಷ್ಟು ಮುನ್ನಚ್ಚರಿಕೆ ವಹಿಸಬೇಕು. ನಾವು ಅವರನ್ನು ಕಳೆದುಕೊಂಡು ಬೇಜಾರು ಆಗತ್ತೆ, ಆದರೆ ಆ ಕುಟುಂಬಗಳು ಹೇಗೆ ತಡೆದುಕೊಳ್ಳಬೇಕು. ನಾವೆಲ್ಲ ಜೊತೆಗಿದ್ದೇವೆ ಅಂತ ಧೈರ್ಯ ಕೊಡಬಹುದು