ಭಾರತ ಮೂಲದ ಪರಾಗ್‌ ಅಗರ್ವಾಲ್‌ 'ಟ್ವಿಟರ್‌'ನ ನೂತನ ಸಿಇಒ: ಜಾಕ್‌ ಡಾರ್ಸಿ ರಾಜೀನಾಮೆ!

ಸಾಮಾಜಿಕ ಜಾಲತಾಣ ಟ್ವಿಟರ್‌ ಮುಖ್ಯ ಕಾಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಜಾಕ್‌ ಡಾರ್ಸಿ ರಾಜೀನಾಮೆ ನೀಡಿದ್ದು, ಭಾರತೀಯ ಮೂಲದ ಪರಾಗ್‌ ಅಗರ್ವಾಲ್‌ ಅವರು ನೂತನ ಸಿಇಒ ಆಗಿ ಆಯ್ಕೆಯಾಗಿದ್ದಾರೆ.

ಭಾರತ ಮೂಲದ ಪರಾಗ್‌ ಅಗರ್ವಾಲ್‌ 'ಟ್ವಿಟರ್‌'ನ ನೂತನ ಸಿಇಒ: ಜಾಕ್‌ ಡಾರ್ಸಿ ರಾಜೀನಾಮೆ!
Linkup
ಸ್ಯಾನ್‌ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ಟ್ವಿಟರ್‌ ಮುಖ್ಯ ಕಾಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಭಾರತೀಯ ಮೂಲದ ಅವರು ನೂತನ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ''ಸಂಸ್ಥೆಯು ಸಂಸ್ಥಾಪಕರ ಹೊರತಾಗಿಯೂ ಮುಂದುವರಿಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ನಾನು ಟ್ವಿಟರ್‌ ತೊರೆಯಲು ನಿರ್ಧರಿಸಿದ್ದೇನೆ. ಪರಾಗ್‌ ಅಗರ್ವಾಲ್‌ ಅವರು ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸವಿದೆ,'' ಎಂದು ಜಾಕ್‌ ಡಾರ್ಸಿ ತಿಳಿಸಿದ್ದಾರೆ. ಆದಾಗ್ಯೂ, ಸಂಸ್ಥೆಯ ನಿರ್ದೇಶಕರ ಮಂಡಳಿಯಲ್ಲಿ 2022ರವರೆಗೆ ಜಾಕ್‌ ಮುಂದುವರಿಯಲಿದ್ದಾರೆ. ಭಾರತೀಯ ಮೂಲದ ಪರಾಗ್‌ ಅಗರ್ವಾಲ್‌ ಅವರು 2017ರಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಅವರಿಗೆ ಸಿಇಒ ಸ್ಥಾನ ನೀಡಲಾಗಿದ್ದು, ನಿರ್ದೇಶಕರ ಮಂಡಳಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಅಲ್ಲದೆ, ಕಂಪನಿಯ ನಿರ್ದೇಶಕರ ಮಂಡಳಿ ಅಧ್ಯಕ್ಷರನ್ನಾಗಿ ಬ್ರೆಟ್‌ ಟೇಲರ್‌ ಅವರನ್ನು ನೇಮಿಸಲಾಗಿದೆ. ನಾನು ಈ ಜವಾಬ್ದಾರಿಯುತ ಸ್ಥಾನ ಅಲಂಕರಿಸಲು ವಿನಮ್ರನಾಗಿದ್ದೇನೆ. ಮತ್ತು ನಿಮ್ಮ ಮಾರ್ಗದರ್ಶನ ಮತ್ತು ನಿಮ್ಮ ಸ್ನೇಹಕ್ಕಾಗಿ ಕೃತಜ್ಞನಾಗಿದ್ದೇನೆ. ನೀವು ಕಟ್ಟಿ ಬೆಳೆಸಿರುವ ಈ ಸೇವೆ, ಸಂಸ್ಕೃತಿ ಮತ್ತು ಕಂಪನಿಯನ್ನು ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಎಂದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪನಿ ಟ್ವಿಟ್ಟರ್‌ನ ಹೊಣೆ ಹೊತ್ತ ನಂತರ ಪರಾಗ್ ಅವರು ಜಾಕ್‌ ಡಾರ್ಸಿಗೆ ಬರೆದ ಸಂದೇಶದಲ್ಲಿ ತಿಳಿಸಿದ್ದಾರೆ. ಪರಾಗ್‌ ಅಗರ್ವಾಲ್‌ ಅವರು ಟ್ವಿಟ್ಟರ್‌ಗೆ ಸೇರುವ ಮೊದಲು ಮೈಕ್ರೋಸಾಫ್ಟ್, ಯಾಹೂ ಮತ್ತು AT&T ಲ್ಯಾಬ್ಸ್‌ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಪರಾಗ್ ಅಗರವಾಲ್ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ ಟೆಕ್ ಅಧ್ಯಯನ ಮಾಡಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ವರದಿಗಳ ಪ್ರಕಾರ ಪರಾಗ್ ಅಗರವಾಲ್ ಅವರು ಅಂದಾಜು $1.52 ಮಿಲಿಯನ್ ಮೊತ್ತದ ನಿವ್ವಳ ಸಂಪತ್ತು ಹೊಂದಿದ್ದಾರೆ.